ನಗುವೇ ನಲಿವು - 1

3.666665

ಮದ್ಯಪಾನ ಸೇವಿಸಿ ಚಾಲನೆ ಮಾಡಬಾರದು:
ಒಂದು ದಿನ ಗುಂಡ ಕುಡಿದು ಸ್ಕೂಟರಲ್ಲಿ ಹೋಗುತಿದ್ದ, ರಸ್ತೆಯ ಬದಿಯಲ್ಲಿ ಪೋಲಿಸ್ರು ಅವನನ್ನು ಹಿಡಿದು  ಫೈನ್ ಹಾಕಿದ್ರು.
ಮತ್ತೊಂದು ದಿನ ಗುಂಡ ಅದೇ ರೀತಿ ಕುಡಿದು ರಸ್ತೆಯಲ್ಲಿ ಹೋಗುತಿದ್ದ. ಪೊಲೀಸರು ಅವನನ್ನು ಹಿಡಿದರು.
ಪೋಲಿಸ್ : ಎ, ಮದ್ಯಪಾನ ಸೇವಿಸಿ ಚಾಲನೆ ಮಾಡಬಾರದು ಎಂದು ಗೊತ್ತಿಲ್ವ ನಿನಗೆ?
ಗುಂಡ : ನನಗೆ ಗೊತ್ತು ಸರ್ ಅದಕ್ಕೆ ನಾನು ಸೈಕಲ್ ಮೇಲೆ ಹೋಗ್ತಾ ಇರೋದು ಅಂದ .

ಚಿಲ್ಲರೆ.
ಗುಂಡ:  ಹಾಫ್ ಟೀ ಎಷ್ಟು?.
ಅಂಗಡಿಯವ: ಎರಡು ರುಪಾಯಿ.
ಗುಂಡನ ಹತ್ತಿರ ಚಿಲ್ಲರೆ ಇರಲಿಲ್ಲ ಅದಕ್ಕೆ ೧೦ ರುಪಾಯಿ ಕೊಟ್ಟು ಉಳಿದ ಚಿಲ್ಲರೆ ಕೇಳಿದ.
ಅಂಗಡಿಯವ: ಸಾರ್, ನನ್ನ ಅತ್ತಿರ ಚಿಲ್ಲರೆ ಇಲ್ಲ, ಇದ್ದರೆ ನೀವೆ ಕೊಡಿ ಅಂದ.
ಗುಂಡ: ಏನಯ್ಯ, ನನ್ನ ೧೦ ರೂಪಾಯಿಗೆ ಚಿಲ್ಲರೆ ನಾನೆ ಕೊಡಬೇಕಾ ಅಂದ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.