ನೀ ಬೆರಸದ ಭೇದ

0

ಸಮಾನತೆಯೇ ಉಸಿರಾಗಿದ್ದ
ಅಲ್ಲಮನ 'ಅನುಭವ' ದೊಳಗೆ
ನೀ ಬಂದು ಕೂತು 
ದೃಷ್ಠಿ ಹಾಯಿಸಿದ ಘಳಿಗೆ
ಅಲ್ಲಿ, 
ಜಾತಿ, ಮತ, ಭೇದಗಳು 
ಒಟ್ಟಾಗಿ
ನಿನ್ನನುಭವದೊಳಗೆ 
ಬಟ್ಟಿ ಇಳಿದು 
ಪ್ರಸಾದವಾದವೋ..
ವೈವಿದ್ಯತೆಗಳಲ್ಲಿ
ಪೂಜೆ ಪಡೆಯುತ್ತಿದ್ದ
ಮುಕ್ಕೋಟಿ ದೇವತೆಗಳು
ನಿನ್ನ ಸುಜ್ಞಾನದೊಂದಿಗೆ
ಬೆರೆಯಲಾಗದೆ ಮಣ್ಣಾದವೋ...
ಜನತೆ 
ವಚನಾಮೃತದೊಳಗೆ ಮುಳುಗಿ
ಅಂತರಂಗದ ಕಲ್ಮಶ ತೊಳೆದು
ಸಮಾನತೆಯ ಲಿಂಗವ ತೊಟ್ಟು
ನೀ ತೋರಿದ ದಾರಿಯಲ್ಲೇ ನಡೆಯುತ್ತಾ..
ಇವನಾರವ.....
ಇವನಾರವ..... ಎನ್ನದೆ
ಬದುಕುತ್ತಿದ್ದರೋ.....
ಗುರುವೇ.
ಈಗ ಕಾಲ ಬದಲಾಗಿದೆ
ಲಿಂಗ ಸೂಚಕವಾಗಿ
ನೀನೆ ದೈವವೇ ಆಗಿ
ಮುಕ್ಕೋಟಿ ದೇವತೆಗಳು 
ನಿನ್ನ ಗುಡಿಯೋಳಗೆ
ಸಮಾನತೆ ಪಡೆದಿವೆ
ಧೂಪ, ದೀಪ, ಕರ್ಪೂರಗಳು 
ಬೆಳಗಿವೆ.
ತಂದೆ
ಇವನಾರವ.? 
ಇವನಾರವ.? 
ಎನ್ನುವ ಕಾಲ ಬಂದಿದೆ
ಕ್ಷೆಮಿಸು
- ಪ್ರಸಾದ್ ಅರಳೀಪುರ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.