ನಾಗೇಶ ಮೈಸೂರು

ಪಂಚ್ಲೈನ್ 'ಪಂಚೆ' ಸಿದ್ರಾಮಣ್ಣ..

ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ, ಬುಲೆಟ್ ಟ್ರೈನು , ದಾಲಿಯನ್ ರಸ್ತೆ, ನಗರಗಳನ್ನು ಕಂಡ ವಿಸ್ಮಯ - ಇತ್ಯಾದಿ ತುಣುಕುಗಳನ್ನು ಓದುತ್ತಿದ್ದ ಹಾಗೆ ಇತರ ಕೆಲವು ಮಂತ್ರಿಗಳಂತೆ ಬರಿ ಟ್ರಿಪ್ಪು ಹೊಡೆದು 'ಅದು ಫಾರಿನ್ನೂ' ಎಂದು ಆರಾಮ ನಿದ್ರಿಸುವ ಜನರ ಮಧ್ಯೆ, ಸಿದ್ರಾಮಯ್ಯನವರು ಬಹುಶಃ ಅಷ್ಟಿಷ್ಟಾದರೂ ಕಾರ್ಯಗತ ಮಾಡುವ ಮಾತಾದರೂ ಆಡುತ್ತಿದ್ದಾರಲ್ಲ ಅನಿಸಿತು. ಆ ಮಾತುಗಳೆಲ್ಲ ನಿಜವಾಗಿಯೂ ಕಾರ್ಯರೂಪಕ್ಕೆ ಬರಲಿ, ಅಡ್ಡಿಗಳಾವುದು ಭಾಧಿಸದಿರಲಿ, ಹೀಗಾದರೂ ಸರಿ ನಾಡು ಪ್ರಗತಿಯತ್ತ ಸಾಗಲಿ ಎಂಬ ಅನಿಸಿಕೆಯೊಡನೆ ಬರೆದ ಸಾಲುಗಳಿವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ

ನಾಳೆ ಗೋಕುಲಾಷ್ಟಮಿ..ಎಷ್ಟೋ ಮನೆಗಳಲಿ ಬಾಲಕೃಷ್ಣ ಹೆಜ್ಜೆಯ ಗುರುತಾಗಿ ಈಗಾಗಲೆ ಮೂಡಲು ಆರಂಭಿಸಿರಬೇಕು - ಬಣ್ಣ ಬಣ್ಣದ ರಂಗೋಲಿಯ ಸಮೇತ. ನಾನು ನೋಡಿದ ಗೆಳೆಯರ ಮನೆಗಳಲ್ಲಿ ಆಚರಣೆಯ ಶ್ರದ್ದೆ, ಸಂಭ್ರಮ, ಭಕ್ತಿ ನೋಡಿ ಸೋಜಿಗವಾಗುತ್ತಿತ್ತು - ಹೇಗೆ ಸಂಪ್ರದಾಯದ ಜೀವಂತಿಕೆಯನ್ನು ಈ ಹಬ್ಬಗಳ ರೂಪಿನಲ್ಲಿ ಹಿಡಿದಿಟ್ಟಿದೆ ಜನಪದ ಸಂಸ್ಕೃತಿ ಎಂದು.

ಕೃಷ್ಣನ ಆರಾಧಕರಿಗೆ ಇಲ್ಲೊಂದು ಪುಟ್ಟ ಗೀತೆ, ಶ್ರೀ ಕೃಷ್ಣನ ಮೇಲೆ, ಬಾಲ ಲೀಲೆಗಳ ಸುತ್ತ ಹೆಣೆದದ್ದು - ಈಗಾಗಲೆ ಇರಬಹುದಾದ ಅಖಂಡ ಸಂಖ್ಯೆಯ ಗೀತೆಗಳ ಸಾಲಿಗೆ ಮತ್ತೊಂದು ಸರಳ ಗೀತೆ ಸೇರ್ಪಡೆ :-)

ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ
__________________________________

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ಅಂಡ ಪಿಂಡ ಬ್ರಹ್ಮಾಂಡ ...

ಇದು 2012ರ ಸಾಲಿನ ಸಿಂಗಾಪುರ ಕನ್ನಡ ಸಂಘ ನಡೆಸಿದ ಜಾಗತಿಕ ಕವನ ಸ್ಪರ್ಧೆ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕವನದ ಭಾಗಾಂಶ. ಒಂದು ಸೂಕ್ಷಾತಿಸೂಕ್ಷ್ಮ ಕಣದಿಂದಿಡಿದು ಅಖಂಡ ಗಾತ್ರದ ಜೀವಿಯವರೆಗು, ಸೃಷ್ಟಿಕ್ರಿಯೆಯ ಪ್ರಕ್ರಿಯೆಯೆ ವಿಸ್ಮಯಕಾರಿ. ಒಂದು ಜತೆ ಸೂಕ್ಷ್ಮಾಕಾರದ ವೀರ್ಯ ಮತ್ತು ಅಂಡಾಣುಗಳ ಮಿಲನವೆ ಮೊತ್ತದಲಿ ಸೃಷ್ಟಿಕ್ರಿಯೆಯ ಸಾರವಾದರೂ, ಅದು ನೈಸರ್ಗಿಕವಾಗಿ, ನಿಯಮಿತವಾಗಿ, ತನ್ನಂತಾನೆ ನಡೆಯಲು ಬೇಕಾದ ಸರಳ ವ್ಯವಸ್ಥೆಯೆ ಅಪ್ರತಿಮ ಅಚ್ಚರಿಯ ಮೇರುಶಿಖರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಈ ದಿನ ಜನುಮದಿನಾ.....(ಈಚಿನ ಸಾವಿನ ಸುದ್ದಿಗಳ ನಡುವೆ ಹುಟ್ಟನ್ನು ನೆನೆಸುತ್ತಾ...)

...........ಶುಭಾಶಯ ನಮ್ಮ ಶುಭಾಶಯ!

 ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತಿ ವರ್ಷಕ್ಕಿಂತ ಈ ಬಾರಿ ಕೊಂಚ ಹೆಚ್ಚೇ ತಳಮಳದೊಂದಿಗೆ ಕಾಡುತ್ತಿದೆ, ಮತ್ತೊಂದು ಕಾರಣದಿಂದಾಗಿ ; ಈ ಕೆಲವೆ ದಿನಗಳ ಹಿಂದೆಯಷ್ಟೆ ಸ್ವರ್ಗಸ್ತರಾದ ಹಾಗೂ ರಾಜ್ ಹೆಸರಿನೊಂದಿಗೆ ಹೇಳಲಿ, ಬಿಡಲಿ ತನ್ನಂತಾನೆ ಸದಾ ತಳುಕು ಹಾಕಿಕೊಂಡು ಬರುವ ಡಾಕ್ಟರ ಪಿ.ಬಿ.ಶ್ರೀನಿವಾಸರನ್ನು ನೆನೆದು. ಎರಡು ಹಿರಿ ಜೀವಗಳ ಸಖ್ಯ ಆ ಲೋಕದಲ್ಲಾದರೂ ಮುಂದುವರಿಯಲಿದೆಯಲ್ಲ ಎಂಬ ನಿರಾಳತೆಯೊಂದಿಗೆ ಈ ನೆನಕೆಯನ್ನು ಆ ಶ್ರೇಷ್ಟಜೀವಿಗಳ ಸ್ಮರಣೆಗೆ ಅರ್ಪಿಸುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಮೆಲ್ಲುಸಿರೆ ಸವಿಗಾನ....!

ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೆ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೆ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೆ ಗೊತ್ತಾಗದ ಅಯೋಮಯ ಸ್ಥಿತಿ - ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಶ್ರೀ ರಾಮನಿಗೇನಿತ್ತನಿವಾರ್ಯ....?

ಹೊಸವರ್ಷದ ಹೊಸ ಹರಕೆಯೊಡನೆ ಕಾಲಿಟ್ಟ ಯುಗಾದಿಯ ಸೊಗ ಆರುವ ಮೊದಲೆ, ಅದರ ಬೆನ್ನ ಹಿಂದೆಯೆ ಶ್ರೀ ರಾಮ ನವಮಿ ಕಾಲಿಡುತ್ತಿದೆ. ಶ್ರಿ ರಾಮನವಮಿಯೆಂದರೆ ಪಟ್ಟನೆ ನೆನಪಾಗುವುದು ಬೆಲ್ಲದ ಪಾನಕ, ನೀರು ಮಜ್ಜಿಗೆ. ಈ ಹಬ್ಬ ಬರುವ ಕಾಲದಲಿ ಸಾಮಾನ್ಯವಾಗಿರುವ ಬಿಸಿಲ ಬೇಗೆಯನ್ನು ಗಮನಿಸಿದರೆ, ಆ ಬೇಗೆಯನ್ನು ತಂಪಾಗಿಸಲೋಸುಗವೆ ನಮ್ಮ ಹಿರಿಯರು ಈ ಪಾನಕ ನೀರು ಮಜ್ಜಿಗೆಯಂತಹ ಪಾನೀಯಗಳನ್ನು ಹಬ್ಬದ ನೆಪದಲ್ಲಿ ಸೇವಿಸುತ್ತಿದ್ದರೆಂದೆನಿಸುತ್ತದೆ. ನಮ್ಮ ಮನೆಯ ಸುತ್ತಮುತ್ತಲಿದ್ದ ಎಲ್ಲಾ ರಾಮಮಂದಿರಗಳಲ್ಲಿ ಹಂಡೆಗಟ್ಟಲೆ ಮಾಡಿಟ್ಟು ಬಂದು ಹೋಗುವವರಿಗೆಲ್ಲ ಹಂಚುತ್ತಿದ್ದುದು ನಾನು ಚಿಕ್ಕವನಿದ್ದಾಗಿನಿಂದಲೂ ಕಾಣುತ್ತಿದ್ದ ಸಾಮಾನ್ಯ ದೃಶ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
Subscribe to ನಾಗೇಶ ಮೈಸೂರು