ನಾಗೇಶ ಮೈಸೂರು

ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ

ನಾಳೆ ಗೋಕುಲಾಷ್ಟಮಿ..ಎಷ್ಟೋ ಮನೆಗಳಲಿ ಬಾಲಕೃಷ್ಣ ಹೆಜ್ಜೆಯ ಗುರುತಾಗಿ ಈಗಾಗಲೆ ಮೂಡಲು ಆರಂಭಿಸಿರಬೇಕು - ಬಣ್ಣ ಬಣ್ಣದ ರಂಗೋಲಿಯ ಸಮೇತ. ನಾನು ನೋಡಿದ ಗೆಳೆಯರ ಮನೆಗಳಲ್ಲಿ ಆಚರಣೆಯ ಶ್ರದ್ದೆ, ಸಂಭ್ರಮ, ಭಕ್ತಿ ನೋಡಿ ಸೋಜಿಗವಾಗುತ್ತಿತ್ತು - ಹೇಗೆ ಸಂಪ್ರದಾಯದ ಜೀವಂತಿಕೆಯನ್ನು ಈ ಹಬ್ಬಗಳ ರೂಪಿನಲ್ಲಿ ಹಿಡಿದಿಟ್ಟಿದೆ ಜನಪದ ಸಂಸ್ಕೃತಿ ಎಂದು.

ಕೃಷ್ಣನ ಆರಾಧಕರಿಗೆ ಇಲ್ಲೊಂದು ಪುಟ್ಟ ಗೀತೆ, ಶ್ರೀ ಕೃಷ್ಣನ ಮೇಲೆ, ಬಾಲ ಲೀಲೆಗಳ ಸುತ್ತ ಹೆಣೆದದ್ದು - ಈಗಾಗಲೆ ಇರಬಹುದಾದ ಅಖಂಡ ಸಂಖ್ಯೆಯ ಗೀತೆಗಳ ಸಾಲಿಗೆ ಮತ್ತೊಂದು ಸರಳ ಗೀತೆ ಸೇರ್ಪಡೆ :-)

ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ
__________________________________

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ - ನಾಗೇಶ ಮೈಸೂರು )

ಸೃಷ್ಟಿ ರಹಸ್ಯ..! ಅಂಡ ಪಿಂಡ ಬ್ರಹ್ಮಾಂಡದ ವ್ಯಾಪ್ತಿಯಿಂದ ಕೊರೆದಿಟ್ಟ ಬೀಜಾಕ್ಷರ ಸಂಕೇತ ಬೀಜಾಂಡ ಮಿಳಿತವಾಗಿ ದೇಹದೊಳಹೊಕ್ಕು ಗರ್ಭಾಧಿಕಾರ ಪಡೆದ ಗಳಿಗೆಯ ಹಾಗೂ ನಂತರದ ನವಮಾಸದ ಭೌತಿಕ ಚಟುವಟಿಕೆಗಳತಿಶಯದ ಅಂತರಾಳ ಬಿಚ್ಚಿಡುವ ಯತ್ನ 'ಸೃಷ್ಟಿಯ ರಹಸ್ಯ' ಕಾವ್ಯದ ಆಶಯ. ಹಾಗೆಯೆ ಜನ್ಮ ತಳೆದ ನವಜಾತ ಶಿಶು ಜೀವನ ಚಕ್ರ ಪರಿಕ್ರಮಣದ ಗಾಲಿ ಹೊತ್ತು ಎಲ್ಲರಂತೆ ಬಾಲ್ಯ, ಯೌವ್ವನ, ಪ್ರಾಯ, ವೃದ್ದಾಪ್ಯಗಳನ್ನು ಅಪ್ಪುತ್ತ ಆ ಚಕ್ರ ನಿರಂತರವಾಗಿರುವಂತೆ ನೋಡಿಕೊಳ್ಳುವ ಕರ್ಮಬಂಧವೂ ಇಲ್ಲಿ ಅಂತರ್ಗತ. ಅ ಪುನಾರವರ್ತನೆಯ ಚಕ್ರದಲ್ಲಿಯೆ ಬ್ರಹ್ಮ್ಮಂಡದ ಸೃಷ್ಟಿ ರಹಸ್ಯದ ಕೀಲಿ ಕೈ ಅಡಗಿರಬಹುದೆಂಬ ಕುತೂಹಲ / ಪ್ರಶ್ನೆಯಲ್ಲಿ, ಈ ನೈಸರ್ಗಿಕ ಪ್ರಕ್ರಿಯೆಯನ್ನು ಭೌತಿಕ ನೆಲೆಯಿಂದ ತಾತ್ವಿಕ ನೆಲೆಗಟ್ಟಿಗೊಯ್ದು ನಿಲ್ಲಿಸುವ ಹವಣಿಕೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಮೆಲ್ಲುಸಿರೆ ಸವಿಗಾನ....!

ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೆ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೆ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೆ ಗೊತ್ತಾಗದ ಅಯೋಮಯ ಸ್ಥಿತಿ - ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಶ್ರೀ ರಾಮನಿಗೇನಿತ್ತನಿವಾರ್ಯ....?

ಹೊಸವರ್ಷದ ಹೊಸ ಹರಕೆಯೊಡನೆ ಕಾಲಿಟ್ಟ ಯುಗಾದಿಯ ಸೊಗ ಆರುವ ಮೊದಲೆ, ಅದರ ಬೆನ್ನ ಹಿಂದೆಯೆ ಶ್ರೀ ರಾಮ ನವಮಿ ಕಾಲಿಡುತ್ತಿದೆ. ಶ್ರಿ ರಾಮನವಮಿಯೆಂದರೆ ಪಟ್ಟನೆ ನೆನಪಾಗುವುದು ಬೆಲ್ಲದ ಪಾನಕ, ನೀರು ಮಜ್ಜಿಗೆ. ಈ ಹಬ್ಬ ಬರುವ ಕಾಲದಲಿ ಸಾಮಾನ್ಯವಾಗಿರುವ ಬಿಸಿಲ ಬೇಗೆಯನ್ನು ಗಮನಿಸಿದರೆ, ಆ ಬೇಗೆಯನ್ನು ತಂಪಾಗಿಸಲೋಸುಗವೆ ನಮ್ಮ ಹಿರಿಯರು ಈ ಪಾನಕ ನೀರು ಮಜ್ಜಿಗೆಯಂತಹ ಪಾನೀಯಗಳನ್ನು ಹಬ್ಬದ ನೆಪದಲ್ಲಿ ಸೇವಿಸುತ್ತಿದ್ದರೆಂದೆನಿಸುತ್ತದೆ. ನಮ್ಮ ಮನೆಯ ಸುತ್ತಮುತ್ತಲಿದ್ದ ಎಲ್ಲಾ ರಾಮಮಂದಿರಗಳಲ್ಲಿ ಹಂಡೆಗಟ್ಟಲೆ ಮಾಡಿಟ್ಟು ಬಂದು ಹೋಗುವವರಿಗೆಲ್ಲ ಹಂಚುತ್ತಿದ್ದುದು ನಾನು ಚಿಕ್ಕವನಿದ್ದಾಗಿನಿಂದಲೂ ಕಾಣುತ್ತಿದ್ದ ಸಾಮಾನ್ಯ ದೃಶ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಹುಡುಕೂ, ವರ್ಷದ್ಹುಡುಕು ..!

------------------------------------------------------------------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 
Subscribe to ನಾಗೇಶ ಮೈಸೂರು