ಕವನ: ಮಾಗಿಯ ಚಳಿ

4

ಈ ಮಾಗಿಯ ಚಳಿಯೇ ಹೀಗೆ,
ಅವಳ ಮುಡಿಜಾರಿದ ಮಲ್ಲಿಗೆಯ ಘಮಲನ್ನು
ತೀಡಿ ತಂದ ಮಾಗಿಯ ಕುಳಿರ್ಗಾಳಿ
ಕಚಗುಳಿಯಿಟ್ಟು ಬೆಳ್ಳಂಬೆಳಗ್ಗೆ ಮತ್ತೇರಿಸುತಿದೆ...

ಅವಳ ನಡು ಬಳಸಿದ
ನನ್ನ ಕೈ ಬಿಡಲೊಲ್ಲದು
ನನ್ನ ತೋಳತೆಕ್ಕೆಯಲ್ಲಿ ಮುದುಡಿದ ಅವಳ ಮುಖ
ಸೂರ್ಯ ನೆತ್ತಿಗೆ ಬಂದರೂ ಅರಳಲೊಲ್ಲದು...

ಕುಳಿರ್ಗಾಳಿ ಬೀಸಿದಂತೆಲ್ಲಾ ಬಿಗಿದಪ್ಪುವ ಅವಳು
ಎದೆಗೂಡಿನಲಿ ಬಚ್ಚಿಟ್ಟು ನನ್ನ ಬಿಸಿ ಏರಿಸುವಳು
ಈ ಮಾಗಿಯ ಚಳಿಗೆ ನಿಗಿಕೆಂಡವೂ ಬಿಸಿತಾರದು
ಮಾಗಿ ಬರಲು ಮೈ ಮುದುಡಿದೆ ಮನ ಅರಳಿದೆ...

-ಅರೆಯೂರು ಚಿ.ಸುರೇಶ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.