ಗಾಳಿಪಟ

0

ಸ್ಫೂರ್ತಿ ಸೆರೆಯಾಗಿದೆ ಇಂದು
ಕರೆಗೆ ಓಗುಟ್ಟು ಹೋಗಲಾರದೆ ಮುಂದು
ತೆರೆಯಲಾರೆ ಹೊಸ ಪುಟ ಮತ್ತೊಂದು
ಕಟ್ಟಲು ಬಿಟ್ಟೆ ಭಾವದ ಗಾಳಿಪಟ
ನಂಬಿಕೆಯ ಸುತ್ತುದಾರ ಕೊಟ್ಟಿಹೆವು
ಸೂತ್ರದಾರನ ಕೈಯಲ್ಲಿ ,
ಸ್ಪೂರ್ತಿಗೆ ಭಕ್ತಿಯ ಹಾರ
ಮುಡಿಪಿಡುವೆ ಎದೆಯಲ್ಲಿ ,
ಮುಟ್ಟಿ ಹಾರಿಸುವುದಾದರೆ
ಭಾನೆತ್ತರಕೆ ಹಾರಿಸು ,
ಮೂರು ಜನರಲ್ಲಾದರು
ಮಂದಹಾಸ ಮೂಡಿಸು ,
ಸೂತ್ರವ ಬಿಗಿಯಿಡಿಯಲಾರದೆ
ಹಾರಿಸಲಾಗದಾದರೆ .....
ಕಟ್ಟುವ ಮುನ್ನವೇ ಅರಿಸು .
                ಬೋ .ಕು. ವಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.