ದೇವರು...ವ್ಯಕ್ತಿಯೋ ಅಸ್ತಿತ್ವವೋ?..

4.666665

ಬುದ್ಧನ ಭಕ್ತನೊಬ್ಬನ ಬಳಿ ಬುದ್ಧನ ಕಟ್ಟಿಗೆಯ ವಿಗ್ರಹವಿತ್ತು. ಎಲ್ಲೇ ಹೋದರೂ ಸು೦ದರವಾದ ಭಕ್ತನ ಜೊತೆಯಲ್ಲಿದ ಆ ವಿಗ್ರಹ ಅರಿವನ್ನು ಪ್ರಚೋದಿಸುತ್ತಿತ್ತು. ಅದೊ೦ದು ರಾತ್ರಿ ಸಹಿಸಲಸಾಧ್ಯವಾದ ಕೊರೆಯುವ ಚಳಿ!
ಕಟ್ಟಿಗೆಯ ಬುದ್ಧ ಮಾತನಾಡಲು ಶುರುಮಾಡಿತು.
'ಈ ಛಳಿಯಲ್ಲಿ ಕಟಕಟನೇ ಹಲ್ಲು ಕಡಿದು ಕೊ೦ಡಿರುವುದರ ಬದಲು ನನ್ನನ್ನು ಸುಟ್ಟು ಬಿಡಬಾರದೇಕೆ? ಬೆ೦ಕಿಗೆ ನಾನು ಉರುವಲಾಗುತ್ತೇನೆ.'
ಭಕ್ತ ಹೇಳಿದ;
'ಅದು ಹೇಗೆ ಸಾದ್ಯ? ನಿನಗೆ ಅಗೌರವ ತೋರುವುದನ್ನು ನಾನು ಕಲ್ಪಿಸಿಕೊಳ್ಳುವುದಕ್ಕಾದರೂ ಆದೀತೇ?'
ವಿಗ್ರಹ ಹೇಳಿತು;
'ನೀನು ನನ್ನನ್ನು ಕೇವಲ ಈ ರೂಪದಲ್ಲಿ ಮಾತ್ರ ನೋಡುತ್ತಿದ್ದೀಯಾ ಎ೦ದರೆ ನಿನಗೆ ನಾನು ಸ೦ಪೂರ್ಣ ದಕ್ಕಿಲ್ಲವೆ೦ದೇ ಅರ್ಥ. ನಿನ್ನೊಳಗೂ ನನ್ನ ಅಸ್ತಿತ್ವವಿದೆ.

ನಿನ್ನೊಳಗೆ ನಾನು ನಡುಗುತ್ತಿದ್ದೇನೆ!!"

*****

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ ಡಾಕ್ಟ್ರೇ, ನಮ್ಮೊಳಗೆ ನಮ್ಮ ಉಸಿರಾಗಿದ್ದು ನಮ್ಮ ಅಸ್ಥಿತ್ವವೇ ಆಗಿರುವ, ದೇವರನ್ನು ನಾವು ಗುರುತಿಸದೇ ಹೋದರೆ, ಇನ್ನಾವ ಮಂದಿರ, ಗುರುದ್ವಾರಗಳಿಗೆ ಹೊದರೂ ಫಲವಿಲ್ಲ! ನನಗೆ ನನ್ನುಸಿರೇ ದೇವರು ಉಸಿರು ನಿಂತರೆ ನನ್ನನ್ನು ಕಾಯುವನಿನ್ನಾವ ದೇವರು? -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅತ್ಯ೦ತಿಕ ಸತ್ಯದ ಮಾರ್ಮಿಕತೆಯನ್ನು ಅರ್ಥೈಸಿಕೊ೦ಡ ಸುರೇಶ್ ರಿಗೆ ಧನ್ಯವಾದಗಳು.

ಎಂತಹ ನಗ್ನ ಸತ್ಯ ! ನಾನು ಉಳಿದನಂತರ ನನ್ನೊಳಗಿನ ಪರಮಾತ್ಮ ಉಳಿದನಂತರವಷ್ಟೆ ನಾವು ಸೃಷ್ಟಿಸಿದ ದೇವರು ! ನಿಜ ಸಾರ್ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.