ಕಚ'ಗುಳಿಗೆ'

4.333335

ಸುಮ್ಮನಿರಲಾರದೆ ತೀಡಿದ ಪದಗಳು ಗೀಚಿದ ಸಾಲಾದಾಗ ಬಂದ ಲಹರಿಯ ತುಣುಕುಗಳು. ಚುಟುಕವೊ, ಮಿನಿಗವನವೊ, ಹನಿಗವನವೊ ಎಂದೆಲ್ಲ ತಲೆ ಕೆಡಿಸಿಕೊಳ್ಳದೆ ಇಲ್ಲಿ ಡಾಕ್ಟರು ಕೊಟ್ಟ ಮಾತ್ರೆಯ ಹಾಗೆ ಒಟ್ಟಿಗೆ ಗುಂಪಿನಲ್ಲಿ ಹಾಕಿದ್ದೇನೆ, ಲಘು ಹಾಸ್ಯ ಮುಗುಳ್ನಗಿಸುವ ಕಚ'ಗುಳಿಗೆ'ಯಾದೀತೆಂಬ ಆಶಯದಲ್ಲಿ - ಏನಿಲ್ಲದಿದ್ದರೂ ಟೈಂಪಾಸ್ ಲೆಕ್ಕದಲ್ಲದರೂ ನೋಡಬಹುದೆಂದುಕೊಂಡು :-)

01. ಹಣದ ಋಣ 
____________

ಇಟ್ಟುಕೊಳ್ಳಬಾರದು
ಸಾಲದ ಋಣ
ತಿರುಗಿಸಿ ಕೊಟ್ಟುಬಿಡೋಣ
ಅಂದರೆ -
ಹುಟ್ಟುತ್ತಿಲ್ಲವೆ 
ಹೊಸ 
ಸಾಲದ ಹಣ ! 

02. ಕ್ರೆಡಿಟ್ಟು ಕಾರ್ಡು ನೀತಿ ಸೂಕ್ತಿ
_________________________

ಮತ್ತೆ 
ಕೇಳಲಾಗದಷ್ಟು
ಪರಿಸ್ಥಿತಿ
ದಾರುಣ,
ಕಂಠ ಪೂರ್ತಿ
ತಿಂದು
ಆಗುವತನಕ
ನಿತ್ರಾಣ,
"ಸಾಲ 
ಮಾಡಿಕೊಂಡೆ
ತಿನ್ನೋಣ" !

03. ಜಾಣತನ
____________

ಚಿನ್ನದ ಬೆಲೆ
ಬಿದ್ದಾ-ಗೆಲ್ಲ
ಮುದ್ದಿಸುತ್ತಾಳೆ 
ನನ್ನ ಗಲ್ಲ !!

04. ದುರಾಸೆ
____________

ಗಂಡು
ಪ್ರಬುದ್ಧ
ಹೆಣ್ಣು
ಪ್ರಬುದ್ಧ
ವರದಕ್ಷಿಣೆ ಪಟ್ಟಿ
ಯಾಕಿನ್ನೂ ಉದ್ದ?

05. ವಿ'ದಾನ'
________________

ಮೈದಾನದಲಿ
ಚಿಕ್ಕವರಾಡೊ 
ಆಟ
ಹೊರಾಂಗಣ ಕ್ರೀಡೆ;
ಮೈ'ದಾನ'ದಲಿ
ದೊಡ್ಡವರಾಡೊ 
ಆಟ
'ಒಳಾಂಗಣ' ಕ್ರೀಡೆ :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಜಿ, ಕಚಗುಳಿಕೆ, ನಿಜವಾಗಿಯೂ ನಗು ಉಕ್ಕಿಸುತ್ತವೆ. ವರದಕ್ಷಿಣೆ ಎಲ್ಲರೂ ಪ್ರಬದ್ಧರಾದರೂ ಇನ್ನು ಏಕೆ ಪಟ್ಟಿ ಉದ್ದ? ಪರಿಸ್ಥಿತಿಯ ವ್ಯಂಗಗಳು.ನಗೆಹನಿಗಳು ಮನಕ್ಕೆ ಮುದ ಕೊಟ್ಟಷ್ಟು ಯಾವುದು ಕೊಡದು. ಅದಕ್ಕೆ ದೂರದರ್ಶನ ಕಾರ್ಯಕ್ರಮಗಳಲ್ಲಿ ಅವುಗಳಿಗೆ ಅತಿ ಹೆಚ್ಚು ಟಿ ಆರ್ ಪಿ. ಅಲ್ಲವೇ ಸರ್. ವಂದನೆಗಳೊಂದಿಗೆ, -ಲಕ್ಷ್ಮೀಕಾಂತ ಇಟ್ನಾಳ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಟ್ನಾಳರಿಗೆ ನಮಸ್ಕಾರ, ನನಗೆ ಚುಟುಕ ಬರೆದ ಅಭ್ಯಾಸ, ಅನುಭವ ಕಡಿಮೆ. ಹೀಗಾಗಿ ಅದರ ಕುರಿತು ತುಸು ಅನುಮಾನವಿತ್ತು. ನಿಮ್ಮ ಪ್ರತಿಕ್ರಿಯೆ ಓದಿದಾಗ ಎಲ್ಲೊ ಓದಿದ್ದು ನೆನಪಾಯ್ತು - ಒಮ್ಮೆ ನಕ್ಕರೆ ಸುಮಾರು 64 ಜತೆ ನರಗಳು ತಂತಾನೆ ವ್ಯಾಯಮವಾದಂತೆ ವಿಕಸಿತವಾಗುತ್ತವಂತೆ. ನಗೆ ಒಂದು ರೀತಿ ಔಷದವಿಲ್ಲದ ಪರಿಹಾರವಾದ್ದರಿಂದ ನಿಮ್ಮ ಮಾತು ಸಂಪೂರ್ಣ ನಿಜ - ಬಹುಶಃ ನಗುವಿನ ಪ್ರಹಸನಗಳನ್ನು ಮಾತ್ರ ಎಲ್ಲರೂ ನೋಡುವುದರಿಂದ ಟಿಆರ್ಪಿಯು ಹೆಚ್ಚೇನೊ? (ಮಿಕ್ಕವನ್ನು ಆಯ ಗುಂಪಿನ ಆಸಕ್ತರು ಹೆಚ್ಚು ನೋಡುತ್ತಾರಾದರೂ, ಹಾಸ್ಯಕ್ಕೆ ಎಲ್ಲರು ಗ್ರಾಹಕರೆ ಚಂದಾದಾರರೆ) :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ಕಚಗುಳಿಗೆ ಸಶಕ್ತ ಚುಟುಕುಗಳು, ಸರಳತೆಯ ಜೊತೆಗೆ ವಾಸ್ತವದ ಸ್ಥಿತಿಯನ್ನು ಬಿಂಬಿಸುವ ಚುಟುಕುಗಳು. ಧನ್ಯವಾದಗಳು ಸರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ, ತಮಗೆ ಸರಳ ಚುಟುಕಗಳು ಹಿಡಿಸಿದ್ದು ಖುಷಿಯಾಯ್ತು. ಆದಷ್ಟು ಸರಳವಾಗಿ ಹೇಳುವ ಪ್ರಯತ್ನದಲ್ಲಿ ಎಷ್ಟೋಬಾರಿ ಅರಿವಿಲ್ಲದೆ ಸಂಕೀರ್ಣತೆ ಸುಳಿದುಬಿಡುತ್ತದೆ. ಉದ್ದನೆಯ ಕವನಗಳಲ್ಲಿ ಇದನ್ನು ತಡೆಯುವುದು ಕಷ್ಟವೆ. ಆದರೆ, ಈ ಚೋಟಾ ಮೆಣಿಸಿನ ಕಾಯಿಗಳಲ್ಲಿ ಸಾಧ್ಯತೆ ಸ್ವಲ್ಪ ಹೆಚ್ಚೆನಿಸಿ ಒಂದು ಸಣ್ಣ ಯತ್ನ ಮಾಡಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು. ನಾಗೇಶ ಮೈಸೂರು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರಗಳು ಸರ್,

ನಿಮ್ಮ ಈ ಪುಟ್ಟ ಕವನಗಳಲ್ಲಿ ಕೆಲವೊಂದು ನಗು ತರಿಸಿದರೆ ಮತ್ತೆ ಕೆಲವು ಕವನಗಳು ಒಂದು ಕ್ಷಣ ಚಿಂತನೆಗೆ ನೂಕುತ್ತವೆ.

ನಿಮ್ಮ ಕಚ'ಗುಳಿಗೆ'ಗಳು ಚೆನ್ನಾಗಿ ಮೂಡಿಬಂದಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ರವೀಂದ್ರರೆ, ಈ ಗುಳಿಗೆಗಳು 'ಫ್ರೀ' ಆದಕಾರಣ, ನಗಿಸಲಿ, ಬಿಡಲಿ ಪ್ರಯತ್ನಿಸಲಂತೂ ಅಡ್ಡಿಯಿರಲಿಕ್ಕಿಲ್ಲ ಎಂದು ಭಾವಿಸಿದ್ದೆ. ಆದರೆ ನಿಮ್ಮ ಪ್ರತಿಕ್ರಿಯೆಯಿಂದ ಮತ್ತೊಂದು "ಧನಾತ್ಮಕ ಅಡ್ಡ ಪರಿಣಾಮ (= ಚಿಂತನೆಗೆ ಹಚ್ಚುವ)" ಕೂಡ ಸಾಧ್ಯವಿದೆಯೆಂದು ಅರಿವಾಯ್ತು! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾಗೇಶ ಮೈಸೂರು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚುಟುಕು ಚಟಾಕಿ ಚೆನ್ನಾಗಿದೆ

ದಕ್ಷಿಣೆ ಕೊಡಲು ಈ ತಾಯ್ತಂದೆ ಬದ್ದ
ದಕ್ಷಿಣೆ ತೆಗೆದುಕೊಳ್ಳಲ್ ಆ ತಾಯ್ತಂದೆ ಸಿದ್ದ
ದಕ್ಷಿಣೆ ತಾರದಿದ್ದಲ್ಲಿ ಮನೆಯೋ ಪ್ರಕ್ಷುಬ್ದ
ಕೆಲವೊಮ್ಮೆ ವಿಕೋಪಕ್ಕೆ ಸೊಸೆಯೇ ನಿಶಬ್ದ
ಆ ಈ ಗೊಡವೆ ಬೇಡವೆಂದೇ ಬುದ್ದ ವೈರಾಗ್ಯ ಹೊದ್ದ
ಎಲ್ಲರೂ ಮಲಗಿರಲು ಅವನೊಬ್ಬ ಎದ್ದ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಲ್ಲೆಯವರೆ ನಮಸ್ಕಾರ, ಚುಟುಕ ಚಟಾಕಿಗೆ ಪ್ರತಿಕ್ರಿಯಿಸುತ್ತ ಮತ್ತೊಂದು ಸೊಗಸಾದ ಕವನವನ್ನೆ ಹೊಸೆದುಬಿಟ್ಟಿದ್ದೀರಾ :-) ಜತೆಗೆ ಈ ಕೆಲವು ಹೇಳದೆ ಬಿಟ್ಟ ಸಾಲುಗಳನ್ನು ಸೇರಿಸಬಹುದೆನಿಸುತ್ತದೆ:
...
ಏಳದಿದ್ದವನಿಗೆ ಬದುಕೆಲ್ಲ ವಿಷಾದ
ಪಾಪ, ಕವಿಯಾಗಿ ಕವಿತೆಗಳ ಹೊಸೆದ
ಕೈಲಾಗದೆ ಮೈ ಪರಚಿಕೊಂಡ ಉನ್ಮಾದ!

(ಹಾಸ್ಯದ ಲಹರಿಗೆ ಕವಿವರ್ಯರುಗಳ ಕ್ಷಮೆ ಕೋರುತ್ತ)

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೋಕಾನುಭವ, ಸ್ವಾನುಭವಗಳ ಹಿತಮಿಶ್ರಣ:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಕವಿಗಳೆ, ಎಲ್ಲಾ ಕಂಡಿದ್ದು, ಕೇಳಿದ್ದು, (ಅವರಿವರು) ಅನುಭವಿಸಿದ್ದು :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.