ದಸರಾ ಸಡಗರ

0

ಬಂತು ನಮ್ಮ ನಾಡಿಗೆ ಶರನ್ನವರಾತ್ರಿಯ ಸಡಗರ
ನವದುರ್ಗೆಯರ ಪೂಜೆ ನೋಡಲು ನಯನ ಮನೋಹರ
ನಿತ್ಯ ಶಾಲೆಗೆ ರೋಗುತಿದ್ದ ಮಕ್ಕಳಿಗೆ ರಜೆಯ ಸಂಭ್ರಮ
ಮುಚ್ಚಿ ಬಚ್ಚಿಟ್ಟ ಬೊಂಬೆಗಳ ಅಲಂಕಾರ ನೋಡಲು ವಿಹಂಗಮ

ಕನ್ನಡ ನಾಡಲ್ಲಿ ಈ ನವರಾತ್ರಿಯೇ ದಸರಾ
ದಸರಾ ಎಂದರೆ ನೆನಪಾಗುವುದೇ ಮೈಸೂರು ನಗರ
ಕಂಗೊಳಿಸುವುದು ಹೊದ್ದು ವಿದ್ಯುದೀಪಾಲಂಕಾರ
ನೋಡಲೆರಡು ಕಣ್ಗಳು ಸಾಲದು ಸಂಸ್ಕೃತಿಯ ತವರೂರ

ನವರಾತ್ರಿಯಲಿ ನಡಯುವುದು ದಿನಕೊಂದು ಉತ್ಸವ
ದಶಮಿಯಂದು ವಿಶ್ವ ವಿಖ್ಯಾತ ಅಂಬಾರಿ ಮಹೋತ್ಸವ
ಅರಮನೆಯಲಿ ಪ್ರತಿದಿನವೂ ಪೂಜಾ ಕೈಂಕರ್ಯ
ಉತ್ಸವಕೆ ಮುಕುಟವಿದುವೆ ಗಜಪಡೆಯ ಗಾಂಭೀರ್ಯ

ತಾಯಿ ಚಾಮುಂಡಿ ಮಹಿಷನ ವಧಿಸಿದ ಈ ದಿನ
ಶ್ರೀ ರಾಮನು ದುಷ್ಟ ರಾವಣನ ಕೊಂದ ಮಹಾದಿನ
ಬನ್ನಿ ಸಂಹರಿಸುವ ಮನದಿ ಅಸುರ ಗುಣಗಳ ಈ ಸುದಿನ
ಮನುಷ್ಯತ್ವವ ಬೆಳೆಸಿಕೊಂಡು ಆಚರಿಸುವ ಹಬ್ಬ ಹರಿದಿನ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.