' ನಿಗೂಢ ಕಥೆಯನ್ನಾಧರಿಸಿ ' ......

0

ಪಾಟೀಲರ ' ನಿಗೂಢ ' ಕಥಾನಕದ ನಾಯಕ ಕೊರಗನ ಹಠಾತ್ ಕಣ್ಮರೆ ಕುರಿತು ಸಂಪದಿಗರು ಕುತೂಹಲ ವ್ಯಕ್ತ ಪಡಿಸಿದ್ದು ಇದು ನನ್ನನ್ನೂ ಸಹ ಚಿಂತನೆಗೆ ಹಚ್ಚಿತು. ಆ ಚಿಂತನೆಯ ಫಲಶೃತಿ ಈ ಲೇಖನ. ಸುಮಾರು 70-80 ವರ್ಷ ಪ್ರಾಯದ ಅನೇಕರು ವೃದ್ಧಾಪ್ಯ ಸಂಬಂಧಿತ ತೊಂದರೆಗೆ ಒಳಪಡುತ್ತಾರೆ. ವಿಶೇಷವಾಗಿ ಮರೆಗುಳಿತನ ಹೆಚ್ಚಿನವರಿಗೆ ಬಾಧಿಸುತ್ತದೆ. ಈ ಮರೆಗುಳಿತನ ( ಡಿಮೆನ್ಸಿಯಾದ ) ಘೋರ ಸ್ವರೂಪವೆ' ಅಲ್ಝಮೈರ್ 'ಕಾಯಿಲೆಯೆಂದು ವೈದ್ಯರು ಗುರುತಿಸುತ್ತಾರೆ. ಈ ಮರೆವು ರೋಗಕ್ಕೆ ಒಳಪಟ್ಟ ಹಿರಿಯ ನಾಗರಿಕರ ಬಗ್ಗೆ ಮನೆಯವರು ನಿಗಾ ಮಾಡಬೇಕಾಗುತ್ತದೆ. ಒಬ್ಬಂಟಿಯಾಗಿ ಅವರು ಪ್ರತಿದಿನ ಎಲ್ಲಾದರೂ ಹೊರಗೆ ತಿರುಗಾಡಲು ಹೋಗುತ್ತಿರುತ್ತಾರೆ, ಅಂತಹ ಸಂಧರ್ಭಗಳಲ್ಲಿ ಒಮ್ಮೆಲೆ ಈ ಮರೆವು ರೋಗದ ಬಾಧೆ ತಟ್ಟಿದರೆ ಅವರಿಗೆ ದಿನ ನಿತ್ಯದ ಜಾಗದ ಅರಿವಿಲ್ಲದೆ, ಯಾರನ್ನೂ ಗುರುತಿಸ ಲಾಗದೆ ಏಕಮುಖಿಯಾಗಿ ನಡೆದುಕೊಂಡು ಹೋಗುತ್ತಿರುತ್ತಾರೆ. ತಾನು ಎಲ್ಲಿಗೆ ಹೊರಟಿರುವೆಎಂಬ ಅರಿವಿಲ್ಲದೆ ತನ್ನತಾನೆ ಮರೆತುಕೊಂಡು ಅಲೆಮಾರಿಯಾಗಿ ಊರೂರು ಅಲೆಯುತ್ತ ತಿರುಗುವ ಇಂತಹವರ ಸಾಕಷ್ಟು ಪ್ರಕರಣಗಳ ಬಗ್ಗೆ ಕೇಳಿದ್ದೇವೆ ಮತ್ತು ಓದಿದ್ದೇವೆ. ಇಂತಹವರು ತಮ್ಮ ಹೆಸರನ್ನು ಸಹ ಮರೆತಿರುತ್ತಾರೆ, ಹೆಂಡತಿ ಮಕ್ಕಳಿಗೆ ನೀವು ಯಾರು ಎಂದು ಪ್ರಶ್ನಿಸುತ್ತಾರೆ. ಹಾಗಾಗಿ ಅತಿ ವೃದ್ಧಾಪ್ಯ ತಲುಪಿದ ವ್ಯಕ್ತಿಗಳನ್ನು ಸಣ್ಣ ಮಕ್ಕಳಂತೆಯೆ ನೋಡಿಕೊಳ್ಳಬೇಕಾಗುತ್ತದೆ. ಅವರನ್ನು ಏಕಾಂಗಿಯಾಗಿ ಎಂದೂ ಸಹ ಬಿಟ್ಟಿರಬಾರದು. ರಾತ್ರಿಯ ವೇಳೆಯೂ ಸಹ ಅವರ ಬಗ್ಗೆ ಹೆಚ್ಚಿನ ನಿಗಾವಹಿಸ ಬೇಕಾಗುತ್ತದೆ. ಅವರು ಯಾವ ತಪ್ಪನ್ನು ಮಾಡಿದರೂ ಸಿಡುಕದೆ ಅವರ ಆರೈಕೆ ಮಾಡಬೇಕಾಗುತ್ತದೆ. ನಾನು ಈ ಮರೆಗುಳಿತನದ ಬಗ್ಗೆ ಇಷ್ಟೆಲ್ಲ ಬರೆಯಬೇಕಾದ ಕಾರಣ ಪಾಟೀಲರು ಬರೆದ 'ನಿಗೂಢ' ಕಥೆಯ ಅಂತ್ಯ ನಾವೇ ಹುಡುಕಿಕೊಳ್ಳುವ ಪ್ರಸಂಗವೊದಗಿದ ಕಾರಣವಾಗಿದೆ. ಕಥೆಯಲ್ಲಿ 80 ರ ಪ್ರಾಯದ ಕೊರಗನು ತನ್ನ ಊರವರನ್ನು ತೊರೆದು ಯಾವ ವಿಷಯಾಸಕ್ತಿಯನ್ನು ಹೊಂದದೇ ವೈರಾಗ್ಯ ಜೀವನ ನಡೆಸುತ್ತಿದ್ದನು. ಒಂದು ದಿನ ಇದ್ದಕ್ಕಿದ್ದಂತೆ ಊರಿನಿಂದ ಕಣ್ಮರೆಯಾಗುತ್ತಾನೆ. ಅವನ ಕಣ್ಮರತೆಗೆ ಸಂಪದಿಗರು ಅನೇಕ ಅಭಿಪ್ರಾಯಗಳನ್ನು ತಿಳಿಸಿದರಾದರೂ ನನಗೆ ತೋಚಿದ್ದು ಈ ಮರೆಗುಳಿತನ ( ಡಿಮೆನ್ಷಿಯಾ ) ಕಾಯಿಲೆಗೆ ತುತ್ತಾದನೆ ಎನ್ನುವದು ನನ್ನ ಅನಿಸಿಕೆ. ವಿಷಯ ಇಷ್ಟೆ, ಹೊನ್ನೆ ಮರೆದ ಕೆಳಗೆ ಚಪ್ಪಲಿಗಳನ್ನು ಕಳಚಿಟ್ಟು ವಿಶ್ರಮಿಸು ತ್ತಿರುವಾಗ ಈ ಮರೆಗುಳಿತನ ಕಾಯಿಲೆ ಆತನನ್ನು ತೀವ್ರವಾಗಿ ಬಾಧಿಸಿ ಆತನಿಗೆ ತಾನು ಯಾರು, ತಾನು ಎಲ್ಲಿದ್ದೇನೆ? ಎಂಬುವುದು ಸಂಪೂರ್ಣ ಮರೆತು ತನ್ನ ಕಣ್ಣೆದುರಿಗೆ ಕಂಡ ದಾರಿಯನ್ನು ಹಿಡಿದು ಅದು ಎಲ್ಲಿಗೆ ಕರೆದುಕೊಂಡು ಹೋಯಿತೋ ಅಲ್ಲಿಗೆ ಅವನು ತನ್ನ ಏಕಾಂಗಿ ಪಯಣ ಬೇಳೆಸಿದ್ದಾಗಿರಬಹುದು. ತನ್ನ ತಾನೇ ಕಳೆದುಕೊಂಡು ನಂದಿಗೊಪ್ಪ ಗ್ರಾಮವನ್ನೂ ಮತ್ತೂ ಊರ ಜನರನ್ನೂ ಕಳೆದುಕೊಂಡು ಬೇರೆ ಊರಲ್ಲಾಗಲಿ ಅಥವಾ ಕಾಡು ಮೇಡುಗಳಲ್ಲಿ ಅಲೆಯುತ್ತಿರ ಬಹುದು. ಹಾಗಾಗಿ ಕೊರಗ ಒಂಟಿಯಾಗಿ ಬಂದ ಒಂಟಿಯಾಗಿ ಬರಿಗಾಲಲ್ಲಿ ನಡೆದ, ಇದು ವಾಸ್ತವವಾಗಿರಬಹುದೆಂದು ನನ್ನ ಅನಿಸಿಕೆ. ಸಂಪದ ಸ್ನೇಹತರೆ ನಿಮಗೆ ಅನಿಸಿದ್ದನ್ನು ಅಭಿವ್ಯಕ್ತಿಸಿ ಕೊರಗನ ಕಥಾ ಮಾಲಿಕೆಯನ್ನು ಮುಂದು ವರೆಸಿ. ಚಿತ್ರ ಕೃಪೆ ( Dementia.org - Causes, Symptoms, Test, Treatment, Prevention http://www.dementia.org/

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಿರಿಯರೇ- ನೀವು ಮತ್ತು ಪಾಟೀಲ ಇಬ್ಬರು ಒಂದೇ ಊರಿನವರು.. ಇಬ್ಬರೂ ಸಂಪದ ಸೇರಿದ್ದು ಕೆಲವೇ ವಾರಗಳ ಅಂತರದಲ್ಲಿ...!! ಪಾಟೀಲರು- ನಿವೃತ್ತ ಮುಖ್ಯ ಪೋಲೀಸ್ ಪೇದೆ... http://sampada.net/u... ನೀವು ಯಾವ ವೃತ್ತಿಯಲ್ಲಿದ್ದೀರಿ ಅಂತ ತಿಳಿಸಿಲ್ಲವಾದರೋ-ನೀವ್ ನಿವೃತ್ತರು... http://sampada.net/u... ನೀವ್ ಇಬ್ಬರು ಇದುವರೆಗೆ ಸಂಧಿಸಿಲ್ಲವೇ? ಅದೊಮ್ಮೆ ನಾ ಪಾಟೀಲರ ಬರಹ ಒಂದಕ್ಕೆ ಪ್ರತಿಕ್ರಿಯಿಸಿದಾಗ ನೀವು ಅದಕ್ಕೆ ಪ್ರತಿಕ್ರಿಯಿಸಿದ್ದೀರಿ, ಎರಡು ರಿಪ್ಪನ್ ಪೇಟೇ ಕಂಡು ಆಗಲೇ ನಾ ಸಂಶೋಧನೆ ನಡೆಸಬೇಕಿತ್ತು ಆದರೆ ಮರೆತೇ..:(( ಆಗ ನಂಗೆ ಅನ್ನಿಸಿತ್ತು- ಇದೇನು? ಪಾಟೀಲರು ತಮ್ ಬರಹಕ್ಕೆ ತಾವೇ ಪ್ರತಿಕ್ರಿಯಿಸುವರೆ ಅಂತ,....!! ಈಗ ಅಸಲೂ ವಿಷ್ಯ ಗೊತ್ತಾಯ್ತು...:())) ಇನ್ನು ನಿಮ್ಮ ಈ ಬರಹದ ಬಗ್ಗೆ(ವಿಮರ್ಶೆ) ನಿಮಗೆ ಈ ಆಲೋಚನೆ ಬಂತು, ನಮಗೆ ಆ ತರಹದ ಭಾವ ಮೂಡಲೇ ಇಲ್ಲ....!! ನಾ ಯೋಚಿಸಿದ್ದು ಎಲ್ಲಾದರೂ ಕೊರಕಲೀಗೆ ಬಿದ್ದಿರಬೇಕು ಅಂತ ಆದರೆ ಚಪ್ಪಲಿ ಬಿಟ್ಟು ಯಾರು ಬೀಳುವರು?... ಈಗ ನೀವ್ ಹೇಳಿದ್ದು ನೋಡಿದದ ಮೇಲೆ ಅದೇ ಸರಿ ಇರಬಹುದು ಅನ್ನಿಸುತ್ತಿದೆ, ಅದು ಬಿಟ್ಟರೆ ಬೇರೆ ಕಾರಣಗಳು ನನಗೆ ತೊಚುತ್ತಿಲ್ಲ... ನಿಮ್ಮ ಯೋಚನಾ ಲಹರಿ ಹಿಡಿಸಿತು.... ಅದೇ ನೋಡಿ ಬರಹವನ್ನು ಓದಿ ಒಬ್ಬೊಬ್ಬರು ಅದನ್ನು ಒಂದೊಂದು ವಿಧವಾಗಿ ಗ್ರಹಿಸುವ, ವಿಮರ್ಶಿಸುವ ಪರಿ.... ಹಿಡಿಸಿತು... ಶುಭವಾಗಲಿ... ನನ್ನಿ \|/ ...!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರೆ, ತಮ್ಮ ಉಹೆ ನಿಜ.ಪಾಟೀಲರು ನಮ್ಮೂರಿನಲ್ಲಿ ನೆಲಸಿ ತಮ್ಮ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಊರಿನ ಸಮಾನ ಮನಸ್ಕ ಸ್ನೇಹಿತರಿಂದ ಪರಿಚಯವಾಗಿ ಅವರನ್ನ ಸಂಪದ ಅಂಗಳಕ್ಕೆ ಪರಿಚಯಿಸಿದ ಭಾಗ್ಯ ನನ್ನದು. ಆಗಾಗ ನನ್ನ ಲ್ಯಾಪ್ ಟಾಪ್ ನ್ನು ಉಪಯೋಗಿಸಲು ಕೊಡುತ್ತೇನೆ.ಒಂದೆರಡು ಭಾರಿ ಲಾಗ್ಔಟ್ ಆಗದೆ ಪ್ರತಿಕ್ರಿಯೆಗಳು ತಪ್ಪಾಗಿ ನಾನು ಪಾಟೀಲರ ಹೆಸರಿನಲ್ಲಿ ಬರೆದದ್ದುಂಟು.ನಾವಿಬ್ಬರೂ ಕಂಪ್ಯೂಟರ್ ಬಳಕೆ ಕಲಿತಿರುವುದು ಇತ್ತೀಚೆಗಷ್ಟೆ. ನೀವು ನನ್ನ ಈ ಕಿರು ಲೇಖನ ಮೆಚ್ಚಿ ಅಬಿಪ್ರಾಯ ವ್ಯಕ್ತ ಪಡಿಸಿದ್ದಕ್ಕೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೇ- ಈಗ ಮತ್ತೂ ಮೂರು ವಿಚಾರ ಗೊತ್ತಾದವು. ೧. ನೀವು ಮತ್ತು ಪಾಟೀಲರು ಸ್ನೇಹಿತರು-ಸಮಾನ ಮನಸ್ಕರು ೨.ಆವೇರು ಉಪಯೋಗಿಸುವ ಲ್ಯಾಪ್ ಟಾಪ್ ನಿಮ್ಮದು(ಮೊನ್ನೆ ಮೊನ್ನೆ ನನ್ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆಯಲ್ಲಿ ಅವರು ಹೇಳಿದ್ದರು- ಸ್ನೇಹಿತರ ಲ್ಯಾಪ್ ತಾಪ್‌ನಲ್ಲಿ ನಾ ಓದುವೆ-ಪ್ರತಿಕ್ರಿಯಿಸುವೆ ಅಂತ ಈಗ ಆ ಸ್ನೇಹಿತರು ನೀವೇ ಅಂತ ಗೊತ್ತಾಯ್ತು) ೩.ಆವರ ಬರಹಕ್ಕೆ ಅವರದೇ ಪ್ರತಿಕ್ರಿಯೆ ಬಂದದ್ದು ಹೇಗೆ ಅಂತ(ರಿಪ್ಪನ್ ಪೇಟೇ..!!) ಅಸಲಿಗೆ ನಾ ಅಂದುಕೊಂಡಿದ್ದು.(ಅವರ ಬರಹಕ್ಕೆ ಅವರದೇ ಪ್ರತಿಕ್ರಿಯೆ)-ಸಂಪದದಲ್ಲಿ ಏನೋ ತೊಂದರೆಯಾಗಿ ಯಾರೋ ಪ್ರತಿಕ್ರಿಯಿಸಿದ್ದಕ್ಕೆ 'ಅವರದೇ' ಪ್ರತಿಕ್ರಿಯೆ ಬಂದಿರಬೇಕು ಅಂತ..... ನನ್ನ ಊಹೆ ನಿಜವಾದರೆ- ನಿಗೂಢ ಕಥೆ ಬರೆಯುವ ಮೊದಲು ಬರೆಯುವಾಗ-ನಂತರ ಸಹಾ ಪಾಟೀಲರು ನಿಮ್ಮೊಡನೆ ಆ ಬಗ್ಗೆ ಚರ್ಚಿಸಿರುವರೇನೋ? ಅವರು ಆ ಬರಹ ಬರೆದು, ನೀವು ಆ ಬಗ್ಗೆಯೇ ವಿಮರ್ಶೆ ಬರೆದಾಗ ನನಗೆ ಕುತೂಹಲ ಆಯ್ತು- ಅದಕ್ಕೆ ಸಣ್ಣ ಸಂಶೋಧನೆ ಮಾಡಿದೆ..!! ಆಗಲೇ ಈ ಎಲ್ಲ ಅಚ್ಚರಿಯ ವಿಚಾರಗಳು ಗೊತ್ತಾಗಿದ್ದು...!! ನಿಮ್ಮ ಇಬ್ಬರ ಬಗ್ಗೆ ಕೇಳಿ ತಿಳಿದು(ನನ್ನ ಪ್ರಶ್ನೆಗಳಿಗೆ ತಾಳ್ಮೆಯಿಂದ ತ್ವರಿತವಾಗಿ ಉತ್ತರಿಸಿದ್ದು ನಿಮ್ಮ ಇಬ್ಬರ (ನೀವುಗಳು ಮತ್ತು ಪಾಟೀಲರು ಸಹಾ) ಸಹೃದಯತನ) ನಂಗೆ ಬಹು ಖುಷಿ ಆಯ್ತು... ಮುಂದೊಮ್ಮೆ ರಿಪ್ಪನ್ ಪೇಟೇ ಗೆ ಬಂದರೆ ನಿಮ್ಮಿಬ್ಬರನ್ನು ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಆ ಬಗ್ಗೆಯೂ ಒಂದು ಬರಹ ಬರೆಯುವೆ.... ಶುಭವಾಗಲಿ... ಶುಭ ರಾತ್ರಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರಿಗೆ, ತಮ್ಮ ಮರುಪ್ರತಿಕ್ರಿಯೆಗೆ ಧನ್ಯವಾದಗಳು. ತಾವು ಊಹಿಸಿದಂತೆ ಪಾಟೀಲರು 'ನಿಗೂಢ' ಬರೆಯುವ ಮೊದಲು ನನ್ನ ಭೇಟಿಮಾಡಿರುವುದಿಲ್ಲಾ ಮತ್ತು ನನ್ನ ಸಲಹೆಯಾಗಲಿ ಕೇಳಿರುವುದಿಲ್ಲಾ.ಅಷ್ಟಕ್ಕೂ ಅವರು ನನ್ನನ್ನು ಸಂಪರ್ಕಿಸುವ ಅಗತ್ಯತೆ ಕಾಣುವುದಿಲ್ಲಾ.ಅವರಲ್ಲಿ ಕೆಲವಾರು ವರುಷಗಳಿಂದ ಬರೆದ ಹಲವಾರು ಕಥೆ ಕವನಗಳ ಸಂಗ್ರಹವೇ ಇದೆ.ಅವುಗಳನ್ನು ಪ್ರಕಾಶಿಸಲು ಕೆಲ ಪ್ರಕಾಶಕರ ಸಂಪರ್ಕಮಾಡುತ್ತಿರುವುದು ನನಗೆ ಇತ್ತೀಚೆಗೆ ತಿಳಿಯಿತು. ಪಾಟೀಲರು ಸಂಪದಕ್ಕೆ ಹಾಕಲಿಚ್ಚಿಸುವ ಲೇಖನ ಅಥವ ಕವನಗಳನ್ನು ತಮ್ಮ ಇನ್ನೊಬ್ಬ ಪತ್ರಕರ್ತ ಸ್ನೇಹಿತರ ಪಿ.ಸಿ ಯಲ್ಲಿ ಎಮ್ ಎಸ್ ವರ್ಡನಲ್ಲಿ ಟೈಪಿಸಿ ಪೆನ್ ಡ್ರೈವ್ನಲ್ಲಿ ಸಂಗ್ರಹಿಸುತ್ತಾರೆ. ನಂತರ ಅದನ್ನು ಸಂಪದದಲ್ಲಿ ಪ್ರಕಟಿಸಲು ಅವರಿಗೆ ಅದರ ತಿಳುವಳಿಕೆ ಕಡಿಮೆ ಇರುವ ಕಾರಣ ನನ್ನ ಸಹಾಯ ಕೋರುತ್ತಾರೆ ಈಗಲಾದರೂ ತಮ್ಮಲ್ಲಿನ ಸಂದೇಹಕ್ಕೆ ಸೂಕ್ತ ಸಮಾಧಾನ ಸಿಕ್ಕಿದೆ ಎಂದು ತಿಳಿದಿದ್ದೇನೆ. ಇನ್ನು ತಾವು ನಮ್ಮ ಊರಿಗೆ ಬರುವರಿದ್ದರೆ ತಿಳಿಸಿ.ಶಿವಮೊಗ್ಗದಿಂದ ಕೊಲ್ಲೂರಿಗೆ ಹೋಗುವ ದಾರಿಯಲ್ಲಿ 40 ಕಿ.ಮಿ .ಆಗುತ್ತದೆ. ತಮ್ಮ ಜೊತೆಗೆ ಇತರ ಸಂಪದಿಗ ಸ್ನೇಹಿತರನ್ನು ಕರೆದು ಕೊಂಡು ಬನ್ನಿ. ನಿಮ್ಮ ಸತ್ಕಾರಕ್ಕೆ ನಾವು(ಪಾಟೀಲರು ಸೇರಿ) ಸದಾ ಸಿದ್ಧರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೇ- ನನಗೆ ಎಲ್ಲವೂ ಅರ್ಥವಾಯ್ತು.... ಮುಂದೊಮ್ಮೆ ನಾ ಆ ಕಡೆ ಬರುವುದು ಖಾತ್ರಿಯೆ-ಆದರೆ ಯಾವತ್ತು? ಅಂತ ತೀರ್ಮಾನಿಸಿಲ್ಲ, ನಾವ್ ಸಮಾನ ಮನಸ್ಕ ಗೆಳೆಯರು ಆಗಾಗ ಪ್ರವಾಸಕ್ಕೆ(ಹೆಚ್ಚಾಗಿ ಮಲೆನಾಡು-ದಕ್ಷಿಣ ಕರು ನಾಡು) ಹೋಗುವುದಿದೆ...ಆಗ ಇಲ್ಲವೇ ನೀವ್ ಹೇಳಿದಂತೆ ಸಂಪದಿಗರು ತಯಾರಾದ್ರೆ ಅವರ ಜೊತೆಗೆ ಬರುವೆ.. ನಾ ಇದುವರೆಗೂ ಶಿವಮೊಗ್ಗ ಕಡೆಗೆ ಬಂದಿಲ್ಲ.. ಜೋಗ ನೋಡುವ ಆಶೆಯೂ ಇದೆ.. ಮತ್ತುನಾ ಬರುವುದಿದ್ದರೆ ಬರುವ ಬಗ್ಗೆ ಮುಂಚಿತವಾಗೇ ತಮಗೆ ತಿಳಿಸುವೆ... ಪಾಟೀಲರ ಕೃತಿಗಳು ಶೀಘ್ರವೇ ಪುಸ್ತಕಗಳಾಗಿ ಪ್ರಕಟಣೆಯಾಗಿ ಕನ್ನಡಿಗರ ಕೈ ಸೇರಲಿ.... ಎಂಬ ಹಾರೈಕೆ ನನ್ನದು.. ತಮ್ಮ ಕೆಲ್ಸದ ಒತ್ತಡದ ಮದ್ಯೆಯೂ ಸಾಹಿತ್ಯಕ್ಕೆ ಅವರು(ಪಾಟೀಲರು) ಸಮಯ ಮೀಸಲೀರಿಸಿ ಆದಾಗಲೇ ಸಾಹಿತ್ಯ ರಚಿಸಿ ಇಟ್ಟಿದ್ದು ಕೇಳಿ ಸಂತೋಷವಾಯ್ತು... ನನ್ನ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆಯನ್ನು ತ್ವರಿತವಾಗಿ ಸೇರಿಸಿದ ತಮಗೆ ಅನಂತ ಧನ್ಯವಾದಗಳು.... ಶುಭವಾಗಲಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎನ್ ರಮೇಶ ಕಾಮತರಿಗೆ ವಂದನೆಗಳು " ನಿಗೂಢ ಕಥೆಯನ್ನಾಧರಿಸಿ " ಎಂಬ ನಿಮ್ಮ ಲೇಖನವನ್ನು ಓದಿದೆ, ಇದೊಂದು ಕಾಲ್ಪನಿಕ ಕಥಾನಕ, ಸಂಪದಿಗರಾದ ಸಪ್ತಗಿರಿ, ಪಾರ್ಥಸಾರಥಿ, ಸತೀಶ,ನೀವು ಮತ್ತು ಕೆಲವರು ಕೊರಗನ ನಿಗೂಢ ಕಣ್ಮರೆ ಕುರಿತು ವಿಭಿನ್ನ ರೀತಿಯಲ್ಲಿ ತಮ್ಮ ಕುತೂಹಲ ತೋರಿದ್ದರು. ನನಗೂ ಸಹ ಇದೊಂದು ಒಗಟಾಗಿತ್ತು, ಕಥೆಯನ್ನೇನೋ ಬರೆಯುವುದನ್ನು ಬರೆದೆ ಆತನ ನಿಗೂಢ ಕಣ್ಮರೆ ಬಗ್ಗೆ ಏನೆಂದು ಉತ್ತರಿಸುವುದು ಎಂದು ತೋಚಿರಲಿಲ್ಲ. ನಿಮ್ಮ ಈ ಲೇಖನ ನನ್ನ ಕೆಲಸವನ್ನು ಹಗುರ ಗೊಳಿಸಿತು, ಕೊರಗ ಡಿಮೆನ್ಷಿಯಾಕ್ಕೆ ಅಥವಾ ಅಲ್ಝಮೀರ್ ಕಾಯಿಲೆಗೆ ಒಳಗಾಗಿ ಹೊರಟು ಹೋಗಿರಬಹುದೇನೋ ಇದೆ ಆತನ ಕಣ್ಮರೆಗೆ ಹತ್ತಿರದ ಕಾರಣವಾಗಬಹುದೇನೋ.ಕೊರಗನ ನಿಗೂಢ ಕಣ್ಮರೆಗೆ ವೈಜ್ಞಾನಿಕ ಕಾರಣ ನೀಡಿ ನನ್ನ ಕೆಲಸ ಹಗುರುಗೊಳಿಸಿದ್ದೀರಿ. ಈ ಲೇಖನ ಕುರಿತಂತೆ ಸಪ್ತಗಿರಿಯವರು ಬರೆದಿರುವ ಪ್ರತಿಕ್ರಿಯೆಗಳನ್ನು ಅವುಗಳಿಗೆ ನೀವು ಬರೆದ ಪ್ರತಿಕ್ರಿಯೆಗಳನ್ನು ಓದಿದೆ. ಸಪ್ತಗಿರಿಯವರಿಗೆ ನೀವು ನಿಮ್ಮ ಬಗೆಗೆ ವಿಶದವಾಗಿ ಬರೆಯಬೇಕು ಆ ಜವಾಬ್ದಾರಿ ನಿಮ್ಮದು,, ಇಲ್ಲವಾದಲ್ಲಿ ಸ್ವಲ್ಪ ಸಮಯ ಕಾದು ನಾನೆ ಬರೆಯುವೆ,ಆಮೇಲೆ ನೀವು ನನ್ನನ್ನು ದೂರುವಂತಗಿಲ್ಲ, ಬರವಣಿಗೆ ಸ್ವಲ್ಪ ಅತಿಯಾಯಿತೇನೋ ಕ್ಷಮೆಯಿರಲಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರಿಗೆ ವಂದನೆಗಳು ಒಮ್ಮೆ ತಮ್ಮ ಲೇಖನಕ್ಕೆ ಸ್ಪಂದಿಸಿದ ತರುವಾಯ ಮನಸ್ಸಿನಲ್ಲಿ ಹೀಗೆ ಒಂದು ಆಲೋಚನೆ ಬಂದಿತು. ಈ ಮರೆವಿನ ಕಾಯಿಲೆ ಕುರಿತು ಒಂದು ಲೇಖನ ಬರೆದರೆ ಇನ್ನೂ ಹೆಚ್ಚಿನ ಮಾಹಿತಿ ಅಥವ ತಾವು ಕಂಡುಕೊಂಡ ಆನುಭವ ಸಂಪದಿಗರು ನಮ್ಮೊಂದಿಗೆ ಹಂಚಿಕೊಳ್ಳಬಹುದು ಎಂಬ ನಿರೀಕ್ಷೆ ಉಂಟಾಯಿತು.ಹಾಗಾಗಿ ನನಗೆ ಲೇಖನಗಳನ್ನು ಬರೆದು ಅನುಭವ ಇಲ್ಲದಿದ್ದರೂ ಈ ಲೆಖನವನ್ನು ವಿಮರ್ಶಿಸುವ ನೆಪದಲ್ಲಿ ಬರೆದೆ. ಮತ್ತೆ ನನ್ನ ಕುರಿತು ಸಪ್ತಗಿರಿಯವರಿಗೆ ವಿಶದವಾಗಿ ಏನು ಬರೆಯುವುದು? ಎಲ್ಲವನ್ನು ಅವರು ತಮ್ಮ ಸಂಶೋಧನೆಯಿಂದ ತಿಳಿದು ಕೊಂಡಿದ್ದಾರೆ....ಹಹಾ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನ್ನ ಕುರಿತು ಸಪ್ತಗಿರಿಯವರಿಗೆ ವಿಶದವಾಗಿ ಏನು ಬರೆಯುವುದು? ಎಲ್ಲವನ್ನು ಅವರು ತಮ್ಮ ಸಂಶೋಧನೆಯಿಂದ ತಿಳಿದು ಕೊಂಡಿದ್ದಾರೆ....ಹಹಾ...! :())) \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.