ಕೆಲಸ - ಮನಸ್ಸು !

3.666665
ಕೆಲಸ - ಮನಸ್ಸು !   ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ ! ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !   ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ ! ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು - ಸಾಕೆನಿಸುವುದು ಆಯಾಸ !   ಕಾಯಕವೇ ಕೈಲಾಸವೆಂದ" ಹಿರಿಯರು ! ! ಕೈಲಾಗದು ಎನ್ನುವ ನಾವುಗಳು  ಇಷ್ಟ - ಕಷ್ಟಗಳು ಕೆಲಸದ ಗುಣಗಳಲ್ಲ, ಮನಸ್ಸಿನ ಸ್ಥಿತಿಗಳು !
"ಮನಸ್ಸಿದ್ದಲ್ಲಿ ಮಾರ್ಗ" ವೆಂಬುದ ನೆನೆದು ನಡೆ ಮುಂದೆ. ನಡೆ ಮುಂದೆ !                                                           - ನಂದೀಶ್ ಬಸವರಾಜು    
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಕವಿತೆ ಕೆಳಗಿನ ಸುಭಾಷಿತವನ್ನು ನೆನಪಿಸುವಂತಿದೆ. (ಮೂಲ ಪಾಠ ಸರಿಯಿದೆಯೋ ಇಲ್ಲವೋ ತಿಳಿಯದು) "ಗಚ್ಛಂತಿ ಪಿಪೀಲಿಕಾಭ್ಯಾಂ ಯೋಜನಾನಾಮ್ ಶತಾನ್ಯಪಿ, ಅಗಚ್ಛನ್ ವೈನತೇಯೋಪಿ ಪದಮೇಕಂ ನಗಚ್ಛತಿ" ಭಾವಾರ್ಥ= ಮನಸ್ಸಿದ್ದರೆ ಇರುವೆಯೂ ಕೂಡ ನೂರಾರು ಯೋಜನಗಳನ್ನು ಕ್ರಮಿಸಬಲ್ಲದು, ಹೋಗಲಾರದ ಮನಸ್ಸಿಲ್ಲದಿದ್ದರೆ ಗರುಡನೂ ಕೂಡ ಒಂದು ಹೆಜ್ಜೆಯನ್ನಿರಿಸಲಾರ. >>>ಕಾಯಕವೇ ಕೈಲಾಸವೆಂದ" ಹಿರಿಯರು ಸುಮ್ಮನೆ ಕೆಲಸ ಮಾಡಿದರೆ ಕೈಯ್ಯಾರೆ ಲಾಸು ಎನ್ನುತ್ತಾರೆ ಕಿರಿಯರು!

ಒಳ್ಳೆಯ ಸುಭಾಷಿತ ಒಂದನ್ನು ತಿಳಿಸಿದಕ್ಕೆ ಧನ್ಯವಾದಗಳು ಶ್ರೀಧರ್ ರವರೇ. ಸುಭಾಷಿತದ ಸಾರಾಂಶದ ಜೊತೆಗೆ, ಮಾನವನ ಮನಸ್ಸು, ಆಯಾಸವೆಂಬ ಕ್ರಿಯೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ ಎಂಬುದು ನನ್ನ ಅಭಿಪ್ರಾಯ / ಅನಿಸಿಕೆ. ಅದನ್ನು ನನ್ನ ಕವನದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೀನಿ.