ಗ್ರಾಮ ಯೋಧ

4.333335ನಮ್ಮ ರೈತನು ಅನ್ನದಾತನು
ದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನು
ಕಳೆದ ದಿನದಲ್ಲೂ ಸುಖವ ಕಾಣುತ್ತಾ
ಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನು

ಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನು
ನಮಗೆಲ್ಲಾ ಅನ್ನನೀಡೊ  ಪ್ರೀತಿ ಪಾತ್ರನು
ಬೆಳೆವ ಪೈರಲ್ಲೂ ಕೀಳೊ ಕಳೆಯಲ್ಲೂ
ಒಂದೇ ಶ್ರಮದಿ ದುಡಿದ ಗ್ರಾಮ ಯೋಧನು

ಒಳ್ಳೇ ಬೆಲೆಯೂ ಸಿಗದೆ ಫಲವ ಉಳಿಸಲಾಗದೆ ಎಂತೋ ಮಾರ್ವನು
ಸಿಕ್ಕ ಬೆಲೆಗೂ ಬೆನ್ನ ತಟ್ಟಿ ಹೆಮ್ಮೆ ಪಡುವನು
ಕಳೆದ ವರ್ಷ ಪಟ್ಟ ಕಷ್ಟವನೆಲ್ಲಾ ಮರೆವನು
ಹೊಸ ಬೆಳೆಗೆ ನೇಗಿಲೊತ್ತು ಮತ್ತೆ ನಡೆವನು
ನಮ್ಮ ರೈತನು ಅವನೇ ಅನ್ನದಾತನು.|

                      ಸೋಮೇಶ್ ಗೌಡ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ಚೆನ್ನಾಗಿದೆ. ಆದರೆ ರೈತನ ಪರಿಸ್ಥಿತಿ ವರ್ಷಂಪ್ರತಿ ಘೋರವಾಗುತ್ತಿದೆ .. ಸಾಲ ಶೂಲೆ ಬಾಧಿಸುತ್ತಿದೆ. ಹೆಹ್ಚುತ್ತಿರುವ ಜನಸಂಖ್ಯೆ -ಆಹಾರ ಬೇಡಿಕೆ ಆದರೂ ಫಸಲಿಗೆ ಕಡಿಮೆ ಬೆಲೆ-ಮಧ್ಯವರ್ತಿಗಳ ಹಾವಳಿ -ರಾಜಕಾರಣಿಗಳ ಪೊಳ್ಳು ಸುಳ್ಳು ಆಶ್ವಾಸನೆ., ಒಂದೇ ಎರಡೇ...??? ಸರಯಾದ ವಿಧಾನದಲ್ಲಿ ಅರಿತು ಬೆಳೆದು ಮಾರಿದರೆ ಬಾಳಿದರೆ ರೈತನೇ ನೈಜ ಅರ್ಥದಲಿ ರಾಜ. ಶುಭವಾಗಲಿ. \|/