ನೆಗಡಿಯ ಮಹಿಮೆ

4.77778

ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು

ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು

ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ

ಎಲ್ಲರ ಕಾಡುವ ವೈರಿ ಅದೇ ನೆಗಡಿ


ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ

ಇದು ನನ್ನ ಕರವಸ್ತ್ರವನ್ನೆಲ್ಲಾ ಒದ್ದೆ ಮಾಡಿಬಿಡುತ್ತದೆ

ಕಣ್ಣನ್ನು ಕೆಂಪಗೆ ಮಾಡುವುದಲ್ಲದೇ

ಒಮ್ಮೊಮ್ಮೆ ಅದರಿಂದಲೂ ನೀರ ಹರಿಸುತ್ತದೆ


ಕಬ್ಬಿಣವನ್ನು ತಗ್ಗಿಸಲು ಕೆಂಡ ಬಳಸುವಂತೆ

ನನ್ನ ತಗ್ಗಿಸಲು ಇದು ಮೂಗನ್ನೆ ಕೆಂಡ ಮಾಡಿಕೊಳ್ಳುತ್ತದೆ

ಸುಡುವ ಕೆಂಡವ ತುಳಿಯಬಹುದು

ಆದರೆ ಉರಿವ ಮೂಗಿನ ಸ್ಥಿತಿ ಹೇಳತೀರದು

ನೆಗಡಿಯ ಮಹಿಮೆಯನು ಮರೆಯಾಲಾಗದು.|


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (9 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಸೋಮೇಶ್, ನಕ್ಕು ಬಿಟ್ಟೆ. ನಗಿಸುವಲ್ಲಿ ಯಶಶ್ವಿಯಾದಿರಿ ನೀವು. ಧನ್ಯವಾದಗಳು. :) :) :) :D

ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆ ನನ್ನನ್ನು ನಗಿಸಲಿಲ್ಲ.....ಹಾರೈಸಿತು..... ಸಾಹಿತ್ಯ ಎಲ್ಲರಿಗೂ ಅರ್ಥವಾಗಬಹುದು....... ಆದರೆ ಅದರ ಒಳಗೆ ಏನಿದೆ ಎಂದು ಒಬ್ಬ ಸಾಹಿತಿಗೆ ಮಾತ್ರ ಅರ್ಥವಾಗುತ್ತದೆ ನೀವು ನಿಜವಾದ ಸಾಹಿತಿಯಾಗಿಬಿಟ್ರಿ....