ನೀ ನೋವ ಸುಖಿಸಿದೆ !!!

4.666665

ಕೇಳದೆ ಹೇಳಿದ‌ ಒಲವಿನ‌ ಮಾತದು !

ಹೇಳದೆ ಇದ್ದರೆ ಕಾಡುವ‌ ಕಥೆಯಿದು .

ಮನಸಲೇ ಬೇಡಿದ‌ ಸುಮಧುರ‌ ವ್ಯಥೆಯಿದು ..

ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ...

 

ಅಂದು ಯಾಕಾಗಿ ನನ್ನ ಹುಡುಕಿದೆ ನೀನು ?

ಸುಮ್ಮನೆ ಭಾವನೆ ಕಲಕಿದೆ ಏನು ....

ಒಂದು ಬಾರಿಯೂ ಹೇಳಲಿಲ್ಲ ನೀನು !

ಆದರೂ ಬಿಮ್ಮನೆ ಕಾಮನೆ ತುಂಬಿದೆ ಏನು !!!

 

ಮೋಸ‌ ಮಾಡಲೇಕೆ ನನ್ನ‌ ಬಯಸಿದೆ ?

ಸುಮ್ಮನಿರದೆ ನನ್ನ‌ನ್ಯಾಕೆ ಉಳಿಸಿದೆ ??

ಕಾಯಬೇಕು ಎಂದರಲ್ಲೇ ಅಳಿಸಿದೆ .

ನೋವ‌ ನುಂಗಿ ಬಾಳ ಅಂಗಿ ಉರಿಸಿದೆ ..

 

ಆ ಬೆಂಕಿಯಲ್ಲಿ ಅಂಕೆಯಿರದೆ ಮುಗಿಸಿದೆ

                  ನೀ ನೋವ ಸುಖಿಸಿದೆ !!!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.