ನವ ಚೇತನ

5

ಹೊಸತು ಗಾಳಿ ಹರುಷದಿಂದ 
ಚಿಗುತಲಿರುವ ಎಲೆಗಳಂದ 
ಬಿಡದೆ ಅವನು ಕುಲುಕುತ
ಹೊಸ ವರುಷಕೆ ಸ್ವಾಗತ 
 
ನೀಲ ಆಳ ನಿಚ್ಚಳ 
ನಭದ ಎದೆಯ ಮುಚ್ಚಳ 
ತೆರೆದಿತು ಅಗೋ ಧರಣಿಗೆ 
ಚೆಲುವ ರಾಣಿ ವಸಂತಕೆ 
 
ಹಕ್ಕಿ ಗಾನ ಸತತವಾಗೆ
ಸಂತಸ ತಾ ಎಲ್ಲೆಡೆ 
ಮಧುರ ಭಾವ ಹೊಮ್ಮಿದೆ 
ಪ್ರಕೃತಿ ಸಿರಿಯನು ಚಿಮ್ಮಿದೆ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.