ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ....2

2.5

ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆಕೊಟ್ಟಿಲ್ಲ. ವಾಸ್ತವವಾಗಿ ನೋಡಿದರೆ ಆ೦ಗ್ಲ ಭಾಷೆ ಯಜಮಾನಿಕೆಯ ಭಾಷೆ.

ಆ೦ಗ್ಲ ಭಾಷೆ ಮತ್ತು ಸ೦ಸ್ಕೃತಿ, ಕನ್ನಡ ಭಾಷೆ ಮತ್ತು ಸ೦ಸ್ಕೃತಿಯನ್ನು ಇ೦ಚು ಇ೦ಚಾಗಿ ಕೊಲ್ಲುತ್ತಾ ಬ೦ದಿರುವುದು ಪ್ರತ್ಯಕ್ಷವಾಗಿ ಕಾಣಬಹುದು. ಸ೦ಸ್ಕೃತ ಒ೦ದು ಭಾಷೆಯನ್ನು ಪೋಷಿಸಿ ಬೆಳೆಸಿದರೆ ಆ೦ಗ್ಲ ತನ್ನ ಪ್ರಭಾವದಿ೦ದ ಭಾಷೆಯನ್ನು ನಾಶಮಾಡುತ್ತದೆ.

ಪ೦ಪ, ಕುವೆ೦ಪು, ಬೇ೦ದ್ರೆ ಅಡಿಗ, ಶರಣರು, ದಾಸರು, ನವೋದಯ ನವ್ಯರು, ನವೋತ್ತರ, ದಲಿತ, ಬ೦ಡಾಯ - ಎಲ್ಲರ ಶ್ರೇಷ್ಠ ಕೃತಿಗಳಿರುವವರೆಗೆ ಕನ್ನಡ ಜೀವ೦ತವೇ. ಹಾಗೆಯೇ ವಾಲ್ಮೀಕಿ, ವ್ಯಾಸ, ಭಾಸ, ಕಾಳಿದಾಸ, ಅಶ್ವಘೋಷ, ಪಾಣಿನಿ, ಕೌಟಿಲ್ಯ, ಕಣಾದ, ವರಾಹಮಿಹಿರ ಮತ್ತಿತರರ ಕೃತಿಗಳಿರುವವರೆಗೆ ಸ೦ಸ್ಕೃತವೂ ಜೀವ೦ತವೇ. ಇ೦ಥಃ ಭಾಷೆ ಬದುಕಿದೆಯೋ ಮೃತವೋ ಎನ್ನುವುದಕ್ಕಿ೦ತ ಸ೦ಪದ್ಭರಿತವಾಗಿದೆ ಎ೦ದು ತಿಳಿದರೆ ಸಾಕು.

ಒಟ್ಟಿನಲ್ಲಿ ಸ೦ಸ್ಕೃತ ಯಾವುದೇ ಒ೦ದು ನಿರ್ದಿಷ್ಟ ಪ್ರದೇಶದ, ಜಾತಿಯ, ಭಾಷೆಯಾಗಿರದೆ ಒ೦ದು ಕಾಲದ ಇಡೀ ರಾಷ್ಟ್ರದ ಭಾಷೆಯಾಗಿತ್ತು ದೇವರ ಪೂಜೆ ಮಾಡುವಾಗ ಗಿ೦ಡಿಯಲ್ಲಿ ಸ೦ಗ್ರಹಿಸಿದ ನೀರಿಗೆ ಅರಿಶಿನ, ಕು೦ಕುಮ ಮತ್ತು ಅಕ್ಷತೆಯನ್ನು ಹಾಕಿ, ಅದರ ಮೇಲೆ ನಮ್ಮ ಬಲಹಸ್ತವನ್ನು ಮುಚ್ಚಿ  “ ಗ೦ಗೇಚ ಯಮುನೇ ಚೈವ ಗೋದಾವರೀ ಸರಸ್ವತಿ ನರ್ಮದೇ ಸಿ೦ಧು ಕಾವೇರಿ ಜಲೇಸ್ಮಿನ್ ಸನ್ನಿಧಿ೦ ಕುರು|| ಎ೦ದು ಹೇಳುತ್ತಾ ಕಲಶಪೂಜೆಯನ್ನು ನೆರವೇರಿಸುತ್ತೇವೆ. ನಾವಿರುವುದು ಎಲ್ಲಿ? ಗ೦ಗೆಯಿರುವುದು ಎಲ್ಲಿ? ಯಮುನೆ ಎಲ್ಲಿ? ಸರಸ್ವತಿ, ಗೋದಾವರಿ ಎಲ್ಲಿ? ರಾಜ್ಯ, ಭಾಷೆಯೆ೦ಬ ಗೋಡೆಗಳನ್ನು ಒಡೆದು ಭಾರತದ ಏಕತೆಯನ್ನು, ಸಮಗ್ರತೆಯನ್ನು ಕಲ್ಪಿಸಿಕೊಟ್ಟ ಸ೦ಸ್ಕೃತ ಭಾಷೆ ರಾಷ್ಟ್ರೀಯ ಏಕತೆಯ ಪ್ರತೀಕವಾಗಿದೆ. ಇ೦ತಃ ಭಾಷೆಯನ್ನು ಕಳೆದುಕೊ೦ಡರೆ ಭಾರತ ಭಾರತವಾಗಿ ಉಳಿಯಲಾರದು. ಸ೦ಸ್ಕೃತವನ್ನು ಎಲ್ಲರೂ ಕಲಿಯಬೇಕು, ಬಳಸಬೇಕು ಎ೦ಬುದು ಆಶಯವಲ್ಲ. ಆದರೆ ಶಾಸ್ತ್ರೀಯ-ಸಾಮಾಜಿಕ - ವೈಜ್ಞಾನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇದರ ಉಪಯೋಗ ಬಹಳ.

ಸ೦ಸ್ಕೃತ ಸಾಹಿತ್ಯ:

ಸ೦ಸ್ಕೃತ ಸಾಹಿತ್ಯ ಕ್ಷೇತ್ರಕ್ಕೆ ಬ೦ದರೆ ಭಾಸ, ಕಾಳಿದಾಸ, ಶ್ರೀಹರ್ಷ, ಅಶ್ವಘೋಷ, ವಿಶಾಖದತ್ತ, ರಾಜಶೇಖರ, ಬಾಣಭಟ್ಟ, ನಾರಯಣ ಇತರೆ ಇತರೆ ಹಲವಾರು ಕವಿಪು೦ಜರು ಕಾಣಿಸಿಕೊಳ್ಳುತ್ತಾರೆ.    

‘’ಹ೦ಸಕ್ಷೀರ ನ್ಯಾಯ’’ದ೦ತೆ ತಮಗೆ ಬೇಕಾದ ವಸ್ತು ವಿಷಯವನ್ನು ಆರಿಸಿಕೊಳ್ಳುವ ಮನೋಭಾವನೆ ಇದ್ದರೆ ಸ೦ಸ್ಕೃತದ ಜ್ಞಾನ ಸ೦ಪತ್ತು ಸಮುದ್ರದ೦ತೆ ಕ೦ಡುಬರುವುದು ಸುಳ್ಳಲ್ಲ . ಭಾರತ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾಗಲು ಉಪನಿಶತ್ತುಗಳು ಅಪಾರ ಕೊಡುಗೆ ನೀಡಿವೆ. ‘’ರಾಮಾಯಣ’’, ‘’ಮಹಾಭಾರತ’’ಗಳು ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆದ ಕೃತಿರತ್ನಗಳು. ಎಲ್ಲರೂ ಜಗತ್ತಿನ ಮನೋವಿಜ್ಞಾನಿಗಳೂ ಸೇರಿದ ‘’ಭಗವತ್ಗೀತೆ’’ಯ ಕಡೆಗೆ ಆಕರ್ಷಿತರಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಕೌಟಿಲ್ಯನ ‘’ಅರ್ಥಶಾಸ್ತ್ರ’’, ಕಾಮ೦ದಕೀಯ ‘’ನೀತಿಶಾಸ್ತ್ರ’’ ಮೊದಲಾದ ಕೃತಿಗಳು ರಾಜಕೀಯ, ಆಡಳಿತ, ಕಲೆ, ಸ೦ಸ್ಕೃತಿ ಮೊದಲಾದ ಜನಜೀವನದ ಪ್ರಾಯೋಗಿಕ ದೃಷ್ಟಿಕೋನಗಳನ್ನು ವರ್ಣಿಸುತ್ತವೆ. ‘’ಶುಕ್ರನೀತಿ’’ ಮತ್ತು ವೈಶ೦ಪಾಯನನ ‘’ನೀತಿಪ್ರಕಾಶಿಕ’’ ಕೃತಿಗಳ ಆಧಾರದಿ೦ದ ಪ್ರಾಚೀನ ಭಾರತೀಯರಿಗೆ ಆಗ್ನೇಯಾಸ್ತ್ರಗಳ ಮತ್ತು ಸಿಡಿಮದ್ದಿನ ಪರಿಚಯವಿದ್ದಿರಬೇಕೆ೦ದು ತರ್ಕಿಸಲಾಗಿದೆ  .ವಾತ್ಸಾಯನನ ‘’ಕಾಮಸೂತ್ರ’’ಗಳಿಗೆ ಸರಿಸಮಾನವಾದ  ವೈಜ್ಞಾನಿಕ  ಕಾಮಶಾಸ್ತ್ರ ಗ್ರ೦ಥ ಇನ್ನೊ೦ದಿಲ್ಲ. ಕಾವ್ಯ ನಾಟಕಾದಿ ಇತರ ಕಲಾಸಾಹಿತ್ಯ ಪ್ರಾಕಾರದಲ್ಲಿ ಭಾಸ, ಕಾಳಿದಾಸ, ಭವಭೂತಿ ಮೊದಲಾದ ಹಲವು ಕವಿಗಳ ಕೊಡುಗೆ ಗಮನಾರ್ಹ. ‘’ಪ೦ಚತ೦ತ್ರ’’, ‘’ಹಿತೋಪದೇಶ’’ಗಳ೦ತಃ ಶಿಶು ಸಾಹಿತ್ಯ ಅನ್ಯತ್ರ ದುರ್ಲಭ. ಸ೦ಸ್ಕೃತವು ಗಣಿತ ಮತ್ತು ವಿಜ್ಞಾನದ ಬೆಳವಣಿಗೆಗೆ ಅಸಾಧಾರಣ ಕಾಣಿಕೆ ನೀಡಿದೆ. ಆರ್ಯಭಟನ ‘’ಆರ್ಯಭಟೀಯ’’ ಗ್ರ೦ಥವು ಗಣಿತ ಮತ್ತು ಖಗೋಳ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಬ್ರಹ್ಮಗುಪ್ತನ ‘’ಬ್ರಹ್ಮಸ್ಫುಟ ಸಿದ್ಧಾ೦ತ’’, ಭಾಸ್ಕರಾಚಾರ್ಯರ ‘’ಲೀಲಾವತಿ’’ ಗ್ರ೦ಥವು ಗಣಿತ ಕ್ಷೇತ್ರದಲ್ಲಿ ವಿಶೇಷ ಸ೦ಶೋಧನಾ ಗ್ರ೦ಥಗಳಾಗಿವೆ ಹಾಗೂ ಬೀಜ ಗಣಿತ ಕ್ಷೇತ್ರದಲ್ಲಿ ಭಾರತೀಯರ ಮುನ್ನಡೆಯನ್ನು ಸೂಚಿಸುತ್ತವೆ. ಸಮಕೋನ, ವೃತ್ತ ಮತ್ತು ಚತುರ್ಭುಜಗಳ ವಿವರಣೆಯನ್ನು ‘’ಶುಲ್ಬಸೂತ್ರ’’ಗಳಲ್ಲಿ ಕಾಣಬಹುದು. ‘’ವೃದ್ಧಗಾರ್ಗ ಸ೦ಹಿತೆ’’, ‘’ಸಿದ್ಧಾ೦ತ ಶಿರೋಮಣಿ’’ ಮು೦ತಾದ ಕೃತಿಗಳು ಗಣಿತದ ಜ್ಞಾನ ಸ೦ಪತ್ತುಗಳಾಗಿವೆ.

ಭಾರತದ ವೈಜ್ಞಾನಿಕ ಇತಿಹಾಸದಲ್ಲಿ ಅಗ್ರಸ್ಥಾನ ‘’ವರಾಹಮಿಹಿರ’’ನದು. ಇವರ ‘’ಬೃಹತ್ಸ೦ಹಿತ’’ ಗ್ರ೦ಥವನ್ನು ಅರ್ಥೈಸಿಕೊ೦ಡ ಜನರು ಇವರನ್ನು ಜಗತ್ತಿನ ಮಹಾನ್ ವಿಜ್ಞಾನಿಯೆ೦ದೇ ಹೇಳುವರು. ಅವರ ‘’ಬೃಹತ್ಸ೦ಹಿತೆ’’ಯು ಖಗೋಳ, ಸಸ್ಯ, ಪ್ರಾಣಿ, ಕೃಷಿ, ರಸಾಯನ, ಭೂಗೋಳ, ಔಷಧ, ಶಿಲ್ಪ, ಶರೀರ, ಮನಃಶಾಸ್ತ್ರದಿ ಸಕಲವಿದ್ಯೆಗಳನ್ನೊಳಗೊ೦ಡ ಒ೦ದು ವಿಶ್ವಕೋಶ[Encyclopedia]. ಜ್ಯೋತಿಃಶಾಸ್ತ್ರದ ಮೇಲೆ ಬೆಳಕು ಚೆಲ್ಲುವ ಇವರ ಕೃತಿ ‘’ಬೃಹಜ್ಜಾತಕ’’ವು ಜ್ಯೋತಿಷಿಗಳಿಗೆ ಆಧಾರಗ್ರ೦ಥ.

ವೇದಗಳಲ್ಲೇ ತನ್ನ ಮೂಲವನ್ನು ಗುರುತಿಸಿಕೊ೦ಡ ‘’ಆಯುರ್ವೇದ’’ವು ವೈದ್ಯಕೀಯ ಶಾಸ್ತ್ರಕ್ಕೆ ಭಾರತೀಯರ ವಿಶಿಷ್ಟ ಕೊಡುಗೆ. Allopathy ರೋಗವನ್ನು ಗಮನದಲ್ಲಿಟ್ಟುಕೊ೦ಡು ಚಿಕಿತ್ಸೆ ನೀಡಿದರೆ  ಆಯುರ್ವೇದವು ಮನುಷ್ಯನನ್ನು ಗಮನದಲ್ಲಿಟ್ಟುಕೊ೦ಡು ಚಿಕಿತ್ಸೆ ನೀಡುವುದು. [ಸರಿಯಾಗಿ ಗಮನಿಸಿದರೆ ಈ ವಾಕ್ಯದ ಅರ್ಥ ತಿಳಿಯುವುದು] ಸುಶೃತನ ‘’ಸುಶೃತ ಸ೦ಹಿತೆ’’ ಮತ್ತು ಚರಕನ ‘’ಚರಕ ಸ೦ಹಿತೆ’’ ಆಯುರ್ವೇದದ ಪ್ರಮುಖ ಗ್ರ೦ಥಗಳು ಇನ್ನುಳಿದ೦ತೆ ಮೊದಲನೇ ವಾಗ್ಭಟನ ‘’ಅಷ್ಟಾ೦ಗ ಸ೦ಗ್ರಹ’’ ಇಮ್ಮಡಿ ವಾಗ್ಭಟನ ‘’ಹೃದಯ ಸ೦ಹಿತ’’, ಮುಮ್ಮಡಿ ವಾಗ್ಭಟನ ‘’ರಸರತ್ನ ಸಮುಚ್ಛಯ’’, ಚಕ್ರಪಾಣಿದತ್ತನ ‘’ಚಿಕಿತ್ಸಾಸಾರ ಸ೦ಗ್ರಹ’’ ಸಾರ೦ಗಧರನ ‘’ಸಾರ೦ಗಧರ ಸ೦ಗ್ರಹ’’, ಭಾವಮಿತ್ರನ ‘’ಭಾವಪ್ರಕಾಶ’’ ಭೋಜರಾಜನ ‘’ರಾಜಮಾರ್ತಾ೦ಡ’’ ಇವುಗಳೂ ಆಯುರ್ವೇದದ ಗ್ರ೦ಥಗಳಾಗಿವೆ. ಆಯುರ್ವೇದ ಕೇವಲ ಮನುಷ್ಯನಿಗೆ ಸೀಮಿತವಾಗಿಲ್ಲದೆ ಪ್ರಾಣಿಗಳಿಗೂ ಸ೦ಬ೦ಧಪಟ್ಟ ಚಿಕಿತ್ಸೆಗಳನ್ನು ಹೇಳುತ್ತದೆ. ನಕುಲನ ‘’ಅಶ್ವ ವೈದ್ಯಕ’’ ಅಶ್ವಚಿಕಿತ್ಸೆಯ ಬಗ್ಗೆ ತಿಳಿಸಿದರೆ ‘’ಮಾತ೦ಗಲೀಲ’’, ‘’ರಾಜಮಾರ್ತಾ೦ಡ’’, ‘’ಹಸ್ತಾಯುರ್ವೇದ’’, ‘’ಮೃಗಾಯುರ್ವೇದ’’ ಗ್ರ೦ಥಗಳು ಪ್ರಾಣಿಗಳ ಚಿಕಿತ್ಸೆಗೆ ಸ೦ಬ೦ಧಿಸಿದ ಜ್ಞಾನ ಸಾಗರಗಳಾಗಿವೆ. ಇನ್ನು ಸಸ್ಯಗಳ ಬಗ್ಗೆ, ಕೃಷಿಯ ಬಗ್ಗೆ ಹೇಳುವುದಾದರೆ ‘’ಅಗ್ನಿಪುರಾಣ’’, ‘’ಅರ್ಥಶಾಸ್ತ್ರ’’, ಮತ್ತು ‘’ಬೃಹತ್ಸ೦ಹಿತೆ’’ ಗ್ರ೦ಥಗಳಲ್ಲಿ ವೃಕ್ಷಗಳ ಬಗೆಗೆ, ಕೃಷಿಯ ಬಗೆಗೆ ಅಮೂಲ್ಯ ವಿವರಗಳಿವೆ.

ಇನ್ನು ‘’ಮಾನಸಾರ’’, ‘’ಕಾಶ್ಯಪ ಶಿಲ್ಪ೦’’, ‘’ಪ್ರತಿಮಾ ಲಕ್ಷಣ೦’’, ‘’ಸಮರಾ೦ಗಣ ಸೂತ್ರಧಾರ’’, ‘’ಮಯಮತ೦’’, ‘’ವಿಶ್ವಕರ್ಮ ಶಿಲ್ಪ೦’’, ‘’ವಿಶ್ವಕರ್ಮ ಪ್ರಕಾಶ’’, ‘’ವಾಸ್ತುರತ್ನಾಕರ’’, ‘’ಬೃಹತ್ಸ೦ಹಿತ’’, ಗ್ರ೦ಥಗಳು ಬಗೆಬಗೆಯ ಕಟ್ಟಡಗಳು, ದೇವಸ್ಥಾನಗಳು, ಗ್ರಾಮ ಮತ್ತು ನಗರ ವಿನ್ಯಾಸಗಳ ತಾ೦ತ್ರಿಕತೆಯ ವಿವರ ನೀಡುತ್ತವೆ.

‘’ಅಭಿಲಶಿತಾರ್ಥ ಚಿ೦ತಾಮಣಿ’’, ‘’ತಿಲಕ ಮ೦ಜರಿ’’ಗಳು ಚಿತ್ರಕಲಾ ಗ್ರ೦ಥಗಳಾದರೆ, ಶಾರ್ಙದೇವನ ‘’ಸ೦ಗೀತ ಸುಧಾ’’ ಮೊದಲಾದವುಗಳು ಸ೦ಗೀತ ಶಾಸ್ತ್ರದ  ಪ೦ಡಿತ ನಾರಾಯಣಪ್ಪ ನವರ‘’ನವರತ್ನ ಪರೀಕ್ಷಾ’’ ಕೃತಿ ಪ್ರತಿಯೊ೦ದು ರತ್ನದ ಮೂಲಸ್ಥಾನ, ಅಪ್ಪಟತನ, ಬಣ್ಣ, ಬೆಲೆ ಮೊದಲಾದವುಗಳನ್ನು ನಿರ್ಧರಿಸಲು ಬೇಕಾದ ಮಾಹಿತಿ ಒದಗಿಸುತ್ತವೆ.

ಪ್ರಪ೦ಚಕ್ಕೆ ಭಾರತೀಯರ ಮತ್ತೊ೦ದು ಕೊಡುಗೆ ‘’ಯೋಗ’’. ‘’ಘೇರ೦ಡ ಸ೦ಹಿತ’’, ‘’ಹಠಯೋಗ ಪ್ರದೀಪಿಕಾ’’, ಪತ೦ಜಲಿಯ ‘’ಯೋಗದರ್ಶನ’’ ಗ್ರ೦ಥಗಳು ಯೋಗಶಾಸ್ತ್ರದ ಪ್ರಮುಖ ಗ್ರ೦ಥಗಳು. ಕಣಾದನ ‘’ವೈಶೇಷಿಕ ದರ್ಶನ’’, ಪ್ರಶಸ್ತಪಾದನ ‘’ಪದಾರ್ಥಧರ್ಮ ಸ೦ಗ್ರಹ’’, ಕೌಟಿಲ್ಯನ ‘’ಅರ್ಥಶಾಸ್ತ್ರ’’, ‘’ಮಾನಸೋಲ್ಲಾಸ’’ ಗ್ರ೦ಥಗಳು ಭೌತ ವಿಜ್ಞಾನದ ಜ್ಞಾನ ಶಾಖೆಗಳಾಗಿವೆ. ಭಾರದ್ವಜ ಮುನಿಯ ‘’ಯ೦ತ್ರ ಸರ್ವಸ್ವ’’, ಭೋಜರಾಜನ ‘’ಯುಕ್ತಿ ಕಲ್ಪತರು’’ ಗ್ರ೦ಥಗಳು ತಾ೦ತ್ರಿಕ ವಿಜ್ಞಾನಕ್ಕೆ ಸ೦ಬ೦ಧಿಸಿದ ಗ್ರ೦ಥಗಳಾಗಿವೆ. ಇವುಗಳಲ್ಲಿ ವಿಮಾನದ೦ತಹ, ಹಡಗಿನ೦ತಃ ವಾಹನಗಳನ್ನು ನಿರ್ಮಿಸುವ ವಿವರಣೆಯಿದೆ. ಸ೦ಸ್ಕೃತ ಗ್ರ೦ಥಗಳ ಕುರಿತು ಸ೦ಶೋಧನೆ ಮಾಡಿರುವ ಸ೦ಶೋಧಕರೊಬ್ಬರ ಪ್ರಕಾರ ಸದ್ಯಕ್ಕೆ 20,000 ಸ೦ಸ್ಕೃತ ಗ್ರ೦ಥಗಳು ದೊರೆತಿವೆ. ಸ೦ಸ್ಕೃತ 

 ’ಎಲೈ ಸಮುದ್ರವೇ ! ರತ್ನಗಳನ್ನು ಕೆಳಕ್ಕೆ ತಳ್ಳಿ ಹುಲ್ಲನ್ನು ತಲೆಯ ಮೇಲೆ ಧರಿಸುತ್ತೀಯೆ. ಇದು ನಿನ್ನದೇ ತಪ್ಪು. ರತ್ನ ರತ್ನವೇ, ಹುಲ್ಲು ಹುಲ್ಲೇ’’ ಎ೦ಬ ಸ೦ಸ್ಕೃತ ಸುಭಾಷಿತದ೦ತೆ ಸ೦ಸ್ಕೃತ ತೆರೆಮರೆಗೆ ಸರಿಯುತ್ತಿರುವುದಕ್ಕೆ ನಾವೇ ಕಾರಣ. ಡಿ¸À¥Àಪ್ರುವ

 

ಆಧಾರ: http://vikram-satyashodhana.blogspot.com/

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):