ತರಕಾರಿಯೇ ಅಲ್ಲದ ತರಕಾರಿಗಳು!(ಪ್ರಬಂಧ)

5

 

 

 

"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿಗಳಾದ ಹಕ್ಲ್ ಸೌತೆ ಕಾಯಿ, ಬೆಂಡೆ ಕಾಯಿ, ಹೀರೆ ಕಾಯಿ ಇತ್ಯಾದಿಗಳು ಮನೆಯಲ್ಲಿಲ್ಲ ಎಂದೇ ಅರ್ಥ. ಸುತ್ತ ಮುತ್ತ ಹತ್ತೆಂಟು ಮೈಲಿಗಳ ಫಾಸಲೆಯಲ್ಲಿ ತರಕಾರಿ ಮಾರುವ ಅಂಗಡಿಗಳೇ ಇಲ್ಲದ ಆ ಕಾಲದಲ್ಲಿ, ದಿನ ನಿತ್ಯದ ಅಡುಗೆಗೆ ತರಕಾರಿಯನ್ನು ಅಂಗಡಿಯಿಂದ ತರುವ ವಿಚಾರವೇ ಯಾರ ಅರಿವಿನಲ್ಲೂ ಇರಲಿಲ್ಲ ಬಿಡಿ. ಅದರಲ್ಲೂ ಅಮ್ಮಮ್ಮನ ತರಕಾರಿ - ಅಡುಗೆಗಳ ಚಿಂತನೆಯು, ಅವರ ಬಾಲ್ಯದ ದಿನಗಳ, ಅಂದರೆ, ಕಳೆದ ಶತಮಾನದ ಮೊದಲ ಅರ್ಧದ ಪ್ರಭಾವಕ್ಕೆ ಒಳಗಾಗಿತ್ತು. ಪ್ರತಿದಿನದ ಅಡುಗೆಗೆ ತರಕಾರಿ ಇಲ್ಲ ಎಂದು ಅವರೆಂದೂ ಚಿಂತೆ ಮಾಡಿದವರೇ ಅಲ್ಲ, ಮನೆಯ ಸುತ್ತಲಿನ ಯಾವುದಾದರೂ "ವಸ್ತು" ವನ್ನು ಬಳಸಿ ಅಡುಗೆ ಮಾಡುವ ಪಾಕ ಪ್ರವೀಣರು ಅವರು ಮತ್ತು ಅವರ ತಲೆಮಾರಿನ ಎಲ್ಲರೂ.

 

ಕಿಸ್ಕಾರ್ ಗಿಡ ಎಂಬುದು ನಮ್ಮ ಮನೆಯ ಹಿಂದಿನ ಗುಡ್ಡಗಳಲ್ಲಿ ತನ್ನಷ್ಟಕ್ಕೇ ಬೆಳೆಯುತ್ತಲಿದ್ದ ಕುರುಚಲು ಗಿಡ (ಕೇಪ್ಳ, ಇಕ್ಸೋರಾ). ನಾಲ್ಕು ದಳದ ಪುಟ್ಟ ಪುಟ್ಟ ಕೆಂಪು ಹೂವುಗಳ ಗೊಂಚಲು - ಹೂವಿನ ಆಕಾರವೂ ಚಂದ - ಚಂದದ ನಾಲ್ಕು ಪುಟಾಣಿ ದಳಗಳಿಗೆ, ಅರ್ಧ ಇಂಚು ಉದ್ದದ ಪೈಪಿನಾಕಾರದ ಆಧಾರ; ಗೊಂಚಲು ಗೊಂಚಲಾಗಿ ಗಿಡದ ತುದಿಯಲ್ಲಿ ಹೂಬಿಡುತ್ತದೆ. ಬೆಳಗಿನ ಅಥವಾ ಸಂಜೆಯ ಬಿಸಿಲಿನಲ್ಲಿ ತುಂಬಾ ಚಂದದ ಗೊಂಚಲು ಅದು. ಒಂದಿಪ್ಪತ್ತು ಮೂವತ್ತು ಹೂವಿನ ಗೊಂಚಲುಗಳನ್ನು ಕಿತ್ತು ತಂದು, ಹದ ಮಾಡಿ, ತೆಂಗಿನ ಕಾಯಿ ತುರಿ ಮತ್ತು ಮೆಣಸಿನಕಾಯಿಜೊತೆ ಹುರಿದು, ತಿರುವಿದರೆ ತಂಬಳಿ ತಯಾರ್!

"ಕಿಸ್ಕಾರು ಹೂವು ಒಡಲಿಗೆ ಭಾರೀ ಒಳ್ಳೆಯದು. ವರ್ಷಕ್ಕೆ ಒಂದೆರಡು ಸರ್ತಿಯಾದರೂ ತಿನ್ಕ್" ಎನ್ನುತ್ತಾ, ಆ ಹೂವುಗಳ ತಂಬಳಿ ಮತ್ತು ಚಟ್ನಿಗಳನ್ನು ಆಗಾಗ ಮಾಡುತ್ತಿದ್ದರು. ಈ ರೀತಿ ವರ್ಷಕ್ಕೆ ಒಂದು ಬಾರಿಯಾದರೂ ತಿನ್ನಬೇಕು ಎಂಬ ನಂಬಿಕೆ ಹೊತ್ತಿದ್ದ ಹಲವಾರು ಸಸ್ಯೋತ್ಪನ್ನಗಳು ನಮ್ಮ ಹಳ್ಳಿಯಲ್ಲಿದ್ದವು! ಕಿಸ್ಕಾರ್ ಹೂವಿನ ಔಷಧೀಯ ಗುಣಗಳು ಯಾವುವೆಂಬುದು ನಮಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ; ಬಿಳಿ ಹೂವು ಬಿಡುವ ಪ್ರಬೇಧದ ಕಿಸ್ಕಾರು ಗಿಡಗಳು ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿ ನಮ್ಮ ಹಳ್ಳಿಯಲ್ಲಿದ್ದವು - ಅದರ ಬೇರನ್ನು ನಾಟಿ ಔಷಧಿ ಪ್ರವೀಣರು ಸಂಗ್ರಹಿಸುತ್ತಿದ್ದದನ್ನು ನೋಡಿದ್ದೆವು. ಆ ರೀತಿ ಬಿಳಿ ಕಿಸ್ಕಾರು ಗಿಡಗಳ ಬೇರುಗಳನ್ನು ಔಷಧಿಗಾಗಿ ಕಿತ್ತು, ಕಿತ್ತು, ಬಿಳಿ ಹೂವು ಬಿಡುವ ಕಿಸ್ಕಾರು ಗಿಡಗಳು ನಮ್ಮ ಮನೆಯ ಸುತ್ತಲಿನ ಕಾಡುಗಳಿಂದ ಕಣ್ಮರೆಯಾಗಿ ಹೋಗಿದ್ದಂತೂ ದಿಟ.

"ಮಕ್ಕಳೇ, ಇವತ್ತು ನಿಮಗೆ ಒಂದ್ ಹೊಸಾ ತಿಂಡಿ ಮಾಡಿ ಕೊಡ್ತೆ, ಅಕ್ಕಾ?" ಎನ್ನುತ್ತಾ, ಅಮ್ಮಮ್ಮ ತಮ್ಮ ಕೆಂಪುಸೀರೆಯ ಸೆರಗಿನ ಮಡಿಲಲ್ಲಿ ಸಂಗ್ರಹಿಸಿ ತಂದಿದ್ದ ದೊಡ್ಡ ದೊಡ್ಡ ಹೂವುಗಳನ್ನು ಜಗಲಿಯ ನೆಲದ ಮೇಲೆ ಸುರಿದರು. ಕೆಳಗೆ ಬಿದ್ದದ್ದು ಹಳದಿ ಬಣ್ಣದ ಹತ್ತಾರು ಹೂವುಗಳೂ! "ಇದು ಎಂತ ಹೂವು?" "ಅಷ್ಟೂ ಗೊತ್ತಾತಿಲ್ಯಾ, ಇದು ಸೀಂ ಗುಂಬಳ ಹೂ, ಅದೇ ಎರಡುಮುಡಿ ಗದ್ದೆ ಅಂಚಿನಲ್ಲಿ ಬೆಳ್ಕಂಡಿತ್ತಲೆ, ಅದೇ" ಎನ್ನುತ್ತಾ, ಆ ಗುಂಬಳ ಹೂವುಗಳನ್ನು ಚೊಕ್ಕಟಮಾಡಿ, ಕತ್ತರಿಸತೊಡಗಿದರು. ಸಿಹಿ ಗುಂಬಳ ಬಳ್ಳಿಯಲ್ಲಿ ಗಂಡು ಹೂ, ಹೆಣ್ಣು ಹೂ ಎಂಬ ಎರಡು ತೆರನಾದ ಹೂ ಬಿಟ್ಟಿದ್ದನ್ನು ಗದ್ದೆ ಅಂಚಿನಲ್ಲಿ ದಿನಾ ನೋಡುತ್ತಿದ್ದೆವು. ಅವುಗಳಲ್ಲಿ ಗಂಡು ಹೂವುಗಳನ್ನು ಮಾತ್ರ ಆಯ್ದು ತಂದಿದ್ದರು. ಹೆಣ್ಣು ಹೂವುಗಳು ಕಾಯಿ ಬಿಡುವುದರಿಂದಾಗಿ, ಅವುಗಳನ್ನು ಕೊಯ್ದಿರಲಿಲ್ಲ.

ಅಕ್ಕಿಯನ್ನು ಮೆಣಸಿನ ಕಾಯಿ ಜೊತೆ ರುಬ್ಬಿ, ಗುಂಬಳ ಹೂವುಗಳನ್ನು ಸಣ್ಣದಾಗಿ ಹೆಚ್ಚಿ ಎರಡನ್ನೂ ಮಿಶ್ರಣ ಮಾಡಿ, ದೋಸೆಕಲ್ಲಿನಲ್ಲಿಟ್ಟು ಬೇಯಿಸಿದರು. ಅಮ್ಮಮ್ಮ ಅಂದು ತಯಾರಿಸಿದ "ಹೊಸ" ತಿಂಡಿ ಎಂದರೆ, "ಸೀಂ ಗುಂಬಳಹೂವಿನ ದೋಸೆ" ಅಥವಾ "ಸೀಂ ಗುಂಬಳ ಹೂವಿನ ಚಟ್ಟಿ". ನಾವು ಚಪ್ಪರಿಸಿ ತಿಂದೆವು - ಮಕ್ಕಳ ಬಾಯಿಗೆ ಎಲ್ಲಾ ತಿಂಡಿಗಳೂ ರುಚಿರುಚಿಯಾಗಿ ಕಾಣುತ್ತದೆಯೊ? ಇದೇ ರೀತಿ ಕೆಸುವಿನ ಎಲೆಯ ಚಟ್ಟಿ, ಹೀರೆ ಕಾಯಿ ಚಟ್ಟಿ, ಬದನೆಕಾಯಿ ಚಟ್ಟಿ ಮೊದಲಾದವುಗಳನ್ನು ತಯಾರಿಸುತ್ತಿದ್ದರು.

ಮಳೆಗಾಲದ ಒಂದು ದಿನ; ಆಗ ಮಳೆಗಾಲದಲ್ಲಿ ತರಕಾರಿಗಳಿಗೆ ತೀವ್ರ ಅಭಾವವಿತ್ತು. ಅಂದು ಊಟಕ್ಕೆ ಬಡಿಸಿದ್ದ ಪಲ್ಯ ಸ್ವಲ್ಪ ಗಟ್ಟಿ, ಸ್ವಲ್ಪ ಮೆದು, ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ ಸಪ್ಪೆಯಾಗಿತ್ತು! "ಇದೆಂತ ಪಲ್ಯ?" ಎಂದು, ಮುಖವನ್ನು ಒಂದು ರೀತಿ ಮಾಡಿಕೊಂಡು ಕೇಳಿದರೆ, "ನಿಮಗೆ ಮಕ್ಕಳಿಗೆ ಬಾಯಿರುಚಿ ಜಾಸ್ತಿ ಆಯ್ತು! ಆ ಪಲ್ಯ ತಿಂಬುಕೆ ಮುಖ ಎಂತಕೆ ವಾರೆ ಮಾಡ್ತೆ? ಈ ಮಳೆಗಾಲದಲ್ಲಿ ಬೇರೆಂತ ತರಕಾರಿ ಇತ್? ಅದು ಹಲಸಿನ ಮಗಡದ ಪಲ್ಯ, ಗೊತ್ತಾಯಿಲ್ಯಾ?" ಎಂದು ಸ್ವಲ್ಪ ಕಟುವಾಗಿ ನುಡಿದರು ಅಮ್ಮಮ್ಮ. ಹಲಸಿನ ಹಣ್ಣಿನ ತೊಳೆಯನ್ನು ಬಿಡಿಸಿದ ನಂತರ, ಅದರ ಮುಳ್ಳು ಮತ್ತು ತೊಳೆಯ ಮಧ್ಯದಲ್ಲಿರುವ ದಪ್ಪನೆಯ ಮೆದು ಭಾಗವೇ ಹಲಸಿನ ಮಗಡ. ಮುಳ್ಳನ್ನು ಬೇರ್ಪಡಿಸಿ, ಆ ಮೆದು ಭಾಗವನ್ನೇ ತರಕಾರಿಯ ರೀತಿ ಸಣ್ಣದಾಗಿ ಕತ್ತರಿಸಿ, ಪಲ್ಯ ಮಾಡುವ ಪರಿಪಾಠ. ಮುಖ್ಯವಾಗಿ, ಮಳೆಗಾಲದ ಜಿರಾಪತಿ ಮಳೆಗೆ ಬೆದರಿ, ಯಾವುದೇ ತರಕಾರಿಗಳೂ ಮನೆಸುತ್ತ ಬೆಳೆಯದೇ ಇದ್ದಾಗ, ಹಲಸಿನ ಮಗಡದಂತಹ ವಿಚಿತ್ರ ತರಕಾರಿಗಳು, ಅಡುಗೆ ಮನೆಯಲ್ಲಿ ಅಟ್ಟಿಸಿಕೊಂಡು, ಊಟದಲ್ಲಿ ವ್ಯಂಜನಗಳ ರೂಪದಲ್ಲಿ ಎಲೆಯ ಮೇಲೆ ಪ್ರತ್ಯಕ್ಷವಾಗುತ್ತವೆ!

ನಮ್ಮೂರಲ್ಲಿ ತಂಬಳಿ, ಚಟ್ನಿ ಮಾಡಲು ಚಿತ್ರವಿಚಿತ್ರ ಸಸ್ಯೋತ್ಪನ್ನಗಳ ಬಳಕೆಯಾಗುತ್ತಿತ್ತು. ನೇರಲೆ ಗಿಡದ ಎಳೆ ಎಲೆ(ನೇರಲೆ ಕುಡಿ), ಚಳ್ಳೆ(ಸಳ್ಳೆ) ಕುಡಿ, ಚಾರ್ ಕುಡಿ, ಕಾಕಿ ಎಲೆ ಕುಡಿ, ಇವೆಲ್ಲವುದರಿಂದ ತಂಬಳಿ ಮಾಡುತ್ತಿದ್ದರು. ಒಂದೆಲಗ, ಉರುಗ, ಚಕ್ರಮುನಿ ಎಲೆಗಳಿಂದ ತಂಬಳಿ ತಯಾರಿಸುವಂತೆಯೇ, ಯಾವ್ಯಾವುದೋ ಕಾಡುಗಿಡಗಳ ಎಲೆಗಳಿಂದ ತಂಬಳಿ ತಯಾರಿಸುತ್ತಿದ್ದರು. ಹೀರೇಕಾಯಿ ಸಿಪ್ಪೆಯು ಅಧಿಕೃತ ತರಕಾರಿ ರೂಪದಲ್ಲಿ, ಚಣ್ನಿ ತಯಾರಿಸಲು ಬಳಕೆಯಾಗುತ್ತಿತ್ತು. ಗುಂಬಳ ಸಿಪ್ಪೆ, ಗುಂಬಳ ಬೀಜದಿಂದಲೂ ಅಡುಗೆ ಪದಾರ್ಥ ತಯಾರಿಸುತ್ತಿದ್ದರೆಂದು ಕೇಳಿದ್ದೆನಾದರೂ, ನಮ್ಮ ಮನೆಯಲ್ಲಿ ಅದರ ಬಳಕೆ ಇರಲಿಲ್ಲ. ಬಾಳೆ ಮರದ ದಿಂಡಿನ ಒಳಭಾಗದ ಮೆದುವಾದ ಲಾಠಿಯಂತಹ ತಿರುಳಿನಿಂದ ಪಲ್ಯ ತಯಾರಿಸುತ್ತಿದ್ದರು. ಅದನ್ನು ಕತ್ತರಿಸಿದಾಗ, ಬಿಳೀಕೂದಲಿನಂತೆ ನಾರುಗಳ ರಾಶಿ ಕಾಣಿಸುತ್ತಿತ್ತು. "ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಒಂದು ಸಲವಾದರೂ ತಿನ್ಕ್, ಹೊಟ್ಟೆಯಲ್ಲಿ ಅಕಸ್ಮಾತ್ ಸೇರಿಹೋದ ಕೂದಲು ಅದರಿಂದ ಕರಗಿ ಹೋತ್" ಎನ್ನುತ್ತಿದ್ದರು ಅಮ್ಮಮ್ಮ. ಅದರ ಪಲ್ಯದ ರುಚಿ ಮಾತ್ರ ಅಷ್ಟಕ್ಕಷ್ಟೆ. ಬಾಳೆ ಹೂವಿನ ಚಟ್ನಿ ಮಾತ್ರ ಸಾಕಷ್ಟು ರುಚಿಕರವಾಗಿದ್ದು, ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತಿತ್ತು.

ಬೇಲಿ ಸಾಲಿನಲ್ಲಿ ಬೆಳೆಯುವ ಒಂದು ಕಾಡುಬಳ್ಳಿಯಲ್ಲಿ ಬಿಡುತ್ತಿದ್ದ ಒಂದು ಅಡಿ ಉದ್ದದ ಕಾಯಿ ಅಥವ ಕೋಡನ್ನು ಸಹಾ ತರಕಾರಿಯಾಗಿ ಬಳಸುತ್ತಿದ್ದರು. ಅವರೆಕಾಯಿಯ ಮೆಗಾರೂಪ, ಮೆಗಾಗಾತ್ರ, ಒಂದಡಿ ಉದ್ದ, ಎರಡಿಂಚು ಅಗಲದ ಆ ಹಸಿರು ಕಾಯಿಯನ್ನು ಅವರೆಕಾಯಿ ಅಥವಾ ಶಂಬೆ ಕಾಯಿ ಎಂದು ಕರೆಯುತ್ತಿದ್ದರು. ಅದರ ಬೀಜಗಳೋ ಒಂದಿಂಚು ಉದ್ದನೆಯವು! ಅದನ್ನು ಕತ್ತರಿಸಿ ಪಲ್ಯ ಅಥವಾ ಹುಳಿ ಮಾಡುತ್ತಿದ್ದರೆಂದು ನೆನಪು - ಬೇಯಿಸಿದ ಆ ಕಾಯಿಯ ಮೇಲೋಗರವನ್ನು ತಿಂದರೆ, ನನಗಂತೂ ಮರದ ಚೂರುಗಳನ್ನು ತಿಂದ ಹಾಗಾಗುತ್ತಿತ್ತು! ಊಟಕ್ಕೆ ಅದು ಸೇರುವುದೇ ಇಲ್ಲವೆಂದು ನಾನು ಹಠ ಹಿಡಿದದ್ದರಿಂದ, ನಮ್ಮ ಮನೆಯಲ್ಲಿ ಅಡುಗೆಗಾಗಿ ಅದರ ಬಳಕೆ ಇರಲಿಲ್ಲ.

ಕ್ರಮೇಣ ನಮ್ಮ ಹಳ್ಳಿಯ ಅಂಗಡಿಗಳಲ್ಲಿ ತರಕಾರಿ ಮಾರುವ ಪದ್ದತಿ ಬಂತು ; ಮೊದಮೊದಲಿಗೆ, ಜೀನಸಿ ಅಂಗಡಿಗಳಲ್ಲಿ ಆಲೂಗಡ್ಡೆ, ನಂತರ ಟೊಮಾಟೊ, ಅಲಸಂದೆ, ಗುಳ್ಳ, ಬಣ್ಣದ ಸೌತೆ, ಸಾಂಬ್ರಾಣಿ ಗಡ್ಡೆ, ಗೆಣಸು - ಕ್ರಮೇಣ ಅಧಿಕೃತವಾಗಿ ತರಕಾರಿ ಅಂಗಡಿಯೇ ಆರಂಭವಾಯಿತು. ಆ ನಂತರ, ಈ ಚಿತ್ರವಿಚಿತ್ರ ತರಕಾರಿಗಳ ಬಳಕೆ ನಿಂತು ಹೋಯ್ತು. (ಚಿತ್ರಕೃಪೆ: ಎಂಜಿಆನ್ ಲೈನ್ ಸ್ಟೋರ್. ಕಾಮ್

 

 

 

ಮತ್ತು ಫ್ಲಿಕರ್.ಕಾಮ್)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಶಿಧರ್ ಅವರೇ, ನಿಜಕ್ಕೂ ತರಕಾರಿಯಲ್ಲದ ತರಕಾರಿಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ಒದಗಿಸಿದ್ದೀರಾ. ಸೀಂ ಗುಂಬಳವನ್ನು "ಸೀ ಗುಂಬಳ" ಅಥವಾ "ಸಿಹಿ ಕುಂಬಳ" ಎಂದು ಕರೆಯುವುದು ನಮ್ಮಲ್ಲಿ ವಾಡಿಕೆ. ಅದರ ಬೀಜದಲ್ಲಿ ಇರುವ ಪಪ್ಪನ್ನು (ಬೇಳೆಯನ್ನು) ಪಾಯಸದಲ್ಲಿ ಈಗಲೂ ನಮ್ಮ ಕಡೆ ಬಳಸುತ್ತಾರೆ. ಲೇಖನ ಮತ್ತು ಫೋಟೋ ನೋಡಿದ ಮೇಲೆ ನನಗೊಂದು ಅನುಮಾನ ಹುಟ್ಟಿತು. ಫೋಟೋದಲ್ಲಿ ಹಳದಿ ಹೂವಿನ ಇಕ್ಸೋರಾ ಗಿಡವನ್ನು ಕೊಟ್ಟು ಬರವಣಿಗೆಯಲ್ಲಿ ಕೆಂಪು ಗಿಡದ ಬಗ್ಗೆ ಪ್ರಸ್ತಾಪಿಸಿದ್ದೀರ ಯಾವುದು ಸರಿ? <<ನಾಲ್ಕು ದಳದ ಪುಟ್ಟ ಪುಟ್ಟ ಕೆಂಪು ಹೂವುಗಳ ಗೊಂಚಲು - ಹೂವಿನ ಆಕಾರವೂ ಚಂದ - ಚಂದದ ನಾಲ್ಕು ಪುಟಾಣಿ ದಳಗಳಿಗೆ, ಅರ್ಧ ಇಂಚು ಉದ್ದದ ಪೈಪಿನಾಕಾರದ ಆಧಾರ; ಗೊಂಚಲು ಗೊಂಚಲಾಗಿ ಗಿಡದ ತುದಿಯಲ್ಲಿ ಹೂಬಿಡುತ್ತದೆ.>> ನನಗೆ ತಿಳಿದಂತೆ ಕೆಂಪು ಹೂವಿನ ಇಕ್ಸೋರಾವನ್ನು ಅಲಂಕಾರಿಕ ಸಸ್ಯವಾಗಿ ಬೆಳಸುತ್ತಾರೆ. ಒಟ್ಟಿನಲ್ಲಿ ಮರೆಯಾಗುತ್ತಿರುವ ಹಳೆಯ ವೈಶಿಷ್ಠಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ದನ್ಯವಾದಗಳು, ಶ್ರೀದರ್; ನೀವ0ದ0ತೆ, ಚಿತ್ರವು ಕೆ0ಪು ಕಿಸ್ಕಾರದ್ದು ಅಲ್ಲ; ಲೇಖನದಲ್ಲಿ ಒ0ದೆಡೆ ಬಿಳಿ ಕಿಸ್ಕಾರ ಹೂವಿನ ಕುರಿತು ಬರುತ್ತದೆ ‍ _‍ ಅದರ ವಿಶೇಷಗುಣಗಳಿಗಾಗಿ ಅದರ ಬೇರನ್ನು ನಾಟಿ ವೈದ್ಯ ಪ್ರವೀಣರು (ಮುಖ್ಯವಾಗಿ ಹಾವು ಆಡಿಸುವವರು)ಸ0ಗ್ರಹಿಸಿ, ಆ ಗಿಡ ನಮ್ಮ ಊರಿನಲ್ಲಿ ನಶಿಸಿಹೋಗಿದೆ ಅ0ತ. ಚಿತ್ರವು ಬಿಳಿ ಕಿಸ್ಕಾರ ಹೂವಿನದ್ದು _ ಇ0ಟರ್ ನೆಟ್ ನಲ್ಲಿ 'ಸ್ನೋವೀ ಇಕ್ಸೋರಾ' ಅ0ತ ಇದನ್ನು ಗುರುತಿಸಿದ್ದಾರೆ. ಮತ್ತೆ ನೀವ0ದ0ತೆ, ಇಕ್ಸೋರಾವನ್ನು ಅಲ0ಕಾರಿಕ ಸಸ್ಯವಾಗಿಯೂ ಬೆಳೆಸುವ ಪರಿಪಾಠ ಇದೆ ‍ _ ಆದರೆ ಕಾಡುಜಾತಿಯವನ್ನಲ್ಲ, ಕಸಿ ಇಕ್ಸೋರಾವನ್ನು ಮಾತ್ರ ಅ0ತ‌ ಅನ್ನಿಸುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಶಿದರ್ ಅವರೇ ಚೆನ್ನಾಗಿದೆ ಪ್ರಭಂದ. ಕರ್ನಾಟಕದ ಕರಾವಳಿಯಲ್ಲಿ ಮಾಡುವಂತಹ ಭಕ್ಷ್ಯ ವೈವಿದ್ಯಗಳು ಬೇರೆಲ್ಲೂ ಸಿಗಲಿಕ್ಕಿಲ್ಲ. ಕೆಸುವಿನ ಎಲೆ, ಕೇಸುವಿನ ದೇಂಟು, ಕೇಸು ಗೆಡ್ಡೆ, ಸಂಬ್ರಾಣಿ ಗೆಡ್ಡೆ,ಹರಿವೆ ಸೊಪ್ಪು, ಬಸಳೆ,ತಜಕೆ ಸೊಪ್ಪು, ಕುಂಬಳ ಕಾಯಿಸೊಪ್ಪು, ಕುಂಬಳಕಾಯಿ ಬಳ್ಳಿ,ನುಗ್ಗೆ ಸೊಪ್ಪು, ನುಗ್ಗೆ ಹೂವು, ಕಲ್ಲಣಬೆ, ನಾಯಿ ಕೊಡೆ, ಬಾಳೆ ದಿಂಡು, ಬಾಳೆ ಬೊಂಡು, ಹಲಸಿನ ಕಾಯಿ, ಹಲಸಿನ ಸೊಳೆ, ಹೆಬ್ಬಲಸು, ದೇವಿ ಹಲಸು, ಕಾಡು ಹಾಗಲಕಾಯಿ... ಏನೆಲ್ಲಾ ತಿನ್ತಾರಲ್ಲ ...ಅರ್ರೆ ನೆನಪಿಸುವಾಗಲೇ ಹತ್ತು ಹಲವು ರುಚಿ ನೆನಪಿಗೆ ಬರುತ್ತಿದೆ. !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಕಾಮತ್. <<ಕರ್ನಾಟಕದ ಕರಾವಳಿಯಲ್ಲಿ ಮಾಡುವಂತಹ ಭಕ್ಷ್ಯ ವೈವಿದ್ಯಗಳು ಬೇರೆಲ್ಲೂ ಸಿಗಲಿಕ್ಕಿಲ್ಲ>> ನನಗನ್ನಿಸುವಂತೆ, ಎಲ್ಲ ಪ್ರದೇಶಗಳಲ್ಲೂ ಅಲ್ಲಿನದೇ ಆದ ವಿಶೇಷತೆಗಳು ಇರಬಹುದು - ಉದಾ: ಮಲೆನಾಡಿನಲ್ಲೂ,ಕೊಡಗಿನಲ್ಲಿ, ನಾನಾ ತೆರನ ಸಸ್ಯಗಳನ್ನು ಆಹಾರದ ರೂಪದಲ್ಲಿ ತಿನ್ನುತ್ತಿದ್ದರಂತ ಅನಿಸುತ್ತೆ _ ಒಂದು ಮಾತ್ರ ಸ್ಪಷ್ಟ : ಎಲ್ಲಾ ಕಡೆಗಳಲ್ಲು, ಈ ರೀತಿಯ ಹಳೆಯ ಕಾಲದ ತಿನಿಸು,ಸಸ್ಯ,ತಿಂಡಿಗಳನ್ನು ಜನರು ಸಾಮೂಹಿಕವಾಗಿ ಮರೆಯುತ್ತಿದ್ದಾರೆ, ಮತ್ತು ಹಳೆಯ ತಿಂಡಿಗಳನ್ನು ತಿರಸ್ಕಾರದಿಂದ ನೋಡುವ ಗುಣವನ್ನು ಈಗಿನ ಜನ, ಮುಖ್ಯವಾಗಿ ಯುವ ಜನರು, ಬೆಳೆಸಿಕೊಂಡಿದ್ದಾರೇನೊ ಅನಿಸುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಬಂಧ ಚೆನ್ನಾಗಿದೆ.ಕಿಸ್ಕಾರ ಹೂ ತಂಪು .ಆದ್ದರಿಂದ ಉಷ್ಣವಾದಾಗ ಇದನ್ನು ಸೇರಿಸಿ ತೈಲ ತಯಾರಿಸಿ ತಲೆಗೆ ಹಚ್ಚುತ್ತಾರೆ. ಅಥವ ಹಾಗೆಯೆ ಕಿಸ್ಕಾರ ಹೂವನ್ನು ರುಬ್ಬಿ ತಲೆಗೆ ಹಚ್ಚುತ್ತಾರೆ.ಇದರ ತಂಬುಳಿಯು ಆರೋಗ್ಯಕರವಾಗಿದೆ.. ಊರಿಗೆ ಹೋದಾಗ ತೋಟಗುಡ್ಡೆಯಲ್ಲಿ ಸುತ್ತಾಡಿ ಕೆಲವು ಗಿಡಮರಗಳ ಚಿಗುರುಕುಡಿಗಳನ್ನು( ನೆಲನೆಲ್ಲಿ, ಭ್ರಂಗರಾಜ, ಪೇರಳೆ,ಎಂಜಿರ,ಒಳ್ಳೆಕೊಡಿ ಗೇರು,ಮಾವು,ಕುಂಟಲ,ಕಿಸ್ಕಾರ ಮುಂತಾದ) ತಂದು ಸ್ವಲ್ಪ ಜೀರಿಗೆ ,ಒಣಮೆಣಸಿನೊಂದಿಗೆ ತುಪ್ಪದಲ್ಲಿ ಹುರಿದು ತೆಂಗಿನತುರಿ ಜತೆಯಲ್ಲಿ ರುಬ್ಬಿ ಮಜ್ಜಿಗೆ ,ಉಪ್ಪುಸೇರಿಸಿ ಕುದುಸಿ ತಂಬುಳಿ ತಯಾರಿಸುತ್ತೇವೆ.ಇದನ್ನು ಸಕಲಕೊಡಿ ತಂಬುಳಿ ಎನ್ನುತ್ತೇವೆ.ಮಕ್ಕಳು ಚಿಕ್ಕವರಿದ್ದಾಗ ತಂಬುಳಿಯಲ್ಲಿ ಊಟ ಮಾಡಬೇಕೆಂದು ಒತ್ತಾಯಿಸುತ್ತಿದ್ದೆ.ಈ ತಂಬುಳಿಯ ಲ್ಲಿರುವ ಔಷಧೀಯ ಮಹತ್ವವನ್ನು ಅರಿತ ಕೆಲವು ತಾಯಂದಿರು ಸಕಲ ಚಿಗುರುಕುಡಿಗಳನ್ನು ತಂದು ಒಣಗಿಸಿ ಪುಡಿಮಾಡಿ ದೂರದಲ್ಲಿರುವ ತಮ್ಮ ಮಗಳು ,ಸೊಸೆಯಂದಿರಿಗೆ ಕೊಟ್ಟುಕಳುಹಿಸುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ. ನೀವು ಹೇಳಿದ ಸಕಲ ಕುಡಿಗಳಲ್ಲಿ, ಎಂಜಿರ, ಕುಂಟಲ ಎಂದರೆ ಯಾವುದು? ನನಗೆ ಗೊತ್ತಾಗಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕುಂಟಲ-ಅತ್ತ ದೊಡ್ಡ ಮರವು ಅಲ್ಲದೆ ಚಿಕ್ಕ ಗಿಡವು ಅಲ್ಲದೆ ಸಾಮಾನ್ಯ ಎತ್ತರಕ್ಕೆ ಬೆಳೆಯುವ ಸಸ್ಯ . ಮೇ,ಜೂನ್ ಸಮಯದಲ್ಲಿ ನೇರಳೆಹಣ್ಣಿನ ಬಣ್ಣದ ಚಿಕ್ಕ ಚಿಕ್ಕ ಹಣ್ಣುಗಳಾಗುತ್ತವೆ.ಒಗರು,ಸ್ವಲ್ಪ ನಸುಸಿಹಿಯಿಂದ ಕೂಡಿರುತ್ತದೆ.ನಾವು ಚಿಕ್ಕವರಿರುವಾಗ ಶಾಲೆಯಿಂದ ವಾಪಸ್ಸಾಗುವಾಗ ಈಹಣ್ಣುಗಳನ್ನು ತಿಂದು ನಾಲಿಗೆ ನೇರಳೆ ಮಾಡಿಕೊಳ್ಳುತ್ತಿದ್ದೆವು. ಎಂಜಿರ-ಇದು ಪೊದೆಯಾಕಾರದಲ್ಲಿ ಬೆಳೆಯುವ ಸಸ್ಯ.ಸಾಮಾನ್ಯವಾಗಿ ದಕ್ಶಿಣ ಕನ್ನಡದ ಹಳ್ಳಿಗಳಲ್ಲಿ ಎಲ್ಲರಿಗು ತಿಳಿದಿರುವ ಸಸ್ಯ. ರೋಗನಿರೋಧಕ ಶಕ್ತಿಯನ್ನು ಹೊಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಲೇಖನಕ್ಕೆ ಧನ್ಯವಾದಗಳು. ತರಕಾರಿಯೇ ಅಲ್ಲದ ಆದರೆ ಇಂದಿನ ತರಕಾರಿಗಳಿಗಿಂತ ಸಾವಿರ ಪಾಲು ಉತ್ತಮವಾದ ಈ ಸೊಪ್ಪು, ಕುಡಿ, ಹೂವು ಮುಂತಾದವನ್ನು ಬಳಸಿ ಊಟದಲ್ಲಿ ಮೊದಲಿಗೆ ತಂಬುಳಿ ಮಾಡುತ್ತಿದ್ದರು. ತಂಬುಳಿಗೆ ಈ ಸಸ್ಯ ಜನ್ಯ ಪೌಸ್ಠಿಕತೆಯೊಂದಿಗೆ ಮಜ್ಜಿಗೆ ಸೇರಿರುತ್ತಿದ್ದರಿಂದ ಊಟದ ಮೊದಲೂ ಮಜ್ಜಿಗೆ, ಊಟದ ಕೊನೆಗೂ ಮಜ್ಜಿಗೆ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ, ತ0ಬುಳಿ ಊಟಕ್ಕಿದ್ದರೆ, ಊಟಕ್ಕೆ ಆರ0ಭದಲ್ಲೂ ಮಜ್ಜ್ಫಿಗೆಯಾಗ್ತದೆ. ನಿಮಗೆ ಗೊತ್ತಾ, ಮಜ್ಫ್ಜಿಗೆ ಬಳಸಿದ ಪದಾರ್ಥಗಳಿಗೆ ಎಣ್ಣೆ ಸೋಗಿಸಬಾರದು ಅ0ತ! ಉದಾ: ತ0ಬಳಿ, ಪಳದ್ಯ ಮೊದಲಾದ ಮೇಲೋಗರಕ್ಕೆ ಎಣ್ಣೆ ಬಳಸಿ ಒಗ್ಗರಣೆ ಹಾಕಬಾರದು ಅ0ತ್? ಅ0ತಹ ಪದ್ದತಿ ಯಾಕೆ ಬ0ದಿರಬಹುದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಓದಿಸಿಕೊಂಡು ಹೋಗುವ ಉತ್ತಮ ಪ್ರಬಂಧ. ಧನ್ಯವಾದಗಳು. ಬಹುಶಃ ಹಳ್ಳಿಗಳಲ್ಲೂ ಈ ತೆರನ ಅಡುಗೆ ಕಡಿಮೆಯಾಗಿಬಿಟ್ಟಿವೆಯೋ ಎನ್ನಿಸುತ್ತದೆ. ಊರಿಗೆ (ಕೊಡಗಿನಲ್ಲಿ) ಹೋದರೆ, ಹುಡುಗನಾಗಿದ್ದ ತಿಂದ ಸೊಪ್ಪು, ಕಾಯಿಪಲ್ಲೆಗಳು ಈಗ ನೋಡಲೂ ಸಿಗದು. ಈಗಿನ ಹೆಣ್ಣುಮಕ್ಕಳಿಗೆ ಅವುಗಳಲ್ಲಿ ಆಸಕ್ತಿಯೂ ಕಡಿಮೆಯೇನೋ! ಅಥವಾ ಪಟ್ಟಣದಿಂದ ಬಂದ ನಾವು ಅವುಗಳನ್ನು ನೋಡಿ ತಮಾಶೆ ಮಾಡಿಯೇವೆಂಬ ಭಯವೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವ0ದ0ತೆ, ಹಳ್ಳಿಗಳಲ್ಲೂ ಹಳೆ ತರಕಾರಿಗಳ ಉಪಯೋಗ್ ಕಡಿಮೆಯಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೆಬ್ಬಾರರೆ, ಈಗ ತಾನೇ ಊಟ ಮುಗಿಸಿದರೂ ನಿಮ್ಮ ಲೇಖನ ನೋಡಿದ ಮೇಲೆ ಪುನಃ ಹಸಿವಾಯಿತು. ಕೇಪ್ಲ ತಂಬುಳಿ, ಸಿಹಿ ಕುಂಬಳ ಹೂವಿನ ದೋಸೆ, ಕೆಸುವಿನ ಚಟ್ನಿ( ಈಗ ಬೆಂಗಳೂರಲ್ಲೂ ಕುಂಡದಲ್ಲಿ ಕೆಸು ಗಿಡ ಬೆಳೆಸಿ ಆಗಾಗ ಚಟ್ನಿ/ಪತ್ರೊಡೆ ಮಾಡುವೆವು), ಒಂದೆಲಗ, ಬಾಳೆಹೂ, ಗೇರಿನ ಚಿಗುರು.. ಎಲ್ಲಾ ನೆನಪಾಯಿತು. ಪ್ರಬಂಧ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ದನ್ಯವಾದಗಳು, ಗಣೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಹಳ ಚೆನ್ನಾಗಿದೆ.ಸುವರ್ಣಗಡ್ಡೆಯ ಗಿಡದ ಕಾಲು ಸಹ ಉಪಯೋಗಕ್ಕೆ ಆಗುತ್ತದೆ.ಹಳ್ಳಿಯಲ್ಲಿ ಉಪಯೋಗಿಸುವ ತರಕಾರಿಯಲ್ಲದ ತರಕಾರಿಗಳು ರುಚಿಕರವಾಗಿರುತ್ತವೆ.ಜನರು ಪುರಾತನ ಕಾಲದಿಮ್ದಲೇ ರುಚಿಯ ಹುಡುಕಾಟದಲ್ಲಿದ್ದಾರೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ದನ್ಯವಾದಗಳು. ಅ0ದಹಾಗೆ, ಸುವರ್ಣ ಗಿಡದ ಕಾಲು ಎ0ದರೇನು? ಬೇರಾವುದೋ ಕಾಲು, ತಲೆ ರೀತಿನಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.