ನಮ್ಮ ನಾಡು,ನಮ್ಮ ಹೆಮ್ಮೆ,ನಮ್ಮ ಕನ್ನಡ

4.166665

ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ  ಗೌರವ......

 

ಕಂಡೇನಾ ಪ್ರೀತಿಯ ಕನ್ನಡಾ೦ಬೆಯ

ಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯ

ಅದೃಷ್ಟವಿರಬೇಕು ಕರ್ನಾಟಕದಲ್ಲಿ ಹುಟ್ಟಿ ಬೆಳೆಯಲು

ಅಚ್ಚ ಮನಸ್ಸಿರಬೇಕು ಕನ್ನಡ ಭಾಷೆ ನುಡಿಯಲು..
 

ನಾವೆಲ್ಲ ಕನ್ನಡಾ೦ಬೆಯ ಮಕ್ಕಳು

ನಮ್ಮ ಸ್ನೇಹಕ್ಕೆ ಬೇಗ ಒಲಿಯುತ್ತಾರೆ ಎಲ್ಲಾ ಪ್ರಜೆಗಳು

ಕನ್ನಡಕ್ಕಿದೆ ದೀರ್ಘಕಾಲದ ಇತಿಹಾಸ

ಪ್ರೀತಿಯಿಂದ ಎಲ್ಲರೂ ಮೆಚ್ಚಬೇಕು  ಕನ್ನಡ ಪದಗಳ ಪ್ರಾಸ
 

ಎಲ್ಲೆಲ್ಲಿ ನೋಡಿದರು ಹಚ್ಚ ಹಸಿರು

ಇದು ಕನ್ನಡಿಗರು ಕಾಪಾಡಿಕೊಂಡು ಬಂದ ಉಸಿರು

ಹಚ್ಚ ಹಸಿರಿನ ಮದ್ಯೆ ನಿಂತು ಹುಚ್ಚನಾದೆ ನಾನು

ನಿನ್ನ ಈ ಪ್ರಕೃತಿ ಸೌಂದರ್ಯಕೆ ಸೋಲದವನು ಯಾರಿನ್ನೂ.।

                                                ಸೋಮೇಶ್ ಗೌಡ

                                                ಮಾಕಳಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (6 votes)
To prevent automated spam submissions leave this field empty.