ನೀನಿಲ್ಲದೆ

4

ನೀನಿಲ್ಲದೆ ನಾ ಹೇಗೆ ಬದುಕಲಿ

ಈ ಜಗದಲ್ಲಿ

ನೀನಿದ್ದರೆ ನನ್ನ ಬದುಕು ಚಂದ

ಈ ನನ್ನ ಬಾಳಿನಲ್ಲಿ

 

ನೀನಿಲ್ಲದೆ ನಾ ಹೇಗೆ ಉಸಿರಾಡಲಿ

ಈ ಜಗದಲ್ಲಿ

ನೀನಿದ್ದರೆ ನನ್ನ ಪ್ರಾಣ ಜೀವಂತ

ಈ ನನ್ನ ಬದುಕಿನಲ್ಲಿ

 

ನೀನಿಲ್ಲದೆ ನಾ ಹೇಗೆ ಕನಸ್ಸು ಕಾಣಲಿ

ಈ ಜಗದಲ್ಲಿ

ನೀನಿದ್ದರೆ ನನ್ನ ಕನಸ್ಸು ಬಂಗಾರ

ಈ ನನ್ನ ಬಾಳಿನಲ್ಲಿ

 

ನೀನಿಲ್ಲದೆ ನಾ ಹೇಗೆ ಪ್ರೀತಿಸಲಿ

ಈ ಜಗದಲ್ಲಿ

ನೀನಿದ್ದರೆ ನನ್ನ ಪ್ರೀತಿಗೊಂದು ಅರ್ಥ

ಈ ನನ್ನ ಮನಸ್ಸಿಗೆ

 

ನೀನಿಲ್ಲದೆ ನಾ ಹೇಗೆ ಇರಲಿ

ಈ ಜಗದಲ್ಲಿ

ನೀನಿದ್ದರೆ ನನ್ನ ಜೋತೆಗೆ ನಾ ಜೀವಂತ

ಈ ನನ್ನ ಹೃದಯದ ಮನಸ್ಸಿಗೆ

 

                                            ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.