ದಿ ಸರ್ಚ್ ಆಫ್ ಕಾಮನ್ ಮ್ಯಾನ್

5

ರಚನೆ: ಜಾನಕೀಸುತ (ಶ್ರೀ ಸೌಜನ್ಯ ಎಚ್.ಪಿ.)
 
ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
“ಸ್ವಚ್ಚ ಭಾರತ್”,
ನದಿ ಕೆರೆಗಳ ಕುಲುಷಿತ ನೀರಿನಲ್ಲಿ,
ನಗರಗಳ ವಾಯು ಮಾಲಿನ್ಯದಲ್ಲಿ,  
ಹಳ್ಳಿಗಳ ಬಯಲು ಶೌಚಾಲಯಗಳಲ್ಲಿ.
 
ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
“ಜನ್ ಧನ್”.
ತೂತಾದ ಕಿಸೆಗಳಲ್ಲಿ,
ಉಳಿತಾಯವಿಲ್ಲದ ಬ್ಯಾಂಕ್ ಖಾತೆಗಳಲ್ಲಿ,
ಸರಕಾರದಿಂದ ಬಾರದಿರುವು ಪರಿಹಾರದಲ್ಲಿ.
 
ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
“ಬೇಟಿ ಬಚಾವ್ ಬೇಟಿ ಪಡಾವ್”.
ಹತ್ಯೆಯಾದ ಭ್ರೂಣಗಳಲ್ಲಿ,
ಅತ್ಯಾಚಾರಕ್ಕೊಳಗಾದ ಹೆಣ್ಣುಗಳಲ್ಲಿ,
ವರದಕ್ಷಿಣೆ ಪೀಡಿತ ಸಂತ್ರಸ್ತೆಯರಲ್ಲಿ,
 
ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
“ಅನ್ನ ಭಾಗ್ಯ”.
ಬಡವರ ಬೆನ್ನಿಗಂಟಿದ ಹೊಟ್ಟೆಗಳಲ್ಲಿ,
ಶ್ರೀಮಂತರು ಉಂಡು ಬಿಸಾಡಿದ ಎಲೆಗಳಲ್ಲಿ,
ಕಾಳಧನಿಕರ ಅಕ್ರಮ ದಾಸ್ತಾನಿನಲ್ಲಿ.
 
ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
“ಸಾಲ ಮನ್ನಾ”.
ಅತ್ಮಹತ್ಯೆಗೊಳಗಾದ ರೈತರ ಹೆಣಗಳಲ್ಲಿ,
ರೈತ ವಿಧವೆಯರ ಗೋಳಿನ ಬಾಳಿನಲ್ಲಿ,
ಅನಾಥರಾದ ಮಕ್ಕಳ ಕಣ್ಣೀರಿನಲ್ಲಿ.
 
ತಾನೇ ಆರಿಸಿದ ರಾಜಕಾರಣಿಗಳ ದರ್ಪ ದೌಲತ್ತಿನಲ್ಲಿ,
ಅವರ ದೌರ್ಜನ್ಯ ದಬ್ಬಾಳಿಕೆಯ ಆಡಳಿತದಲ್ಲಿ,
ದನಿಯೆತ್ತಿ ಕೇಳಲು ಪಸೆಯಿಲ್ಲ ಅವನಿಗೆ,
ಏನಾದವು? ಯಾರಿಗಾದವು?
ನಿಮ್ಮ
“ಸಬ್ ಕಾ ಸಾತ್, ಸಬ್ ಕಾ ವಿಕಾಸ್”
“ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು”
ಘೋಷಣೆಗಳು.
----------*****----------
ಸೂಚನೆ : ಇಲ್ಲಿ ಬಳಸಿರುವ ಚಿತ್ರ ಗೂಗಲ್ ಕಂಪೆನಿಯ ಡೂಡಲ್ ಕಲಾವಿದರಾದ Olivia Huynh, 2015ರಲ್ಲಿ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ದಿವಂಗತ ಆರ್.ಕೆ. ಲಕ್ಷಣ್ ರ 94ನೇ ಜನ್ಮೋತ್ಸವದ ಪ್ರಯುಕ್ತ ರಚಿಸಿದ ಆದರೆ ಕಾರಾಣಂತರದಿಂದ ಪ್ರಕಟವಾಗದೇ ಉಳಿದ ಡೂಡಲ್.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.