ಓ ಸೈನಿಕನೇ ನಿನಗೆ ಶತಕೋಟಿ ನಮನ

5

ನಾನು ನನ್ನದೆಂಬ ಸ್ವಾರ್ಥವಿಲ್ಲದೆ,
ನಾನು ನಮ್ಮವರೆಂಬ ನಿಸ್ವಾರ್ಥಿ.
ತ್ಯಾಗ ಶಿಸ್ತೇ ನಿನ್ನ ವಸ್ತ್ರ‌;
ಬಲಿದಾನವೇ ನಿನ್ನ ಜೀವಾಳ;
ದೇಶಭಕ್ತಿಯೇ ನಿನ್ನ ಅಸ್ತ್ರ;
ದೇಶವೇ ನಿನ್ನ ಸರ್ವಸ್ವ.

ದೇಶ ರಕ್ಷಣೆಗಾಗಿ ಸೆಟೆದುನಿಲ್ಲುವೆ
ಆತ್ಮಬಲದಿಂದ ಪ್ರಬಲ ಗೊಂಡಿದೆ ಗಡಿಭಾಗ
ಶೀತಗಾಳಿ ಮಳೆ ಮಾರುತಗಳು ನಿನಗೆ ತುಚ್ಛ.
ನೀನಿರುವಲ್ಲಿ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ.
ನಿನಗಾರು ಸಮಾನ ಸೈನಿಕನೇ
ಇದೋ ನಿನಗೆ ಶತಕೋಟಿ ನಮನ.

_ ಶಬೀನಾ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.