ನನ್ನೊಲವು ನಿನಗಾಗಿ

0

ಒಲವಿನಿಂದ ಬರೆದ ಕವಿತೆ
ಸಾಗರದ ಅಲೆಗಳಲ್ಲಿ ಸಿಲುಕಿರಲು
ಹೃದಯಗೀತೆ ಹಾಡಬೇಕಿದೆ
ಮನದಲ್ಲಿ ನೀ ತುಂಬಿರಲು!

ಕನಸು ಕಾಣುವ ಕಣ್ಣಿಗೆ
ಕಣ್ತುಂಬಿಕೊಳ್ಳಬೇಕಂತೆ ನಿನ್ನ ಚೆಲುವು
ಕಾದು ಕುಳಿತಿರುವ ಹೃದಯಕೆ
ಹೊತ್ತು ತರುವೆಯಾ ಪ್ರೀತಿಯ ಒಲವು!

ನನ್ನ ಉಸಿರಿನ ಕಣಕಣದಲ್ಲಿ
ಸೂಚನೆ ಇಲ್ಲದ ನಿನ್ನದೇ ಯೋಚನೆ
ನಿನ್ನ ನೆನಪಿನ ಜೊತೆಯಲ್ಲಿ
ಕಾಯುತ್ತಿದೆ ನನ್ನೀ ಹೃದಯದರಮನೆ!

ನಿನ್ನೊಲುಮೆಯ ಒಂದು ನೋಟಕಾಗಿ
ಈ ಜೀವ ಮಿಡಿಯುತಿದೆ ಇಂದು
ಕೊನೆಯುಸಿರುವ ನಿಲ್ಲುವ ಮೊದಲೇ
ಒಂದು ಬಾರಿ ಬರಬಾರದೇ ನೀನಿಂದು!

ಪ್ರಿಯಾಂಕ✍

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.