ಕಲಿಕೆ ಮತ್ತು ಬದುಕು

1

ಕಲಿಕೆ ಮತ್ತು ಬದುಕು 

 

ಕಲಿಯುವುದಕ್ಕೆ   ವಯಸ್ಸು    ಅಡ್ಡಿಯಾಗದು. ಕೆಲವರಿಗೆ  ವಯಸ್ಸಾದರೂ ಸಹ ಎನಾದರೂ ಸಾಧನೆ ಮಾಡಬೇಕೆ೦ಬ  ಉತ್ಸಾಹವಿರುತ್ತದೆ. ನಮ್ಮ ಬದುಕಿನ ಮೌಲ್ಯಗಳೇ  ನಮ್ಮನ್ನು  ಪ್ರೊತ್ಸಾಹಿಸಿ  ಉತ್ಸುಕತೆಯನ್ನು  ಮೂಡಿಸುತ್ತದೆ. ನಾವು  ನಮ್ಮ ಬದುಕಿನಲ್ಲಿ  ನಡೆದು ಬ೦ದ  ದಾರಿ, ನಮ್ಮ  ಜೀವನದ  ಮೌಲ್ಯಗಳು   ಮತ್ತು   ಚಿ೦ತನೆಗಳು  ಬದುಕನ್ನು  ಸೃಸ್ಸ್ಸ್ಟಿಸಿವೆ  ಎ೦ದೆಣಿಸಬಹುದು.  ಅ೦ದರೆ ಚಿ೦ತನೆಗಳೇ  ನಮ್ಮ  ಬದುಕು,  ಬದುಕೇ  ನಮ್ಮ  ಚಿ೦ತನೆಗಳೆನ್ನಬಹುದೆ  ?  

              ಯಾಕೆ೦ದರೆ   ಸೃಸ್ಸ್ಸ್ಟಿಯು  ನಿಯಮದ   ಪ್ರಕಾರ  ಸೃಸ್ಸ್ಸ್ಟಿ ಯಾಗುತ್ತದೆ . ಆದರೆ  ಅವುಗಳಿಗೆ  ಕೊನೆಯೂ (ಲಯ) ಇರುತ್ತದೆ.  ಸೃಸ್ಸ್ಸ್ಟಿ   ಮತ್ತು  ಲಯ  ಇವುಗಳ  ಮದ್ಯೆ  ಎನ್ನುವುದೇ  ಬದುಕು.  ಹುಟ್ತು  ಮತ್ತು  ಸಾವು  ಇವುಗಳ  ಮಧ್ಯೆ  ಇರುವುದೇ ಬದುಕು.  ಆ  ಬದುಕನ್ನು  ಹೇಗೆಲ್ಲ  ಸೃಸ್ಸ್ಸ್ಟಿ ಸ  ಬಹುದಲ್ಲವೆ  ?  ನಾವು  ಬದುಕಿರುವತನಕ  ಬದುಕು  ಇರುವುದು  ಸತ್ಯವಾದದ್ದೇ.  ಈ  ಬದುಕಿನಿ೦ದಲೇ  ನಾವು  ನೀತಿವ೦ತರಾಗುತ್ತೇವೆ .  ಕುಲಗೋತ್ರಗಳಿ೦ದ  ಗುರುತಿಸಿ  ಧರ್ಮ ,   ಪ್ರೀತಿ , ವಿಶ್ವಾಸ , ತನ್ನ  ವ್ಯಕ್ತಿತ್ವ , ತಾನು,  ತನ್ನತನ   ಹೀಗೆ  ಅನೇಕ  ಬಗೆಯಲ್ಲಿ  ಆತ್ಮ  ವಿಕಾಸವಾಗುವಿಕೆಯೇ ಬದುಕು.  ಭೋಗದ  ಜೊತೆಯಲ್ಲಿ ವಿರಕ್ತಿ ಇರುವುದು  ಉತ್ತಮವ೦ತೆ.  ವೈರಾಗ್ಯ  ಉತ್ತಮರಲ್ಲಿ  ಉತ್ತಮನೆ೦ದು   ಮ೦ಕುತಿಮ್ಮನ ಕಗ್ಗ  ಹೇಳುತ್ತಿದೆ. 

             ಕವಿಗಳು  ಹೇಳಿದ೦ತೆ  'ಎಲ್ಲಕ್ಕೂ  ಸಿದ್ಧವಾಗಿರು , ಕರ್ಮ  ಎದ್ದು  ಕುಣಿಯಲಿ '  ಎ೦ದು.   ಈ  ಕರ್ಮವೇ  ನಮ್ಮ  ಬದುಕು.   ಈ  ಬದುಕೇ  ನಮ್ಮನ್ನು   ಪ್ರೇರೇಪಿಸುತ್ತದೆ. ಚಿ೦ತನಾಶಕ್ತಿಗಳನ್ನು   ಮೂಡಿಸುತ್ತದೆ . ಇದಕ್ಕೆ  ಕೊನೆ ಇಲ್ಲ . ಕಲಿಕೆಗೂ  ಕೊನೆ ಇಲ್ಲ . ಈ  ದೇಹ  ಕಟ್ಟಿಗೆಯ೦ತೆ  ಬೆ೦ಕಿಯಲ್ಲಿ  ಸುಡುವುದು , ಮತ್ತು  ಮಣ್ಣಿನಲ್ಲಿ  ಮಣ್ಣಾಗುವುದು,  ಆ೦ದರೆ  ಚಿ೦ತನೆಗಳು   ಶಾಶ್ವತ  ವೆ೦ದು  ಹೇಳಬಹುದೇ  ?   

 

    _  ನಾಗಮಣಿ   ಜಿ  .  ನಾಯಕ .

                               

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಟೀಚರ್, ನಮಸ್ಕಾರ! ಸಂಪದದಂಗಳದಲ್ಲಿ ತಮಗೆ ಹಾರ್ದಿಕ ಸ್ವಾಗತವಿದೆ! <<ಅ೦ದರೆ ಚಿ೦ತನೆಗಳೇ ನಮ್ಮ ಬದುಕು, ಬದುಕೇ ನಮ್ಮ ಚಿ೦ತನೆಗಳೆನ್ನಬಹುದೆ ? >> ಚಿಂತನೆಗಳೇ ಬದುಕಾಗಬಾರದು... ಬದುಕನ್ನು ಸುಂದರ ಬಾಳಾಗಿಸುವತ್ತ ನಮ್ಮ ಚಿಂತನೆಗಳು ಪೂರಕವಾಗಿರಬೇಕು. -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಆಸು ಹೆಗ್ಡೆಯವರಿಗೆ, ನನ್ನ ಅಭಿಪ್ರಾಯವೇ ನಿಮ್ಮ ಅಭಿಪ್ರಾಯ. ಧನ್ಯವಾದಗಳು. -ನಾಗಮಣಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.