ಜ್ಞಾನ ದೇವತೆ

0

ತುಂಗಾ ತೀರದಿ ನೆಲೆ ನಿಂತ ಮಹಾಮಾತೆ
ಶೃಂಗೇರಿ ಪುರವಾಸಿನಿ ನೀ ವಿದ್ಯಾಧಿದೇವತೆ
ಜೋಳಿಗೆ ಹಿಡಿದು ನಿನ್ನ ಮುಂದೆ ನಾ ನಿಂತೆ
ಜ್ಞಾನ ಭಿಕ್ಷೆಯ ನೀಡಿ ಹರೆಸೆನ್ನ ಜಗನ್ಮಾತೆ

ನಿನ್ನ ಜ್ಞಾನದ ನಂದಾದೀಪ ನನ್ನ ಮನದಲಿ ಬೆಳಗಲಿ
ಅಜ್ಞಾನವೆಂಬ ಅಂಧಕಾರ ಶಾಶ್ವತವಾಗಿ ತೊಲಗಲಿ
ಮಾತನಾಡುವ ಮುನ್ನ ಜಿಹ್ವೆಯು ಸದಾ ನಿನ್ನ ನೆನೆಯಲಿ
ವಿನಯವೆಂಬ ಅಸ್ತ್ರ ಎಂದೂ ಅಹಂಕಾರವ ಜಯಿಸಲಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.