ಜುಲೈ 22, 1947

4.666665
ಪುಸ್ತಕದ ಲೇಖಕ/ಕವಿಯ ಹೆಸರು : 
ಡಾ. ಸರಜೂ ಕಾಟ್ಕರ್
ಪ್ರಕಾಶಕರು: 
ಯಾಜಿ ಪ್ರಕಾಷನ‌, ಹೊಸಪೇಟೆ. ಫೋನ್ :9449922800
ಪುಸ್ತಕದ ಬೆಲೆ: 
ರೂ.100/‍‍‍

ಡಾ. ಸರಜೂ ಕಾಟ್ಕರ್ ನಮ್ಮ‌ ಓರಗೆಯ‌  ಒಬ್ಬ‌ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ‌ ಓಡಾಟ‌ ಮಾಡಿದವರಾಗಿ ಅವರ‌ ಅನುಭವ‌ ವಿಶಿಷ್ಟವಾದುದು.ಅವರ‌ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ‌ ಕ0ಡಿವೆ.

      ಅವರ‌ ಈ ಕಾದ0ಬರಿ 'ಜುಲೈ 22, 1947' ಕೇವಲ‌ ಒ0ದು ನೂರು ಪುಟಗಳದ್ದು. ಆದರೆ ಕನ್ನಡದಲ್ಲಿ ಹೊಸದೊದು ವಸ್ತುವನ್ನು ಆರಿಸಿಕೊ0ಡಿದ್ದಾರೆ. ಸತ್ಯ‌ಪ್ಪ ಎ0ಬ ಸಾಮಾನ್ಯ ಅಟೆ0ಡರ್ ಒಬ್ಬನು ರಾಷ್ಟ್ರದ್ವಜದ ಬಗ್ಗೆ ಹೊದಿದ್ದ ಅತೀವ ಅಭಿಮಾನ‌, ಅವನ ನಿಷ್ಟೆ, ಅವನ ಪ್ರಾಮಣಿಕತೆ, ಅವನನ್ನು ಹಣಿಯಲು ಇತರರು ಬಳಸುವ ತ0ತ್ರಗಳು, ಅವನ ಮಗ ಉಡಾಳನಾಗಿ ನೋವು ತ0ದ್ದು, ಕೊನೆಗೆ ಸತ್ಯ‌ಪ್ಪನು ರಾಷ್ಟ್ರದ್ವಜದ‌ ಗೌರವ‌ ಕಾಡುವ‌ ಪ್ರಯತ್ನದಲ್ಲೇ ಸಾವನ್ನಪ್ಪುವುದು‍, ಇವೆಲ್ಲಾ ಇಲ್ಲಿ ತು0ಬ‌ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಇದು ನಡೆದ‌ ಸತ್ಯ‌ ಕತೆ. ಸತ್ಯಪ್ಪ‌ ತನ್ನ‌ ತ0ದೆ ಸ್ವಾತ0ತ್ರ್ಯ‌ ಹೋರಾಟದಲ್ಲಿ ಮಡಿದಿದ್ದನ್ನು ಕ0ಡು ತಾನೂ ಪ್ರೇರಿತನಾಗಿ ರಾಷ್ಟ್ರಭ‌ಕ್ತಿಯನ್ನು ಬೆಳೆಸಿಕೊ0ಡಿದ್ದವನು.

         ಕತೆ ಮು0ದುವರೆದ0ತೆ‍‍‍‍, ಊರಿನಲ್ಲಿ ಗಲಭೆಯಾಗುವ‌ ರೀತಿ, ಪೋಲೀಸರ‌ ಪರದಾಟ‌, ಇತ್ಯಾದಿ ವಿಚಾರಗಳೂ ಔಚಿತ್ಯಪೂರ್ಣವಾಗಿ ಬರುತ್ತವೆ.

     ಕಥನದ‌ ಬಾಷೆಯಲ್ಲಿ ಸಮ್ಮಿಶ್ರ‌ ಸ್ವರೂಪದ‌, ಬೆಳಗಾ0 ಸೀಮೆಗೆ ಸಹಜವಾದ‌ ಒ0ದು ಜವಾರಿತನವಿದೆ. ಪುಸ್ತಕದ‌ ಮುದ್ರಣ‌, ಬಳಸಿದ‌ ಕಾಗದ‌,ಮುಖಪುಟ ವಿನ್ಯಾಸ‍ ಎಲ್ಲ ಸೊಗಸಾಗಿದೆ. ನಮಗೆ ಪರಿಚಯವಿದ್ದಿರದ ಒ0ದು ರಾಷ್ಟ್ರಪ್ರೇಮಿ ಜೀವದ ಬಗ್ಗೆ  ಯಾವುದೇ ಅತಿರ0ಜಕತೆ ಇಲ್ಲದ ಹಾಗೆ ತಿಳಿಸುತ್ತದೆ. ಇದನ್ನು ಓದಿದ ನ0ತರ ನಮಗೆ‍ 'ನಾವು ಇಷ್ಟು ವಿದ್ಯವ0ತರಾದರೂ ಸತ್ಯಪ್ಪನ0ಥ ಸಾಮಾನ್ಯನಿಗಿರುವ ನಿಯತ್ತೂ ಸಹ ನಮಗಿಲ್ಲವಲ್ಲಾ' ಎನಿಸುತ್ತದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.