ನವ ವರುಷ

0

ಕಳೆಯುತಿದೆ ಹಳೆ ವರುಷ 
ಕೂಡಿಸಲು ಮತ್ತೊಂದು ವರ್ಷ 
 
 ಹೋದ ದಿನಗಳಾವುವು ಪೋಣಿಸಲಿಲ್ಲ 
ಅಳಿಸದಂತಹ ನೆನಪಿನ ಮಾಲೆಯನ್ನ 
 
ಬರುವ ಕ್ಷಣಗಳಾದರೂ 
ಕೊಡುಗೆ ಕೊಡುವುದೇನೂ... ?
 
ಹೊಸ ಹೊಸ ಕನಸಿನ ಕೋಟೆ ಕಟ್ಟಲು 
ಅಳಿಯದ ಆಸೆಯ ಮೆಟ್ಟಿಲ ಏರಲು  
 
ಬಯಸಿದ ಗುರಿಯ ತಲುಪಲು 
 ತಪಿಸಿ ಕಾದಿದೆ ಮನ ತವಕದಿಂದ 
 
ನವನವೀನ ಗಳಿಗೆಗಳ 
ಸಂಭ್ರಮದ ಸ್ವಾಗತಕೆ .... 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.