ಚಳಿಯಿದೆ!!

3


[czech republic ನ ರೂಮೊಂದರಲ್ಲಿ -10° temperature ನಲ್ಲಿ ಚಳಿ ತಡೆಯದಾದಾಗ ಉಕ್ಕಿ ಬಂದ ಸಾಲುಗಳು:-) ]

ಬಹಳ ಚಳಿಯಿದೆ,
ಪಕ್ಕದಲ್ಲಿ ಅವಳಿಲ್ಲ!!

ತುಂಬಿದ ಬಾಟಲಿಯಿದೆ,
ಹಂಚಿಕೊಳ್ಳಲು ಗ್ಲಾಸಿಲ್ಲ!!

ನಮ್ಮೂರ ಬಜ್ಜಿಯ ನೆನಪಿದೆ,
ಇಲ್ಲಿ ಮಾಡಲು ಮಿರ್ಚಿಯಿಲ್ಲ!!

ಸಾವಿರ ಮಾತು ಕಾಯುತಲಿವೆ,
ಯಾವ ಕಿವಿಗಳಿಗೂ ಬಿಡುವಿಲ್ಲ!!

ಮನಸ್ಸೇಕೋ ಕುಣಿಯುತ್ತಿದೆ,
ಜೊತೆ ಹೆಜ್ಜೆಹಾಕಲು ಪಾದ ತಯಾರಿಲ್ಲ.

ಅಶ್ವತ್ಥರ ಗಾನವಿದೆ,
ನಿಲ್ಲಿಸಲು ಮನಸ್ಸಾಗುತ್ತಿಲ್ಲ!!

ಎಲ್ಲಕ್ಕೂ ಮುನ್ನ, ನನ್ನ-ಅವಳ ಕತೆಯಿದೆ,
ಎಷ್ಟು ಸಲ ಓದಿದರೂ ಬೇಸರವಿಲ್ಲ!!

                                        -ಸಂತು 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೆಳೆಯರೇ, ಈ ಕವನ ಓದಿದ ಮೇಲೆ ತಮ್ಮ ಪ್ರತಿಕ್ರಿಯೆ ದಾಖಲಿಸುವುದ ಮರೆಯಬೇಡಿ. ಅದು ನನಗೆ ಅಮೂಲ್ಯ ಪ್ರೋತ್ಸಾಹ ಕೊಡುತ್ತದೆ. ನಿಮ್ಮವನು, ಸಂತು

ಸಂತೋಷ್ ಅವ್ರೆ ಈ ಬರಹವನ್ನು ನಾ ನೋಡಿರಲಿಲ್ಲ ಈಗ ನೀವ್ ಲಿಂಕ್ ಕೊಟ್ಟಿದ್ದು ಒಳ್ಳೆದಾಯ್ತು.. ಜೆಕ್ ದೇಶದಲ್ಲಿ 10 ಡಿಗ್ರೀ ಚಳಿ ಯಲ್ಲಿ ಎಲ್ಲವಿದ್ದು -ಇಲ್ಲದಿರುವ ಸ್ಥಿತಿಯಲಿ ಒಂಟಿತನದ ಭಾವ ಚೆನ್ನಾಗಿ ಹೊರ ಬಂದಿದೆ.....!! ಚಳಿ ಚಳಿ ತಾಳೆನು ಈ ಛಳಿಯ ಹಾಡು ನೆನಪಿಗೆ ಬರಲಿಲ್ಲವೇ? ;()) ಶುಭವಾಗಲಿ.. \|/