ನಲ್ಲಳಿಲ್ಲದೇ ಬಳಿಯಲ್ಲಿ

4

ಪಡುವಣದಂಚಿಗೆ ಜಾರುವ ನೇಸರನ

ಮೊಗದಲ್ಲಿ ನಗುವದೇಕೋ ಕಾಣುತಿಲ್ಲ

ಮರಳಿ ಗೂಡಿಗೆ ಮರಳುವ ಹಕ್ಕಿಗಳ

ಮೊಗದಲ್ಲಿ ಸೊಗಸದು ಇಂದು ಸುಳಿಯುತಿಲ್ಲ

 

ಇರುಳ ಬೆಳಗುವ ತಾರೆಗಳ

ಮೊಗದಲ್ಲಿ ಮೊದಲಿದ್ದ ನಗುವಿಲ್ಲ

ನಲ್ಲಳಿಲ್ಲದೆ ಬಳಿಯಲ್ಲಿ.......

 

ನಲ್ಲಳಿಲ್ಲದೇ ಬಳಿಯಲ್ಲಿ

ಕರಗುತಿವೆ ರಾತ್ರಿಗಳು

ಕನಸುಗಳ ಕಾಣದೆ

 

ದಿನ ಸಂಜೆಯಲ್ಲಿ ಗಗನದೆಡೆಗೆ

ನೆಟ್ಟನೋಟ ಅರಸುತಿದೆ ಎನನೋ

ನಾ ಅರಿಯದಂತಾಗಿರುವೆ......

ಪಾರಿಜಾತದ ಪರಿಮಳವು ಮನಕೆ ಖುಷಿಯ ನೀಡುತಿಲ್ಲ

 

ತಂಪೆರೆಯುತ್ತಿದ್ದ ನಿನ್ನ ನೆನಪ ಬೆಳದಿಂಗಳು

ಇಂದದೇಕೋ, ಕಂಪನವತರಿಸಿ

ಏರಿಸಿದೆ ಎದೆಯ ತಾಪವನು

 

ನೀ ನಿಲ್ಲದ ಈ ಹಗಲು ರಾತ್ರಿಗಳಲ್ಲಿ

ಮತ್ತೆ ಮತ್ತೆ ಮನದ ತೆರೆಗೆ ಅಪ್ಪಳಿಸಿ

ಕಾಡುತಿವೆ ನೆನಪುಗಳು....

ಜೊತೆಕಳೆದ ರಾತ್ರಿಗಳ ಚಿತ್ರಕಥೆಯನು

ವಿಸ್ತಾರವಾಗಿ ಬಿತ್ತರಿಸುತ.....

 

ಬಯಲು ಬಯಲೆನಿಸಿವೆ ನೀ

ಬಳಿ ಇಲ್ಲದ ಈ ವೇಳೆಗಳು

ಸಹಾರಾ ಮರುಭೂಮಿಯಂತೆ

ಎಕತಾನತೆ ಮೀಟಿ

 

ನಿನ್ನನರಸುವ ಕಣ್ಣುಗಳಿಗೆ

ದಿನ ಸಂಜೆಯಲ್ಲಿ, ಮುಂಬೆಳಗಿನಲ್ಲಿ

ಮರೆತು ಹೋಗಿದೆ ನಗುವು,

ನಿನ್ನ ಕಾಣದೆ ಗೆಳತಿ

 

ಹಗಲಿರುಳ ಎಲ್ಲ ಬೇಸರವ ತಣಿಸಲು

ಬಳಸಿಕೊಳ್ಳುವೆ ನಿನ್ನ ಸಿಹಿಯೊಲವ ನೆನಪುಗಳ

ನೀ ನಿಟ್ಟ ಸಿಹಿಮುತ್ತ ಕನವರಿಸುತ

ಕಳೆವೆ ನಗುವ ಚೆಂದ್ರ-ತಾರೆಗಳಿಲ್ಲದ ರಾತ್ರಿಗಳ

ನಿನ್ನ ನೆನಪ ಬಿಂಬವನು ತಬ್ಬಿಹಿಡಿದು.

 

ಕಾದಿರುವೆನು ಗೆಳತಿ

ನಿನ್ನ ಬಳಿಸೇರಲು, ಒಲವ ಹಾಡ ಹಾಡಲು

ನಿನ್ನ ಕೂಡಿ ಬಾಳಲು.

 

-ಜಯಪ್ರಕಾಶ ಶಿವಕವಿ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು