ನಾನು ನಿನ್ನ ಪ್ರೇಮದುತ್ತರ !

5

ಮೌನವಾಗಿ ನನ್ನ ನೀನು ಯಾಕೆ ಕಾಡಿಹೆ
ಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆ
ಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?
ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ?

ನಿನ್ನ ಒಲವು ನನ್ನ ಗೆಲುವು ಬಾಳು ಸುಂದರ
ಮಧುರವಾದ ಗಾನ ಲೀಲೆ ಎನಿತು ಸುಮಧುರ
ಕಣ್ಣ ಭಾಷೆ ಹೇಳೊ ಮುನ್ನ ಎಂಥ ಇಂಚರ
ಬಾಳು ಒಂದು ಬಂದು ಹೋಗೊ ಪ್ರೇಮ ಮಂದಿರ !

ಯಾಕೊ ಏನೊ ನಾನು ಅರಿಯೆ ಎಲ್ಲ ಮೌನವು
ಧ್ಯಾನದಲ್ಲಿ ಮುಳುಗಿ ಹೋದ ಇಳೆಯ ಗಾನವು
ಬಂದು ನಿಂತ ಪ್ರೇಮಿಗಿಲ್ಲಿ ಯಾಕೀ ಅಂತರ ?
ಒಮ್ಮೆ ನೋಡು ನಾನು ನಿನ್ನ ಪ್ರೇಮದುತ್ತರ !
                                      ಬಾಳು ಹತ್ತಿರ !!

 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.