~~ನನ್ನ ೨೦೧೪

0

ಹವಾಮಾನದಲ್ಲಿ ಯಾವ ಬದಲಾವಣೆಯು ಆಗದ ಆದರು ಎಲ್ಲರಲ್ಲೂ ಸಂತಸ ತರುವ ದಿನ ಹೊಸ ವರುಷದ ಮೊದಲನೆಯ ದಿನ. ಹೊಸ ರಜೆಗಳು , ಹೊಸ ಕ್ಯಾಲೆಂಡರ್ ಇದು ಹೊಸ ವರುಷದ ಸಂಭ್ರಮ. ೧೨ ತಿಂಗಳ ನಂತರ ಮತ್ತೆ ಹೊಸ ತಿಂಗಳಿನೊಂದಿಗೆ ಶುರುವಾಗುತ್ತೆ ಹೊಸ ವರುಷ.
೨೦೧೪ ನಾನು  ನನ್ನ  ಜೇವನದಲ್ಲಿ ಏರು ಪೆರುಗಳನ ಕಂಡ ವರುಷ. ಏರು ಪೆರು ದಿನ ನಿತ್ಯದ ಕರ್ಮ. ಅದರಲ್ಲಿ ವಿಶೇಷ ಏನು ಇಲ್ಲ. ಇದು ಕೇವಲ ನನ್ನ ಅಭಿಪ್ರಾಯ ಮತ್ತೆ ನನ್ನ ಅನಿಸಿಕೆಗಳು.

ಗಣ್ಯ ವ್ಯಕ್ತಿ ಗಳ ಭೇಟಿ

೨೦೧೪ ರಲ್ಲಿ ನಾನು ಕೆಲವು ಸಮಾರಂಭ ಗಳಲ್ಲಿ ಭಾಗವೈಸುವು ಅವಕಾಶಗಳು ನನ್ನ ಸ್ನೇಹಿತ ಕಿಟ್ಟಿ ಇಂದ ನನ್ನಗೆ ದೊರೆಯಿತು. ಅಂತಹ ಸಮಾರಂಭಗಳಲ್ಲಿ ನನ್ನಗೆ ಸಮಜದಲ್ಲಿ ಹೆಸರು ಮಾಡಿದ ಗಣ್ಯ ವ್ಯಕ್ತಿಗಳ ಭೇಟಿ ಮಾಡುವ ಅವಕಾಶ ಸಿಕ್ಕಿತು . ಶ್ರೀ ರವಿ ಬೆಳಿಗರೇ , ಶ್ರೀ ಜಯಂತ್ ಕಾಯಿಕಿಣಿ , ಶ್ರೀ ರಾಧಾಕೃಷ್ಣ , ಕುಮಾರಿ ರಾಧಿಕಾ ಪಂಡಿತ್ , ಕುಮಾರಿ ಅನುಶ್ರೀ , ಶ್ರೀ ರಾಹುಲ್ ದ್ರಾವಿಡ್. ಇವರ ಸಾಧನೆಗಳ ಮುಂದೆ ನಾನು ಅಲ್ಪ , ಇಂತಹ ಅವಕಾಶ ಕಲ್ಪಿಸಿಕೊಟ್ಟ ಕಿಟ್ಟಿ ನಿನ್ನಗೆ ನನ್ನ ವಂದನೆ.

ಕಲಿತ್ತಿದು.

ಚಿಕಮಗಳುರ್ ನಲ್ಲಿ ನನ್ನಗೆ ಸೆಮಿನಾರ್ ಕೊಡುವ ಅವಕಾಶ ಸಿಕ್ಕಿತು. ಸರಿ ಸುಮ್ಮಾರು ೧೦೦೦ ಜನ ಸೇರಿದ್ದ ಸಮಾರಂಭ , ದೊಡ್ಡ ಸಮಾರಂಭವೇ . ಅಲ್ಲಿಗೆ ಶ್ರೀ ರಾಧಾಕೃಷ್ಣ ಅವರೇ ಅಧ್ಯಕ್ಷರು. ಸಮಾರಂಭ ಜೋರಾಗಿ ನಡೆಯಿತು. ಸಮಾರಂಭದ ಕೊನೆಯಲ್ಲಿ ಸನ್ಮಾನ ನಡೆಯುವುದ್ ಇತ್ತು. ಸನ್ಮಾನ ನಡೆಯುವಾಗ ಅಚಾನಕ್ಕಾಗಿ ಅಥಿತಿ ಗಳು ಕುಳಿತ್ತಿದ ಟೇಬಲ್ ಮೇಲಿನ ಹಾಸುಗೆ ಕೆಳಗೆ ಬಿತ್ತು. ನಾನು ಎದ್ದು ಅಲ್ಲಿಯೇ ಇದ್ದ ಒಬ್ಬ ಹುಡುಗನ ಕೈ ಸನ್ನೆ ಮಾಡಿ ಕರೆಯುವ ಪ್ರಯತ್ನ ಮಾಡಿದೆ , ಆದರೆ ಶ್ರೀ ರಾಧಾಕೃಷ್ಣ ಅವರು ಕಾರ್ಯಕ್ರಮಕ್ಕೆ ತೊಂದರೆ ಆಗದಿರಲ್ಲಿ ಅಂತ ತಾವೇ ಅದನ ಎತ್ತಿ ಪಕ್ಕಕ್ಕೆ ಇಟ್ಟರು. ಇದ್ದಾನ ಕಂಡು ನಾನು ನನ್ನ ಅಲ್ಪ ತನದ ಮೇಲೆ ನಾಚಿಕ್ಕೆ ಪಟ್ಟಿಕೊಂಡೆ. ಇದೆ ರೀತಿ ಖ್ಯಾತ ನಟ ಜಾಕಿ ಚಾನ್ ಯಾವುದೊ ಕಾರ್ಯಕ್ರಮದಲ್ಲಿ ಮಾಡಿದು ಉಂಟು, ಇದರಿಂದ ನಾನು ಕಲಿತ್ತಿದು ನಮ್ಮ ಬಿಗುಮಾನ ಬಿಡಬೇಕು ಅನ್ನೋ ಪಾಠ.

ಕೈ ಸುಟ್ಟಿಕೊಂಡಿದು

ನನ್ನಗೆ ತೋಚಿದನ ಬರೆಯೋ ಹುಚ್ಚು. ಇದಕ್ಕೆ ಸ್ಫೂರ್ತಿ ನಾನೇ. ಇದನ ಎಲ್ಲರಿಗು ಪರಿಚೈಸಬೆಕು ಅಂತ ನನ್ನ ಸ್ನೇಹಿತ ನನ್ನಗೆ ಸಲಹೆ ಹೇಳಿದ. ನಾನು ಬೇಡವೆಂದರೂ ತಾನೇ ಮುಂದಾಗಿ ಕೆಲವಂದೋ ನನ್ನ ಬರಹಗಳನ ಅವನು ಪ್ರಕಟಣೆ ಮಾಡುವ ನಿರ್ಧಾರ ಮಾಡಿದ. ನಾನು ಅಗಲ್ಲಿ ಎಂದೇ , ನನ್ನಲು ವಿಚಿತ್ರ ಆಸೆ. ಇಬ್ಬರು ಹೋಗಿ ಕೆಲವು ಬರಹ ಗಳನ ಅಯಿದ್ದು ಪ್ರಕಾಶಕರ ಹತ್ತೀರ ಹೋದೆವು . ಪ್ರಕಾಶಕರು ಕೆಲವಂದನ ಪ್ರಕಟಿಸಲು ಒಪ್ಪಿದರು. ಅದಕ್ಕಾಗಿ ೫೦೦೦ ಖರ್ಚು ಆಗುವುದೆಂದು ಹೇಳಿದರು. ಕೆಲವು ಪ್ರಕಟವೂ ಆದವು. ಅದನ ಪ್ರಕಾಶಕರು ತಾವೇ ಮಾರುವುದಾಗಿ ಹೇಳಿದರು. ಒಂದು ತಿಂಗಳ ನಂತರ ಪ್ರಕಾಶಕರು ಕಾಲ್ ಮಾಡಿ ಇನ್ನಷ್ಟು ಪ್ರಕಟಿಸಲು ತಿರ್ಮಾನಿಸಿದೇವೆ ಬನ್ನಿ ಅಂತ ಹೇಳಿದರು. ನಾವು ಅಲ್ಲಿಗೆ ಹೋದೆವು , ಅವರು ಈ ಬಾರಿ ನಮ್ಮಗೆ ೧೦೦೦ ನಮ್ಮ ಕೈ ಗೆ ಇಟ್ಟು ಇದು ನಿಮ್ಮ ಲಾಭ ಅಂತ ಹೇಳಿದರು. ನಾವು ಹಿಗ್ಗಿ ಹೋದೆವು. ಹೊಸ ಪ್ರಕಟಣೆಗೆ ೧೦೦೦೦ ಬೇಕೆಂದು ಹೇಳಿದರು , ನಾವು ನಂಬಿ ಅದನ ಕೊಟ್ಟೆವು. ಕೊಟ್ಟು ಒಂದು ವಾರ ಆದಮೇಲೆ ಪ್ರಕಾಶಕರಿಗೆ ಕಾಲ್ ಮಾಡಿದಾಗ ನಮ್ಮಗೆ ತಿಳಿದ ಸಂಗತಿ , ನಮ್ಮ ಬಳ್ಳಿ ಹಣ ತೆಗೆದು ಕೊಂದ ವ್ಯಕ್ತಿ ಕೆಲಸ ಬಿಟ್ಟಿರುವುದಾಗಿ , ಆಮೇಲೆ ಅವನು ಇದೆ ಹಲವರಿಗೆ ಮೋಸ ಮಾಡಿರುವಾದಾಗಿ ತಿಳಿದು ಬಂತು. ಗೊತ್ತು ಇರದ ಕೆಲಸಕ್ಕೆ ಕೈ ಹಾಕಬೇಕು ಅನುವಾಗ ಮೊದಲು ವಿಚಾರ ಮಾಡಬೇಕು ಅನ್ನೋ ಸತ್ಯ ನನ್ನಗೆ ಅರ್ಥ ಆಯಿತು

ವಯಕ್ತಿಕ ನೋವು

ನನ್ನ ಎಂಗೇಜ್ಮೆಂಟ್ ಮುರಿದು ಬಿದ್ದಿದು ನನ್ನ ವಯಕ್ತಿಕ ಬದುಕಿನಲ್ಲಿ ನನ್ನಗೆ ಮೂಡಿಸಿದ ನಿರಾಸೆ. ನನ್ನಿಂದ ಆದ ತಪ್ಪು ಏನು ಎಂದು ನನ್ನಗೆ ಇಲ್ಲಿವರೆಗೂ ತಿಳಿದಿಲ್ಲ. ಆದರೆ ಈ  ಅವಗಡದಿಂದ ನಾನು ಸಾಕಷ್ಟು ಕಲಿತ್ತಿದು ಇದೆ. ಜನರ ಕೊಂಕು ಮಾತಗಳು , ಇಲ್ಲ ಸಲ್ಲದ ಹೇಳಿಕೆಗಳು , ಮನ ಬಂದಂತೆ ಮಾತಾಡುವ ಧ್ವನಿಗಳು. ಇವೆಲ್ಲವೂ ನನ್ನ ದಿನ ನಿತ್ಯದ ಬದುಕಿನ ಮೇಲೆ ಸ್ವಲ್ಪ ದಿನ ಪರಿಣಾಮ ಬಿರಿದು ನಿಜ ,   ಆದರೆ ನನ್ನ ತಪ್ಪು ಇಲ್ಲದೆ ಇರುವಾಗ ಯೋಚಿಸಿ ಅರ್ಥ ಇಲ್ಲ ಅನ್ನೋ ಸತ್ಯ ನನ್ನಗೆ ಅರಿವು ಮೂಡಿಸಿದು ನನ್ನ ಗುರು ಜಯಂತ್ ಕಾಯಿಕಿಣಿ ಸಾಹೇಬರು.
ಎಲ್ಲರಿಗು ಹೊಸ ವರುಷದ ಶುಭಾಶಯಗಳು

                ಇಂದ ಬಡಪಾಯಿ 
                         ಹರೀಶ್ ಎಸ್ ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಅನುಭವವೇ ದೊಡ್ಡ ಗುರು! ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

Dhanyavadagalu

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.