ಕಲ್ಲತ್ತಗಿರಿಯ ರೋಚಕ ಪಯಣ...

2

   

               ನಿಸರ್ಗದ  ಮಡಿಲಿನ  ಅಭೂತಪೂರ್ವ  ಅನುಭವ  ಕಥನ..... ಜಿಟಿ ಜಿಟಿ ಎ೦ದು ಬೀಳುವ  ಮಳೆ ಸೊ೦ಯ್ಯನೆ  ಬೀಸುವ   ಗಾಳಿ..,ಅತಿ ಎತ್ತೆರದ  ಮರಗಳ  ಕೆಳಗೆ..ಒಮ್ಮೆ ಕಲ್ಪನೆ ಮಾಡಿಕೊ೦ಡು ಓದಿ..

ಇಲ್ಲಿಗೆ ಒಂದು ವರ್ಷದ ಹಿಂದೆ ನಾನು ನನ್ನ ಸ್ನೇಹಿತರು ಕಲ್ಲತ್ತಗಿರಿಗೆ ಹೋಗಿದ್ದ ರೋಮಾಂಚನಕಾರಿ ಪಯಣದ ಬಗ್ಗೆ ಬರೆಯುತಿದ್ದೇನೆ. ಅದು 2೦11 ಜುಲೈ ಮೊದಲನೇ ವಾರ. ಅಂದು ಭಾನುವಾರ ಆದ್ದರಿಂದ ನಾವೆಲ್ಲ ಕಲ್ಲತ್ತಗಿರಿಗೆ ಹೋಗಿದ್ದೆವು.ಕಲ್ಲತ್ತಗಿರಿಯಲ್ಲಿ ದೇವರ ದರ್ಶನವೆಲ್ಲ ಮುಗಿದಮೇಲೆ ನಾವು ಬೆಟ್ಟದ ಮೇಲಿನಿಂದ ಹರಿಯುವ ಜಲಪಾತದ ನೀರಿನ ಮೂಲ ಹುಡುಕುತ್ತ ಹೊರೆಟೆವು..ಆಗ ಮಳೆ ಬೀಳುವ ಕಾಲವಾದ್ದರಿಂದ ಮಳೆ ಹನಿಯುತಿತ್ತು. ನಾವೆಲ್ಲ ಆ ಕೆಸರು ರಾಡಿನ ನೆಲದ ಮೇಲೆ ಹೆಜ್ಜೆಯೂರುತ್ತ ಪಕ್ಕದ ಕಾಫಿ  ತೊಟದ ಮುಖಾಂತರ ಹೊರೆಟೆವು. ಹಾಗೆ ಒಂದು ಚೂರು ದೂರ ಹೊರಟಾಗ ಮತ್ತೆ ಝರಿ ಹರಿಯುತಿತ್ತು. ಹಾಗೆ ಆ ಮುಂದೆ ಕಾಫಿ ತೋಟದ ದಾರಿ ನಮಗೆ ಮುಂದುವರೆಯಲು ದೂರ ಅನಿಸಿದ ಕಾರಣ ಆ ಝರಿಯ ಹರಿವಿಗೆ ವಿರುದ್ದವಾಗಿ ಪಾಚಿ ಕಟ್ಟಿದ ಕಲ್ಲು ಬಂಡೆಗಳ ಮೇಲೆ ಸಾಗಿದೆವು.ನಮಗೆಲ್ಲ ಎಲ್ಲಿ ಜಾರಿ ಬೀಳುವೆವೊ ಎಂಬ ಭಯ ಬೇರೆ. ಹೀಗೆ ಒಮ್ಮೆ ಯರಿ ಏರಿ ಒಮ್ಮೆ ಕಾಫಿ ತೋಟದ ದಾರಿ ಎರಡು ನಡುವೆ ಸಾಗಿ ಬಂದೆವು.ದಾರಿಯಲ್ಲಿ ಕಡಿದಾದ ಬಂಡೆ ಏರಿ ಜಾರಿ ಕಾಡು. ಹೊಕ್ಕು ಆಚೀಚೆ ಕಾಫಿ ತೋಟದ ಮಧ್ಯೆ ತೂರಿ ಹೋಗುತಿದ್ದೆವು. ಮುಂಗಾರು ಮಳೆ ಹನಿ ಜೋರಾಗತೊಡಗಿತ್ತು. ಆ ಎತ್ತರದ ಮರಗಳ ನಡುವೆ  ಚಿಟಪಟ ಸದ್ದು  ಕೇಳುತಿತ್ತು.

ಅಷ್ಟರಲ್ಲೇ ಒಂದು ಕಿತ್ತಳೆ ಮರ ಕಂಡಿತು ಎಲ್ಲರು ಮನಸೋ ಇಚ್ಛೆ ತಿಂದೆವು. ಅದನ್ನು ತಿನ್ನಲು ನಮಗೆ ಭಯ ಏಕೆಂದರೆ ಕಾಫಿ ತೋಟದ ಯಜಮಾನರುಗಳು ಕಾಯಲು ಚೌಡಿ

ಮಾಡಿಸಿ ಬಿಟ್ಟಿರುತ್ತಾರೆ ಯಾರಾದರು ಏನಾದರು ತಿಂದರೆ ಅವರು ರಕ್ತಕಾರಿ ಸಾಯುತ್ತಾರೆಂಬ ಮೂಢ ನಂಬಿಕೆ.

ಅದನ್ನೆಲ್ಲ ಲೆಕ್ಕ ತೆಗೆದುಕೊಳ್ಳದೆ ನಾವು ಮುಂದುವರೆದೆವು. ನಮಗೆ ಮುಂದೆ ಎರಡು ಮೂರು ಕಾಲ್ಸೇತುವೆ ಸಿಕ್ಕವು .ಅದೆಲ್ಲ ದಾಟಿ ಪ್ರಕೃತಿಯ ಮಡಿಲ ಆಳಕ್ಕೆ

ಇಳಿದು ಸಾಗಿದೆವು ಮುಂದೆ ನಮಗೆ ಜಲಲ ಧಾರೆ ಯೊಂದು ಎದುರಾಯಿತು.ಅದೇ ಯಾರೂ ನೋಡಲು ಸಾಧ್ಯಾವಾಗಿರದ ಹೆಚ್ಚು ಜನ ನೋಡಿರದ ದೊಡ್ಡದಾದ ಗುಡ್ಡದ ತುತ್ತ ತುದಿಯಿ೦ದ ಧುಮ್ಮಿಕ್ಕುವ ಜಲಪಾತ..ಅದನ್ನು ನೋಡಿ ನಾವೆಲ್ಲ ರೋಮಾ೦ಚಿತರಾದೆವು..ಆದರೆ ಅದು ನಮಗಿ೦ತ ಸ್ವಲ್ಪ ದೂರದಲ್ಲಿತ್ತು..ನಾವು ಇಲ್ಲಿ೦ದಲೇ ಅದನ್ನು   ನೋಡಿ ಸ೦ತಸಪಟ್ಟೆವು..ನಾವಿಬ್ಬರು ಸ್ನೇಹಿತರು ಇಲ್ಲಿಂದ ಮುಂದೆ ಹೋಗೊದು ಅಪಾಯ ಎಂದು

ಹಿಂತಿರುಗಿದೆವು. ನಮ್ಮ ಮಾತು ಕೇಳದ ಇನ್ನಿಬ್ಬರು ಇನ್ನು ಮುಂದೆ ಸಾಗಿ  ಹತ್ತಿರ ಹೋಗಿ ನೋಡಿಕೊ೦ಡು ಬರುತ್ತೇವೆ ಎ೦ದು ಹೋದರು.. ನಾವು ಹಿ೦ತಿರುಗೆ ಮತ್ತೆ ಕಾಫಿ ತೋಟತದಿಒದ  ಕೆಳಗೆ ಇಳಿಯುವಾಗ ಕೆಲ ಸಮಯ ದಾರಿ ತಪ್ಪಿಬಿಟ್ಟೆವು.  ಮಳೆ ಬೇರೆ ಜೋರಾಗ ತೊಡಗಿತ್ತು

ಅಂತೂ ಹೇಗೋ ಏನೋ ಅಲ್ಲಿ ಇಲ್ಲಿ ಸುತ್ತಿ ನಾವಿಬ್ಬರು ಮತ್ತೆ ದೇವಾಲಯದ ಬಳಿ ಇಳಿದು ಬಂದೆವು. ಇನ್ನುಳಿದಬ್ಬಿರು ಒಂದು ಘಂಟೆಯ ನಂತರ ಬಂದು ನಮ್ಮನ್ನು

ಸೇರಿಕೊಂಡರು. ಅವರು ಜಲಪಾತದ ಕೆಳಗೆ ಹೋಗಿದ್ದೆವು ಎಂದು ನಮ್ಮ ಬಳಿ ಹೇಳಿಕೊಂಡರು.ಇನ್ನೊ೦ದು ಪ್ರಮುಖ ವಿಷಯ ಏನೆ೦ದರೆ ನಾವು ಅಲ್ಲಿಗೆ ಹೋಗಿ ಬ೦ದ ನ೦ತರ ನಾವು ಅಲ್ಲಿಗೆ ಹೋಗಿದ್ದೆ ತಪ್ಪು ಎ೦ದು ಬೈದರು.ಏಕೆ೦ದರೆ ಅಲ್ಲಿಗೆ ಹೋದವರು ಯಾರು ವಾಪಸ್ ಬ೦ದಿಲ್ಲವ೦ತೆ....ಆದರೆ ನಾವು ಬ೦ದಿಲ್ಲವೆ..ಇದೇ ಇರಬೇಕು ಮೂಢ ನ೦ಬಿಕೆ ಎ೦ದರೆ..  ಆ ನಂತರ ನಾವು ನಮ್ಮ ಊರುಗಳಿಗೆ ಹೊರೆಟೆವು..ಆದರೆ ಅಲ್ಲಿನ  ಅವಿಸ್ಮರಣೀಯ  ನೆನಪುಗಳು ಇನ್ನು ಹಸಿರಾಗೆ ಇವೆ..

ಆನ೦ತರ  ಅಲ್ಲಿ ಚಿತ್ರೀಕರಿಸಿದ  ವೀಡಿಯೋ ತುಣುಕುಗಳನ್ನು  ಅಪ್ಲೋಡ್  ಮಾಡಿ ಲಿ೦ಕ್  ಕೊಡುತ್ತೇನೆ  ನೋಡಿ......ಇಲ್ಲಿ ಪ್ರಕಟಿಸಿರುವ  ಫೋಟೋಗಳು ಅಲ್ಲಿ ತೆಗೆದ  ನೈಜ  ಚಿತ್ರಗಳು..ಇದುವರೆಗು ಇದನ್ನು ಯಾರು ನೋಡಿರಲು  ಸಾಧ್ಯವಿಲ್ಲ  ಹಾಗೂ ಎಲ್ಲಿಯೂ ನಿವು ನೋಡಿರಲು ಸಾಧ್ಯವಿಲ್ಲ  ಏಕೆ೦ದರೆ ಅಲ್ಲಿ ಆ  ಜಲಪಾತದ  ಬಳಿಗೆ ಹೋಗೋದು ಬಹಳ  ಕಡಿಮೆ ಜನರು ಹಾಗೂ ಅದರಲ್ಲಿ ನಾವು ಒಬ್ಬರು..

ಗಮನಿಸಿಃ ಜಲಪಾತಕ್ಕೆ ಹೋಗಲು ಯಾವುದೇ ರೀತಿಯ  ಕಾಲುದಾರಿಯು ಇಲ್ಲ  ಹಾಗಾಗಿ ಅದರ  ಬಳಿ ಹೋಉವುದು ಅತ್ಯ೦ತ  ಅಪಾಯ..ದಯವಿಟ್ಟು ಯಾರು ಅದರ  ಬಳಿ ಹೋಗುವ  ದುಸ್ಸಾಹಸ  ಮಾಡಬೇಡಿ.... 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕುಮಾರ್ ಅವ್ರೆ ನಿಮ್ಮ ಅನುಭವ ಕಥನ ಸಖತ್ ಕುತೂಹಲಕಾರಿಯಾಗಿದೆ ... ಜೊತೆಗೆ ಸೇರಿಸಿದ ೨ ಚಿತ್ರಗಳು ಮಾತ್ರ ಅದೆಷ್ಟು ಪ್ರಯತ್ನಿಸಿದರೂ ನನಗೆ ಕಾಣಿಸುತ್ತಿಲ್ಲ...(ನನ್ನ ಸಿಸ್ಟಮ್ ಸಮಸ್ಯೆ ಇರಬಹುದು) ಕಲ್ಕತ್ತಗಿರಿ ಎಂದಿರುವುದು ನೋಡಿ ನಾ ನೀವ್ ಕಲ್ಕತ್ತೆಗೆ ಹೋಗಿದ್ದರ ಬಗ್ಗೆ ಬರೆದದ್ದೋ ಅಂದುಕೊಂಡೆ...!! ಈ ಕಲ್ಕತ್ತಗಿರಿ ಹೆಸರು ಇದೆ ಮೊದಲು ನಾ ಕೇಳುತ್ತಿರುವುದು... ನೀವೇ ಹೇಳಿದ ಹಾಗೆ ಆ ಜಾಗಕ್ಕೆ ಹೋಗಿರುವವರು ಕಡಿಮೆ ಹೋಗಿ ಫೋಟೋ ತೆಗೆದವರೂ ಇನ್ನು ಕಡಿಮೆ.. ಕೆಲವೊಮ್ಮೆ ಒಳ್ಳೊಳ್ಳೆಯ ಜಾಗಗಳನ್ನು ಪರಿಚಯಿಸಿದಾಗ ಆ ಮೊದಲು ಶುಚಿಯಾಗಿ ಮಟ್ಟಸವಾಗಿದ್ದ ಆ ಪ್ರದೇಶಗಳು ಪ್ರವಾಸಿಗರ ಧಾಳಿಗೆ ಸಿಕ್ಕು ಅವರು ಬೀಸಾಡೋ ತಾಜ್ಯಗಳಿಂದಾಗಿ ಹಾಳಾಗೋದು ಇದೆ.. ಪ್ರವಾಸಿ ಸ್ಥಳಗಳಿಗೆ ಹೋದಾಗ ನಮ್ಮ ಅನುಪಯುಕ್ತ ವಸ್ತುಗಳನ್ನ ಎಲ್ಲೆಂದರಲ್ಲಿ ಎಸ್ಯುವುದು ಬಿಡಬೇಕು... ಆ ವೀಡಿಯೊ ಯು ಟೂಬ್ ನಲ್ಲಿ ಸೇರಿಸಿ ಅದರ ಲಿಂಕ್ ಇಲ್ಲೇ ಲೇಖನದಲ್ಲಿ ಕೊಡಿ(ಬರಹವನ್ನು ಎಡಿಟ್ ಮಾಡಿ ಅಲ್ಲಿ ಯು ಟೂಬ್ ಲಿಂಕ್ ಸೇರಿಸಿ) ನೋಡುವೆವು... ಆ ಬಗೆಗೆ ಮಾಹಿತಿ ಕೊಟ್ಟರೆ ನಾವ್ ಕೂಡ ಅಲ್ಲಿಗೆ ಹೋಗುವೆವು..ಜೊತೆಗೆ ನೀವಂತೂ ಬಂದೇ ಬರುವಿರಿ...!! >>>ಇನ್ನೊಂದು ಮುಖ್ಯ ವಿಷ್ಯ: ನೀವ್ ಬರಹ ಬರೆದು ಇಲ್ಲಿ ಸೇರಿಸುವಾಗ ಆದಷ್ಟು ಅಕ್ಷರಗಳನ್ನು ದೊಡ್ಡದು ಮಾಡಿ ಹಾಕಿ... ಶುಭವಾಗಲಿ ಮಾಹಿತಿಪೂರ್ಣ ಬರಹಕ್ಕಾಗಿ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿವಾಸಿ ಅವರೆ ತಾವು ಸರಿಯಾಗಿ ಗಮನಿಸಿ ನೋಡಿ ಅದು ಕಲ್ಲತ್ತಗಿರಿ ಕಲ್ಲ್ಕತ್ತಗಿರಿಯಲ್ಲ..ಅ0ದ ಹಾಗಿ ಇದು ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಪ್ರವಾಸಿ ತಾಣ ಹಾಗು ಪುಣ್ಯಕ್ಷೇತ್ರ..ಇಲ್ಲಿಗೆ ಅರಸೀಕೆರೆ ಇ0ದ ಕಡೂರು ಬೀರೂರು ಮಾರ್ಗವಾಗಿ ಹೋಗಬಹುದು.. ಆಮೇಲೆ ನಾವು ಹುಡುಕಿಕೊ0ಡು ಹೋದ ಜಲಪಾತದ ಬಳಿ ಹೋಗುವುದು ಅಪಾಯ ಹಾಗಾಗಿ ಎಚ್ಚರವಯಿಸಿ.....ಸ್ಥಳಿಯರ ಸಲಹೆ ಪಡೆದು ಹೋಗಿಬನ್ನಿ..ಇನ್ನು ಆ ಜಾಗದ ಕೆಳಪ್ರದೇಶ ಪ್ರವಾಸಿಗರ ಭಕ್ತರ ದಾಳಿಗೆ ಸಿಕ್ಕು ಅಶುಚಿಯಾಗಿದೆ..ಅದರೆ ಆ ಜಲಪಾತದ ಪ್ರದೇಶ ಸಧ್ಯಕ್ಕೆ ಶುಚಿಯಾಗಿದೆ...ಅದಕ್ಕೂ ಮುನ್ನ ನೀವು ನೋಡಲೇಬೆಕೆ0ದರೆ ಆ ಜಲಪಾತದ ಬಳಿಗೆ ಹೋಗಲು ಯಾವುದೇ ರೀತಿಯ ದಾರಿಕೂಡ ಇಲ್ಲ ಹಾಗಾಗಿ ದೂರದಿ0ದಲೇ ಕಾಫಿ ತೋಟದವರು ಮಾಡಿಕೊ0ಡ ಕಿರುಸೇತುವೆ ಮೇಲೆ ನಿ0ತು ನೋಡಿದರೆ ಜಲಪಾತ ವೀಕ್ಷಿಸಬಹುದು..ಹತ್ತಿರಕ್ಕೆ ಹೋಗಬೇಕೆ0ದರೆ ಅದು ಅತ್ಯ0ತ ಅಪಾಯಕಾರಿಯಾದದ್ದು ...ಹತ್ತಿರಕ್ಕೆ ಹೋಗುವ ದುಸ್ಸಾಹಸ ಬೇಡ.. ವ0ದನೆಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕುಮಾರ್, ನನ್ನದು ದೊಡ್ಡ ಮಾನಿಟರ್(೩೨") ಸಂಪದ ಕಿರಿದು ಅನ್ನಿಸಿದಾಗ ctrl + ಮಾಡ್ ಹಿರಿದು ಅನ್ನಿಸಿದಾಗ ctrl- ಹೀಗೆ ಮಾಡಿ ಸಂಪದ ಓದುವೆ-ಪ್ರತಿಕ್ರಿಯಿಸುವೆ.. ಅಂತಹದೇ ಒಂದು ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಓದುವಾಗ ಕಲ್ಲತ್ತಹಳ್ಳಿ ಕಲ್ಕತ್ತಾ ಹಳ್ಳಿ ಆಗಿ ಬಿಟ್ಟಿದೆ...:((( ನನ್ನ ಪ್ರತಿಕ್ರಿಯೆಯನ್ನು ಈಗ ತಿದ್ದಿಕೊಳ್ಳಲು ಸಾಧ್ಯವೂ ಇಲ್ಲ..(((ಒಂದೈದು ನಿಮಿಷದ ಒಳಗಡೆ ಎಡಿಟ್ ಮಾಡಬಹುದು ಅಸ್ಟೆ.. ನೀವ್ ಕೊಟ್ಟ ಲಿಂಕ್ನಲ್ಲಿನ ವೀಡಿಯೋ ಗಳನ್ನು ನೋಡುವೆ) ನನಗೆ ಒಂದು ಕುತೂಹಲ ಇದೆ: ನೀವ್ ಬರಹ ಬರೆದು ಅದನ್ನು ಬಣ್ಣಗಳಲ್ಲಿ ಯಾಕೆ ಹಾಕುವಿರಿ?.... ಶುಭವಾಗಲಿ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉದಾ ವಿಶೇಷ ಸೂಚನೆ ಕೆಂಪು ಪರಿಸರದ ವಿಚಾರ ಹಸಿರು ಇತರೆ ಲಿಂಕ್ ಪಿಂಕ್ ಹೀಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಟೈಗರ್ ಕುಮಾರ್ ಅವರೆ, ನಿಮ್ಮ ಕಲ್ಹತ್ತಗಿರಿಯ ಪ್ರವಾಸದ ಅನುಭವ ರೋಚಕವಾಗಿದೆ; ಅದಕ್ಕಾಗಿ ಅಭಿನಂದನೆಗಳು. ಜಲಪಾತದ ಮೂಲವನ್ನು ಹುಡುಕಿ ಹೋಗದಿದ್ದರೂ ಕೂಡ ದೇವಸ್ಥಾನದ ನೀರಿನ ಝರಿಯಲ್ಲಿ ಎರಡು ಮೂರು ಬಾರಿ ಮಿಂದಿದ್ದೇನೆ. ಅಷ್ಟು ತಣ್ಣನೆಯ ನೀರು....ಅದನ್ನು ನೆನಸಿಕೊಂಡರೇ ಈ ಬೇಸಿಗೆಯಲ್ಲಿ ಒಂಥರಾ ಖುಷಿಯಾಗುತ್ತದೆ. (ಸಂಪದದ ಸಂಹಿತೆಯಂತೆ ಬರಹಗಳನ್ನು ಬಣ್ಣದ ಅಕ್ಷರಗಳಲ್ಲಿ ಅಚ್ಚಿಸುವಂತಿಲ್ಲ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

(ಸಂಪದದ ಸಂಹಿತೆಯಂತೆ ಬರಹಗಳನ್ನು ಬಣ್ಣದ ಅಕ್ಷರಗಳಲ್ಲಿ ಅಚ್ಚಿಸುವಂತಿಲ್ಲ) >>> @ ಕುಮಾರ್, ಅದನ್ನು ನಾನೂ ಆಗಲೇ ಹೇಳಬೇಕು ಅಂದುಕೊಂಡಿದ್ದೆ, ಆದರೆ ಆಗಲಿಲ್ಲ... ಈಗ ಶ್ರೀಧರ್ ಜೀ ಹೇಳಿರುವರು.. ಆ ಬಗೆಗೆ ವಿವರ ಕೆಳಗಿನ ಲಿಂಕ್‌ನಲ್ಲಿದೆ.. ಓದಿ... http://sampada.net/s... ನನ್ನ ಪ್ರಕಾರ ಕಪ್ಪು ಅಕ್ಷರದಲ್ಲೇ ಬರಹ ಸೊಗಸಾಗಿ ಕಾಣುವುದು... ಶುಭವಾಗಲಿ... ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍============================================== ಜಲಪಾತದ ಮೂಲವನ್ನು ಹುಡುಕಿ ಹೋಗದಿದ್ದರೂ ಕೂಡ ದೇವಸ್ಥಾನದ ನೀರಿನ ಝರಿಯಲ್ಲಿ ಎರಡು ಮೂರು ಬಾರಿ ಮಿಂದಿದ್ದೇನೆ. ಅಷ್ಟು ತಣ್ಣನೆಯ ನೀರು....ಅದನ್ನು ನೆನಸಿಕೊಂಡರೇ ಈ ಬೇಸಿಗೆಯಲ್ಲಿ ಒಂಥರಾ ಖುಷಿಯಾಗುತ್ತದೆ. @ ಶ್ರೀಧರ್ ಜೀ, ಜೀ ಅವರು(ಕುಮಾರ್) ಚಿಕ್ಕಮಗಳೂರು ಹತ್ತಿರ ಇರುವ ಆ ಜಲಪಾತದ ಬಗ್ಗೆ ಜರಿಯ ಬಗ್ಗೆ ಹೇಳಿದ್ದರು, ನೀವೂ ಅಲ್ಲಿಗೆ ಹೋಗಿದ್ದೀರ? ಆ ಬಗೆಗೆ ಯಾಕೆ ಒಂದು ಪ್ರವಾಸಿ ಕಥನ ಬರೆಯಬಾರದು...? ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇನ್ನು ಮುಂದೆ ಹಾಗೇ ಮಾಡುತ್ತೇನೆ.ಶ್ರೀಧರ್ ಹಾಗು ಸಪ್ತಗಿರಿವಾಸಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೇ, ಈ ಸಾರಿ ಮತ್ತೆ ಸಂಸಾರ ಸಮೇತನಾಗಿ ಅಲ್ಲಿಗೆ ಹೋದರೆ ಆಗ ಖಂಡಿತ ಅದರ ಬಗ್ಗೆ ಲೇಖನ ಬರೆಯುತ್ತೇನೆ. ನಾನು ಇದಕ್ಕೂ ಮುಂಚೆ ಅಲ್ಲಿಗೆ ಮೊದಲ ಬಾರಿ ಹೋಗಿದ್ದು 1978 & 1979ರಲ್ಲಿ ಮತ್ತು ಕಡೆಯ ಬಾರಿ ಹೋಗಿದ್ದು 1984ರಲ್ಲಿ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಜೀ ನೀವು ಖಂಡಿತ ಕಲ್ಲತ್ತಗಿರಿಗೆ ಭೇಟಿ ಕೊಟ್ಟಗಾ ಅದರ ಬಗೆಗೆ ಒಂದು ಪ್ರವಾಸಕಥನ ಬರೆಯುವದನ್ನು ಕಾಯುತ್ತಿರುತ್ತೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.