ಜಪಾನಿಗಳ ವರ್ಲ್ಡ್ ಆರ್ಡರ್

3.25

ನಮಸ್ಕಾರ ಗೆಳೆಯರೆ,

 ತುಂಬಾ ದಿನಗಳ ನಂತರ ಸಂಪದಕ್ಕೆ ಮರಳಿ ಬಂದಿದ್ದೇನೆ. ವೆಬ್ ಸೈಟ್ ನಲ್ಲಿ ತುಂಬಾ ಬದಲಾವಣೆಗಳೂ ಆಗಿವೆ. ಅದು ಹಾಗಿರಲಿ. ಇಂದು ನಾನು ಕೆಲವು ತಿಂಗಳ ಹಿಂದೆ ಯೂಟ್ಯೂಬ್ನಲ್ಲಿ  ಕಂಡ ಜಪಾನಿ ನೃತ್ಯದ ವಿಡಿಯೋ ಬಗ್ಗೆ ಹಂಚಿಕೊಳ್ಳಬಯಸುತ್ತೇನೆ.

 ನಿಮಗೆ ಕಾಲ ಕಳೆಯಲು ಏನೂ ಇಲ್ಲದಿದ್ದಾಗ, ಪುಸ್ತಕಗಳೂ ಬೇಜಾರಾಗಿದ್ದಾಗ, ಯೂಟ್ಯೂಬ್ಗೆ ಹೋಗಿ. ಯಾವುದಾದರೂ ವಿಷಯದ ಬಗ್ಗೆ ಟೈಪ್ ಮಾಡಿದಾಗ, ಅದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ನೋಡಬಹುದು. ಇದು ಬಹುಶಃ ಎಲ್ಲ ’ವೆಬ್ಬಿಗರಿಗೂ’ ಗೊತ್ತಿರುವ ಸಂಗತಿ. ಆದರೆ ನೀವು ನೋಡುತ್ತಿರುವ ವಿಡಿಯೋ ಪಕ್ಕದಲ್ಲಿ, ಸಂಬಂಧಪಟ್ಟ ವಿಡಿಯೋಗಳು, ಪ್ರಾಯೋಜಿತ ವಿಡಿಯೋಗಳ ಪಟ್ಟಿ ಕಾಣಸಿಗುತ್ತದೆ. ಹಾಗೆ ನೀವು ಈ ಪಕ್ಕದ ಪಟ್ಟಿಯ ವಿಡಿಯೋಗಳನ್ನು ನೋಡುತ್ತಾ ಹೋದರೆ, ನಿಮ್ಮನ್ನು ಒಮ್ಮೊಮ್ಮೆ ನೀವು ಪ್ರಾರಂಭಿಸಿದ ವಿಷಯದಿಂದ ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಹಾಗೆ ನೋಡಸಿಕ್ಕ ವಿಡಿಯೋ "World Order-Mind Shift". ಆದರೆ ನೀವು ಸುಮ್ಮನೆ "World Order" ಎಂದು ಟೈಪ್ ಮಾಡಿದರೆ ಯೂಟ್ಯೂಬ್  ನಿಮಗೆ Illuminati,Free masons ಗಳ ವಿಡಿಯೋ ಪಟ್ಟಿ ತೋರಿಸಬಹುದು. ಅದರ ಬದಲು "Genki Sudo-World Order" ಎಂದು ಟೈಪ್ ಮಾಡಿ. ನಿಮಗೆ ನಾ ತೋರಿಸಲು ಹೊರಟ ವಿಡಿಯೋಗಳು ಸಿಗುತ್ತವೆ.

 ಈ ಇಡೀ ನೃತ್ಯ ಸರಣಿ ರೊಬೊಟ್ ಡ್ಯಾನ್ಸ್ ಶೈಲಿಯಲ್ಲಿದೆ ಮತ್ತು ಜಪಾನಿ ಭಾಷೆಯಲ್ಲಿದೆ. ಆಧ್ಯಾತ್ಮ, ಪ್ರೀತಿ-ಪ್ರೇಮ, ವಿಶ್ವ ಭ್ರಾತೃತ್ವ, ಏಕತೆಯ ಬಗ್ಗೆಯೇ ಇರುವ ಈ ವಿಡಿಯೋಗಳು ಪ್ರಾರಂಭದಲ್ಲಿ ವಿಡಿಯೋ ನಿಧಾನ ಗತಿಯಲ್ಲಿ ಸಾಗುತ್ತಿದೆಯೇನೋ ಎಂಬ ಭ್ರಾಂತಿ ಮೂಡಿಸುತ್ತದೆ. ಆದರೆ ಯಾವುದೇ ವಿಶೇಷ  ಕಂಪ್ಯೂಟರ್ ತಂತ್ರಗಾರಿಕೆಯಿಲ್ಲದ ಈ ಗುಂಪಿನ ನರ್ತನ ನೀವು ನೋಡಿದರೆ ಮಾರು ಹೋಗದೆ ಇರಲಾರಿರಿ. ತುಂಬಾ ಕರಾರುವಾಕ್ಕಾಗಿ ಕೈಕಾಲುಗಳನ್ನು ಕುಣಿಸುವ ಈ ನರ್ತಕರು ತಾವು ಹೇಳಬಯಸುವುದನ್ನೆಲ್ಲ ಜಪಾನಿ ಭಾಷೆ ಬರದವರಿಗೂ ತಮ್ಮ ನೃತ್ಯದಿಂದಲೇ ಹೇಳಬಲ್ಲರು. ಇವರ "World Order- Machine Civilization" ಮತ್ತು "World Order-2012" ನನ್ನ ಮೆಚ್ಚಿನ ವಿಡಿಯೋಗಳು. 

 ನಗರೀಕರಣ, ಅತಿಯಾದ ನಮ್ಮ ತಂತ್ರಜ್ಞಾನದ ಮೇಲಿನ ಅವಲಂಬನೆ, ಬದಲಾದ ಜೀವನ ಶೈಲಿಯ ಬಗ್ಗೆ ಇರುವ "Machine Civilization" ನೃತ್ಯ ಕಣ್ಣಿಗೆ ಹಬ್ಬ, ಹಾಗೆಯೇ ನೋಡುವವರನ್ನು ಯೋಚಿಸುವಂತೆ ಮಾಡುತ್ತದೆ. ಹಾಡು ಪೂರ್ತಿ ಜಪಾನಿ ಭಾಷೆಯಲ್ಲಿದ್ದರೂ, ಅಲ್ಲಿ ಇಲ್ಲಿ ಇಂಗ್ಲಿಷ್ ಶಭ್ದಗಳು ಕೇಳಸಿಗುತ್ತವೆ. ಆದರೆ ಒಮ್ಮೆ ನೀವು ಈ ವಿಡಿಯೋಗಳನ್ನು ನೋಡಲು ಶುರು ಮಾಡಿದ ಮೇಲೆ, ನಿಮಗೆ ಆ ಸಂಗೀತ ಇಂಪೆನಿಸುತ್ತದೆ ಮತ್ತು ಹಾಡು ಮುಗಿದ ನಂತರವೂ ತಲೆಯಲ್ಲಿ ಗಿರಕಿ ಹೊಡೆಯುತ್ತದೆ.

 ನಾನು ಇಲ್ಲಿ ಎಲ್ಲಾ ವಿಡಿಯೋಗಳ ಬಗ್ಗೆ ಹೇಳಲಾರೆ. ಸುಮ್ಮನೆ ಅನವಶ್ಯಕ ಕೊರೆತವಾಗುತ್ತದೆ(ಈಗಾಗಲೇ ಹಾಗಾಗಿದೆ ಎಂಬ ಭಯವಿದೆ :) ) ಆದರೂ ಈ ವಿಡಿಯೋಗಳ ಹಿಂದಿನ ವ್ಯಕ್ತಿಯ ಬಗ್ಗೆ ನಿಮಗೆ ಹೇಳಲೇಬೇಕು. ಗೆಂಕಿ ಸುಡೊ ವರ್ಲ್ಡ್ ಆರ್ಡರ್  ಸರಣಿ ವಿಡಿಯೋಗಳ ರೂವಾರಿ. ಎಲ್ಲಾ ವಿಡಿಯೋಗಳಲ್ಲೂ ಕನ್ನಡಕ ಧರಿಸಿ ವಿಡಿಯೋದಲ್ಲಿ ಪ್ರಮುಖವಾಗಿ ಕಾಣಿಸುವವನು. ಇವನು ಈ ವಿಡಿಯೋಗಳಿಗೆ ಹಾಡು ಬರೆದಿದ್ದಾನೆ, ನೃತ್ಯ ಸಂಯೋಜಿಸಿದ್ದಾನೆ. ಈತ ಇದಕ್ಕೂ ಮೊದಲು "Mixed Martial Arts" ಮತ್ತು "Kickboxing" ನ ಕ್ರೀಡಾಪಟು. ಇದರಿಂದ ನಿವೃತ್ತಿ ಹೊಂದಿದ ನಂತರ ಈ ವಿಡಿಯೋಗಳನ್ನು ಮಾಡುತ್ತಿದ್ದಾನೆ.

 ಇವನ ಈ ಸಾಧನೆಗೆ ಇವನ ಆಧ್ಯಾತ್ಮದ ಕಡೆಗಿನ ಪರಿಶ್ರಮವೂ ಇದೆಯಂತೆ. ಈತ "Practising Buddhist" ಆಗಿದ್ದಾನೆ ಮತ್ತು ಈತನ ವಿಡಿಯೋಗಳಲ್ಲಿ ಅದರ ಪ್ರಭಾವವೂ ಕಾಣಸಿಗುತ್ತದೆ. ಇವನ ವಿಡಿಯೋಗಳನ್ನು ನೋಡಿ ಮೆಚ್ಚಿದ ನಾನು, ನೀವೂ ಅವನ ವಿಡಿಯೋಗಳನ್ನು ನೋಡಿ, ಚೆನ್ನಾಗಿದೆ ಎನ್ನಿಸಿದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.

ಕೆಳಗೆ ಸಂಬಂಧಪಟ್ಟ ಲಿಂಕ್ ಗಳನ್ನು ಕೊಟ್ಟಿರುವೆ:

http://en.wikipedia.org/wiki/Genki_Sudo

Machine Civilization- http://www.youtube.com/watch?v=r-qhj3sJ5qs

2012 - http://www.youtube.com/watch?v=zlK5abIJRyM

Mind Shift - http://www.youtube.com/watch?v=4ua64HbsBUo

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಹಿತಿಯುಕ್ತ ಲೇಖನ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೋ ಈ ತರ್ಹ‌ ನೆಟ್ನಲ್ಲಿ ಹುಡುಕಾಡೊ ಅಭ್ಯಾಸ‌...ಈ ತರಹದ‌ ಅನುಭವ‌ ನನಗೂ ಆಗಿದೆ...!! ಉತ್ತಮ‌ ಮಾಹಿತಿ..ಅಚ್ಹ್ಹರಿಯ‌ ವಿಡಿಯೊ... ಹಿಡಿಸಿತು.. ಈ ತರ್ಹದ್ದು ಹ0ಚ್ಹೀಕೊಳ್ಳಿ.. ನನ್ನಿ ಒಳಿತಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.