ನನ್ನ ಬರಹಗಳು

ನನ್ನ ಮೊದಲ ಕಂಪಾಸ್ ಬಾಕ್ಸ.

ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ ತಂದು ಕೊಡುತ್ತೇನೆ" ಎಂದೆ. "ಇಲ್ಲಾ ನನಗೆ ಈಗಲೇ ಬೇಕು, ನಾನು ನಿನ್ನ ಹಾಗೆ ಟೈಪ್ ಮಾಡಬೇಕು, ಅದು ಪರದೆ ಮೇಲೆ ಬರುವುದನ್ನು ನೋಡಬೇಕು, ಅದಕ್ಕೆ ನನಗೆ ಒಂದು ಕಂಪ್ಯುಟರ್ ಬೇಕು" ಅಂದಳು. ನಾನು ಹಾಗೋ ಹೀಗೋ ಅವಳನ್ನು ಪುಸಲಾಯಿಸಿತ್ತಾ ಸ್ವಲ್ಪ ದಿನ ಕಾಲ ಕಳೆದೆ. ನನ್ನ ಮಗಳು ಬಿಡಬೇಕಲ್ಲ, ಒಮ್ಮೆ ಏನನ್ನಾದರೂ ಕೇಳಿ ಬಿಟ್ಟರೆ ಮುಗಿಯಿತು, ತಂದು ಕೊಡುವವರೆಗೂ ಅವಳಿಗೆ ಸಮಾಧಾನವಿಲ್ಲ. ಬಹುಷಃ ಎಲ್ಲಾ ಮಕ್ಕಳು ಹೀಗೆ ಇರಬೇಕೇನೋ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನನ್ನ ಬರಹಗಳು