ನಂಬದವರಿಗೆ ದೇವರಿಲ್ಲ

3

ನಂಬದವರಿಗೆ ದೇವರಿಲ್ಲ;
ನಂಬಿದವರಿಗೂ ಸಿಕ್ಕಿಲ್ಲ…
ಪ್ರೀತಿಸದವರಿಗೆ ಪ್ರೀತಿಯಿಲ್ಲ;
ಪ್ರೀತಿಸಿದವರೆಲ್ಲರಿಗೂ ಸಿಕ್ಕಿಲ್ಲ…
ನಿಮ್ಮ ಬಗ್ಗೆ ನಿಮಗೇ ತಿಳಿದಿಲ್ಲ;
ನನ್ನ ಬಗ್ಗೆ ನನಗೂ ಇಲ್ಲ…
ಆಸೆಯೇ ದುಃಖಕ್ಕೆ
ಮೂಲವೆಂದ ಬುದ್ಧನಿಗೂ,
ತನ್ನ ತತ್ವವ ಜಗತ್ತಿಗೆ
ಹರಡಿಸುವ ಆಸೆ…
ಎಲ್ಲರ ಜೀವನ ಇರುವುದಿಷ್ಟೇ
ಅರ್ಧಬೆಂದ ದೋಸೆ;
ಅರ್ಧಬೆಂದ ದೋಸೆ…

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.