ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ

5

ಕನ್ನಡ ಕಲಿಯಿರಿ
---------------------
ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ
ಕನ್ನಡ ಬೆಳೆಸುತಾ ಬಾಳಿರಿ|
ಕನ್ನಡ ದೇವಿಗೆ
ಕನ್ನಡ ದೀಪವ ಹಚ್ಚುತ
ಬಾಳನು ಬೆಳಗಿರಿ|
ಕನ್ನಡದಿಂದಲೇ ಎಲ್ಲವ ಕಾಣುತ
ಕನ್ನಡ ದೀವಿಗೆ ಹಚ್ಚಿರಿ|
ಕನ್ನಡ ಬಾವುಟ ಹಾರಿಸಿ
ಕನ್ನಡ ಡಿಂಡಿಮ ಬಾರಿಸಿ||

ಕನ್ನಡವಲ್ಲವೇ ನಮ್ಮೆಲ್ಲರಿಗೂ ಕಾಮಧೇನು
ಕನ್ನಡವಲ್ಲವೇ ನಮ್ಮೆಲ್ಲರಿಗೂ ಕಲ್ಪತರು|
ಕನ್ನಡವಲ್ಲವೇ ನಮ್ಮೆಲ್ಲರ ತಾಯಿಬೇರು
ಎಳೆಯೋಣ ಬನ್ನಿ ಎಲ್ಲರು ಸೇರಿ ಕನ್ನಡ ತೇರು||

ಕನ್ನಡವೇ ನಮ್ಮೆಲ್ಲರ ಉಸಿರಾಗಲಿ
ಕನ್ನಡತನವು ನಮ್ಮಲ್ಲಿ ಸ್ಥಿರವಾಗಲಿ|
ಕನ್ನಡ ಬಳಸದ ಕನ್ನಡಿಗರೇ ಆತ್ಮಾವಲೋಕಿಸಿ
ಕನ್ನಡ ಬೆಳೆಸದ ಕನ್ನಡಿಗರೆ
ಕನ್ನಡವ ಉಪೇಕ್ಷಿಸದಿರಿ|
ಕನ್ನಡ ಜನ ಕನ್ನಡತನವನು
ಅಪಮಾನಿಸಿದವರಿಗೆ ಧಿಕ್ಕಾರವಿರಲಿ
ಕನ್ನಡ ಆಡಳಿತಭಾಷೆಯ ನಿಂದಿಸುವರಿಗೆ
ನಮ್ಮಯ ಧಿಕ್ಕಾರವಿರಲಿ||

-ಜಾನಕಿತನಯಾನಂದ

(ಜೀವನತರಂಗಗಳು ಕವನಸಂಕಲನದಿಂದ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.