ನಿಂತಲ್ಲೇ ನಿಲುವನೇ ಮನುಜ?

4

ಸಖೀ,
ನೀನೀ ಮುನಿಸನಿಂದು ಮರೆತು ಬಿಡು
ನಗುತಲೆನ್ನ ಜೊತೆಗೆ ಮುಂದಡಿಯಿಡು


ನಕ್ಕು ಬಿಡು ನಗುವುದಕ್ಕಿರಲಿ ಜೀವನ
ಕೋಪಕ್ಕೆ ಇರಲಿ ದಿನದಿನವೂ ಮರಣ


ಈ ಬಿಗುಮಾನದಿಂದ ನಮಗೇ ಕೆಡುಕು
ಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು


ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್ಲ
ತಪ್ಪು ಎಸಗದವರೆಮ್ಮಲ್ಲಿ ಯಾರೂ ಇಲ್ಲ


ನಡೆದಾಡುವಾಗೆಡವುದು ಜೀವನ ಸಹಜ
ಹಾಗೆಂದು ನಿಂತಲ್ಲೇ ನಿಲುವನೇ ಮನುಜ
********


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

"ನಕ್ಕು ಬಿಡು ನಗುವುದಕ್ಕಿರಲಿ ಜೀವನ ಕೋಪಕ್ಕೆ ಇರಲಿ ದಿನದಿನವೂ ಮರಣ" "ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್ಲ ತಪ್ಪು ಎಸಗದವರೆಮ್ಮಲ್ಲಿ ಯಾರೂ ಇಲ್ಲ" ಸತ್ಯವಾದ ಮಾತು. ಸುಂದರವಾದ ಕವನ ಧನ್ಯವಾದಗಳೊಂದಿಗೆ......ಸತೀಶ್