ಕಾದಂಬರಿ ಸ್ಪರ್ಧೆ

0

ಮೈಸೂರಿನ ಪುಸ್ತಕಯಾನ ಪ್ರಕಾಶನ ಸಂಸ್ಥೆಯು ತನ್ನ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದೆ.  ಆಸಕ್ತ ಕಾರಂಬರಿಕಾರರು ತಮ್ಮ ಕಾದಂಬರಿಗಳ ಹಸ್ತಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದು.  ಬಹುಮಾನದ ಮೊತ್ತ ಐದು ಸಾವಿರ ರೂಪಾಯಿಗಳು.  ಬಹುಮಾನಿತ ಕೃತಿಯನ್ನು ಪುಸ್ತಕಯಾನವು ಪ್ರಕಟಿಸಿ ೨೦೧೨ರ ಯುಗಾದಿಯ ಸಮಯಕ್ಕೆ ಮೈಸೂರಿನಲ್ಲಿ ಲೋಕಾರ್ಪಣೆಗೊಳಿಸುತ್ತದೆ.

ಸ್ಪರ್ಧೆಯ ನಿಯಮಗಳು:

o ಆಸಕ್ತಿಯುಳ್ಳ ಯಾವ ಕಾದಂಬರಿಕಾರರಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ವಯಸ್ಸಿನ ಮಿತಿ ಇರುವುದಿಲ್ಲ.

o ಇದುವರೆಗೆ ಎಲ್ಲಿಯೂ ಯಾವ ಪ್ರಕಾರದಲ್ಲಿಯೂ ಪ್ರಕಟವಾಗಿಲ್ಲದ ಕಾದಂಬರಿಗಳು ಮಾತ್ರ ಸ್ಪರ್ಧೆಗೆ ಅರ್ಹ,

o ಕಾದಂಬರಿ ಅಚ್ಚಿನಲ್ಲಿ ನೂರು - ನೂರಿಪ್ಪತ್ತು ಪುಟಗಳ ಮಿತಿಯಲ್ಲಿರಬೇಕು.

o ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ ಮೇಲ್ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಹಸ್ತಪ್ರತಿಯೊಂದಿಗೆ ಲಗತ್ತಿಸಿರಬೇಕು.

o ಹಸ್ತಪ್ರತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.  ಹೀಗಾಗಿ ಲೇಖಕರು ತಮ್ಮ ಕೃತಿಯ ಒಂದು ಪ್ರತಿಯನ್ನು ತಮ್ಮಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

o ಸ್ಪರ್ಧೆಯ ಫಲಿತಾಂಶವನ್ನು 2012ರ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಹಾಗೂ ಬಹುಮಾನಿತ ಕಾದಂಬರಿಕಾರರಿಗೆ ವೈಯುಕ್ತಿಕವಾಗಿ ಪತ್ರಮುಖೇನ ತಿಳಿಸಲಾಗುವುದು.


o ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಪ್ರಕಾಶಕರ ತೀರ್ಮಾನವೇ ಅಂತಿಮ.

ಹಸ್ತಪ್ರತಿಗಳನ್ನು ಸ್ವೀಕರಿಸುವ ಕೊನೆಯ ದಿನ- ಡಿಸೆಂಬರ್ 31, 2011.

ಸ್ಪರ್ಧೆಯ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಅಗತ್ಯವಿದ್ದಲ್ಲಿ ಸಂಪರ್ಕಿಸಿ: ಮೊಬೈಲ್-  9242340388, ಇ-ಮೇಲ್- pusthakayaana@gmail.com

ಹಸ್ತಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ:

ಶ್ರೀ ಎಂ. ದೊರೆರಾಜು

ಪುಸ್ತಕಯಾನ

೬೫೪, ಕೂಗುಬಂಡೆ ರಸ್ತೆ,

ಕುವೆಂಪುನಗರ, ಮೈಸೂರು -  570 023

ಕರ್ನಾಟಕ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಸ್ತಪ್ರತಿಯೆಂದರೆ? ಒಂದು ವೇಳೆ ನಾನು ಬರೆದ ಕಾದಂಬರಿ ಲ್ಯಾಪ್ ಟಾಪಿನಲ್ಲಿದ್ದು ಅದನ್ನು ಪ್ರಿಂಟ್ ತೆಗೆದು ಕಳುಹಿಸಿದರೆ? ಅದನ್ನು ಕೈಯಿಂದ ಬರೆಯಲೇ ಬೇಕೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧಾರಾಳವಾಗಿ ಕಳುಹಿಸಿ. ನಿಮ್ಮಿಂದ ಅದು ಕಾರ್ಬನ್ ಕಾಪಿಯ ಹೊರತಾಗಿ ಇನ್ನಾವ ರೂಪದಲ್ಲಿ ಬಂದರೂ ಸರಿಯೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಪ್ರೇಮ್ ಶೇಕರ್ , ಹೇಗಿದ್ದೀರ? ಮಾಹಿತಿಗೆ ಧನ್ಯವಾದಗಳು. ನನ್ನ ಕಾದಂಬರಿ ಬರೆಯುವ ಸ್ನೇಹಿತರಿಗೆ ತಿಳಿಸುತ್ತೇನೆ. ~ಮೀನಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ತೇ. ಆರಾಮವಾಗಿದೀನಿ. ನೀವು? ತುಂಬಾ ದಿನ ಆಗಿತ್ತಲ್ಲ ಹೀಗೆ ಸಂಪರ್ಕವಿಲ್ಲದೇ? ಮೊನ್ನೆ "ಸಂಪದ"ಕ್ಕೆ ಬಂದಮೇಲೆ ಹಲವಾರು ಹಳೆಯ ಗೆಳೆಯರು ಮತ್ತೆ ಇಲ್ಲಿ ಸಿಕ್ಕಿದ್ದಾರೆ. ಕಾದಂಬರಿ ಸ್ಪರ್ಧೆಯ ಬಗ್ಗೆ ನಿಮ್ಮ ಸ್ನೇಹಿತರಿಗೆ ಹೇಳುವುದರ ಜತೆಗೆ ನೀವೂ ಬರೆದರೆ ಚೆನ್ನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸದ್ಯಕ್ಕೇನೂ ಬರೆದಿಲ್ಲ. ಆದರೆ ನಿಯಮಗಳನ್ನು ಓದಿದಾಗ ಅನಿಸಿದ ಪ್ರಶ್ನೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಬರೆಯೋದಿಲ್ಲ ಅನ್ನೋದು ಖಾತ್ರಿ ಆಯ್ತು :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.