ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ.........

0

ಜಗ ಮೆಚ್ಚಿದ ಯುಗ ನಾಯಕರ ಸಿರಿ ಸ್ನೇಹ.........
 

ಎಡಬಿಡದೆ ಕಾಡುವ ಬಡತನದಿ ಬಸವಳಿದು ಗೆಳೆಯ ವಸುದೇವನ ನುಡಿ ನೆನೆದು ಬಳಿ ಸಾರಿದ   ಸುಧಾಮನ ನೋಡಿ , ಅತ್ಯಾನಂದದಿ ಆಲಂಗಿಸಿ   ಮಗ್ಗಲಲಿ ಮರೆ ಮಾಚಿದ ಮುಗ್ಗಲು ಅವಲಕ್ಕಿಯ ಮೆಚ್ಚಿ ಮುಕ್ಕಿ ನಗು ಬೀರಿದ ನಾರಾಯಣನ ಕಂಡು ಮೂಕನಾದ ಕುಚೇಲ  ಬಂದ ಕಾರ್ಯವನು ಹೇಳದೆ ನಾಚಿ ನಡೆದ.....ಬಂದು ನೋಡಿದರೆ ತನ್ನ ಬಿಡಾರದಿ ನಿಗಿನಿಗಿ ಹೊಳೆಯುವ ಅಂದದ ಅರಮನೆ ಐಸಿರಿಯ ಸರಭರ...ಕರುಣಾಮಾಯಿ ಕೃಷ್ಣನ ನೆನೆದು ಕೊಂಡಾಡಿದ...ಮಾತಾಡದೆ ಮನದ ಭಾವಕೆ ಭವನ ನೀಡಿ ಮಾತು ಉಳಿಸಿ ಸ್ನೇಹ ಬೆಳಗಿದ ಬೆಣ್ಣೆ ಕಳ್ಳ...

 

ಸೂತಸುತನೆಂದು  ಧಿಕ್ಕರಿಸಿ ಸರಿದ ಸರಿಕರರ ಫೂತ್ಕರಿಸಿ
 ಹಿರಿಮೆಯಲಿ ಕರ್ಣ ಕುಂಡಲಧಾರಿಯ ಆದರಿಸಿ ಸ್ನೇಹ ಸಿರಿ ಸಿಂಹಾಸನದಿ ಕೂರಿಸಿ ಅರಸನಾಗಿ  ಮೆರೆಸಿ ಪಾವನ ಸ್ನೇಹಕೆ  ಮೆರುಗು ನೀಡಿ ಜಗ ಬೆರಗಾಗಿಸಿದ ಕುರು ವೀರ.......  ಕೀಳು ಕುಲದವನೆಂದು ಹೀಗಳೆದವರ ಗೋಣು ಕೆಳ ಮಾಡಿದ ಗೆಳೆಯನಿಗೆ ಬಾಳು ಬರಿದಾಗುವವರೆಗೂ ಬದಿಯಲ್ಲಿದ್ದು  ತಾಯ ಕಣ್ಣೀರಿಗೂ ಕರಗದೆ ಸೋದರರ ಬಳಿ ಸಾರದೆ   ಗೆಳೆತನವ ಯುಗ ಯುಗದಿ ಬೆಳಗಿಸಿ ಕಳೆಯಾಗಿಸಿದ ದಾನ ಶೂರ.....

——-Rukku  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.