ಕಡಲು -ಒಡಲು

0

ತೀರ  ಯಾನಕೆ ಹಲುಬಿದೆ ತೆರೆ 
ಮೈಯಲಿ ತುಂಬಿ 
ಸುಖ  ದುಃಖಗಳ ಭಾವನೆಯ 
ನೀಲ ಬಿಳುಪಿನ ನೊರೆ 
 
ತೆರೆಗೋ  ತನ್ನೊಳಗಿನ 
ನೋವ , ಸಿಟ್ಟು ಹತಾಶೆಗಳ 
ಹೊರ ಹಾಕುವ  ತವಕ 
ಇವೆಲ್ಲ ಬಂಡೆಗಳಂತೆ  ಎಂದಿಗೂ  ವಿಮುಖ 
 
ಬಂಡೆಗೋ , ತನ್ನವರ  ತಬ್ಬಿಕೊಳ್ಳುವ 
ಎದೆಗೊತ್ತಿ, ಕಷ್ಟಗಳ ಹೇಳಿಕೊಳ್ಳುವಾಸೆ 
ತೆರೆ ದೂಕಿ , ಕಲ್ಲು ಬಂಡೆಗಳ 
ದಡದಿಂದ  ಹೊರಹಾಕುವಾಸೆ 
 
ಮರಳು ತನ್ನನು ತಾ ಪ್ರತಿ ನಿಮಿಷ ತೊಳೆದು 
 ಹೊಳೆದು ತೆರೆಗಳೊಂದಿಗೆ ಬೆರೆದು 
ಬಂಡೆಗಳಡಿಯಲ್ಲಿ ಧ್ಯಾನವ ಹೊದೆದು 
 ಇಡಿಯ  ಕಡಲನ್ನೇ ವಿಸ್ಮಯ ಮೆರೆದು 
 
ಕಡಲು  ವಿಸ್ಮಯದ  ಒಡಲು 
ಮನದ ಸ್ಥಿತಿಯ  ಧ್ಯಾನಸ್ಥ  ಮಡಿಲು 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.