ಕಚ'ಗುಳಿಗೆ' - 02

3

ಈ ಬಾರಿಯ ಲಹರಿ ಯಾಕೊ ಹೆಚ್ಚು ಹೆಚ್ಚು ಒಡವೆಗಳ ಸುತ್ತಲೆ ಸುತ್ತುತ್ತಿತ್ತು. ಅದಕ್ಕೆ ದೃಷ್ಟಿ ಬೊಟ್ಟಾಗಿರಲೆಂದು ಮೊದಲನೆಯದನ್ನು ಬೇರೆಯದಾಗಿಸಿ ಮಿಕ್ಕಿದ್ದೆಲ್ಲ ಬೆಳ್ಳಿ ಬಂಗಾರವಾಗಿಯೆ ಇರಿಸಿದೆ. ಸರಳವಾದ ಪದಗಳಲ್ಲಿ,  ತುಸು ಪದಗಳಲ್ಲಿ ತಾಕಲಾಡಿಸಿದ ಸಾಲುಗಳಷ್ಟೆ ಇಲ್ಲಿ ಬಂಡವಾಳವಾದರೂ, ಒಡವೆಯ ಮೇಲಿನ ಹೆಣ್ಣಿನ ಅಪರಿಮಿತ ಮೋಹವನ್ನು ಲಘುವಾಗಿ ಛೇಡಿಸುವ ಪುಟ್ಟ ಲಹರಿಗಳಿವು. ಅಂತೆಯೆ ಸದಾ ದೀಪದ ಸುತ್ತಲ ಪತಂಗದ ಹಾಗೆ ಪ್ರೀತಿ, ಪ್ರೇಮದ ತಪನೆಯಲ್ಲೆ ಯಾತನೆ ಪಡುವ ಗಂಡುಗಳ ದೌರ್ಬಲ್ಯಕ್ಕು ಕನ್ನಡಿ ಹಿಡಿಯುವ ಹವಣಿಕೆ. ಪರಸ್ಪರರ ಬೇಡಿಕೆಗಳ ಸಮಾಗಮ ಬಿಂದು ಸರಿ ಜತೆಗೂಡಿದರೆ ಅದ್ಭುತ ಪ್ರೇಮ ಕಾವ್ಯ; ಕಾಲೆಳೆದುಕೊಂಡು ಮೂಲೆ ಸೇರಿದರೆ ದುರಂತ ಕಾವ್ಯ. ಎರಡರ ನಡುವಿನ ಎಡವಟ್ಟಾದರೆ, ಪ್ರೀತಿ ಪ್ರೇಮದ ಸರಕನ್ನು ಬೆಳ್ಳಿ ಬಂಗಾರದ ಮೂಲಕ ವಿನಿಮಯ ಮಾಡಿಕೊಳ್ಳಬಹುದಾದ 'ಹೊಂದಾಣಿಕೆಯ ಬಾಳು' !

ಮತ್ತೊಂದು ಟೈಮ್ಪಾಸ್ ಕಚ'ಗುಳಿಗೆ' - ಪದ ಲಾಸ್ಯ :-)

01. ಪಾಪ...
__________________

ಪ್ರೇಮದೆ
ಮೇಲೆದ್ದರೆ ಜಾಣ
ಜಾರಿ ಬಿದ್ದರೆ ಕೋಣ
ಬಿದ್ದೂ ಮೇಲೇಳದಿದ್ದರೆ ?
(ಪಾಪ...)
ಅವಳ ಜತೆಗೇ
ಕಲ್ಯಾಣ! 

02. ದುಬಾರಿ ಬೆಲೆ
______________

ಅವಳಪ್ಪುಗೆ 
ಬಿಸಿ
ಚುಂಬನದ 
ಬೆಲೆ
ಕೈಗೊಂದೊಂದೆ
ಬಂಗಾರದ 
ಬಳೆ !

03. ತಮ್ಮಾ, ತುಸು ಎಚ್ಚರ!
____________________

ಕುಡಿನೋಟ
ಕಣ್ಮಿಂಚು
ಮುಗುಳ್ನಗೆ
ಸಿಹಿ ಮಾತಿನ ದರ,
ಬೆರಳುಗಳಿಗೆ
ಭಾರಿ 
ಚಿನ್ನದ ಉಂಗುರ !

04. ಶ್ಯಾನೆ ಹೆಣ್ಣು
____________

ನಾ
ಪ್ರೀತಿಗೆ
ದಕ್ಕಬೇಕಿದ್ದರೆ 
ಹುಡುಗ,
ತಂದು ಮಡುಗೊ
ಬೆಳ್ಳಿ ಬಂಗಾರದ ಕಡಗ !

05. ಉಳಿತಾಯ ಖಾತೆ
__________________

ಮಾತು ಬೆಳ್ಳಿ
ಮೌನ ಬಂಗಾರ
ಪಾಲಿಸಿದರೆ ಅಕ್ಷರಶಃ
ನಾವುಳಿಸಬಹುದು -
ಸಾವಿರಾರು 
ಡಾಲರ !

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಮೈಸೂರು ರವರಿಗೆ ವಂದನೆಗಳು
'ಕಚಗುಳಿಗೆ೨' ಬಹಳ ಚೆನ್ನಾಗಿದೆ. ಪಾಪ, ದುಬಾರಿ ಬೆಲೆ, ತಮ್ಮಾ ತುಸು ಎಚ್ಚರ, ಶ್ಯಾನೆ ಹೆಣ್ಣು ಮತ್ತು ಮತ್ತು ಉಳಿತಾಯ ಖಾತೆ ಹನಿಗವನಗಳು ಸರಳವಾದರೂ ಎಲ್ಲವೂಗಳಲ್ಲಿಯೂ ಒಂದೊಂದು ನೀತಿ ಸೂತ್ರ ಅಡಗಿದೆ, ಜೀವಂತಿಕೆಯ ಕಿರುಗನಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ, ಸರಳವಾಗಿ ಓದಿಸಿಕೊಂಡುಹೋಗುತ್ತ ಒಂದು ಕಿರುನಗೆ ಮೂಡಿಸಿದರೆ ಸಾಕೆಂಬ ಆಶಯದ ಲಘು ಬರಹಗಳವು. ತಮಗೆ ಇಷ್ಟವಾಯ್ತಲ್ಲ ಅದು ಸಂತಸ ತರುವ ವಿಚಾರ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.