ಕಳೆದು ಹೋಗದು

1

ಕಳೆದು ಹೋಗದು ಈ ಜೀವ

ಜೀವ ಕೊಡುವ ಜೀವವಿರುವತನಕ

ಉಸಿರು ನಿಲ್ಲದು ಈ ಜೀವ

ಉಸಿರು ಕೊಡುವ ಉಸಿರಿರುವತನಕ.

 

ಜೀವ ಜೀವ ಮರುಜೀವ

ಮರುಗುತ್ತಿದೆ ಮರುಜಲ್ಮದ ಜೀವ

ಮರು ಜಲ್ಮ ಕೊಟ್ಟವರ ನೆನೆನೆನೆದು

ಹೃದಯದಲ್ಲಿಟ್ಟು ಪೂಜಿಸುತ್ತಿದೆ ಪ್ರತಿ ಕ್ಷಣವು.

 

ಪ್ರೀತಿಯ ಆಲೈಕೆ ಮಾಡಿ ಬೆಳೆಸಿದೆ

ಮನಸ್ಸಿನ ಭಾವನೆಗಳ ಚಿಗುರಿಸಿ ಅಪ್ಪಿಕೊಂಡೆ

ಬದುಕಿನ ಸತ್ಯ ಸತ್ಯತೆಗಳ ಕಲಿಸಿಕೊಟ್ಟೆ

ಅಜ್ಞಾನದಿಂದ ಬೆಳಕಿಗೆ ಪರಿಚಯಿಸಿ ಕೊಟ್ಟೆ.

 

ಕಳೆದು ಹೋಗದು ಈ ನಿನ್ನಯ ಪ್ರೀತಿ

ಮಾಸಿ ಹೋಗದು ಈ ನಿನ್ನಯ ನೆನಪು

ಬತ್ತಿ ಹೋಗದು ಈ ನಿನ್ನಯ ದಾಹ

ನಿನಗಾಗಿ ನಾ ಇರುವೆ  ಕಳೆದು ಹೋಗದಂತೆ .

 

                                                     ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.