ಓ ಮಹಿಳೆ

0

ಓ ......ಮಹಿಳೆ
ಕೃಷಿ ಕೆಲಸದಲಿ ನಿನಗೆ ಸಮಪಾಲು
ಬಂದ ಆದಾಯದಲ್ಲಿ ಕೊನೆ ಪಾಲು.
ನೀ ಹಡೆದಾಗ ಹೊದಿಸುವರು ಶಾಲು
ಮಕ್ಕಳ ಅಡ್ಮಿಷನ್ ಕಾರ್ಡ್ ನಲ್ಲಿ ತಂದೆಯದೇ ಇನೀಷಿಯಲ್ಲು .

ಮದುವೆಯ ಬಂಧನ ಗಂಡು-ಹೆಣ್ಣು ಇಬ್ಬರಿಗೆ
ಬದಲಾವಣೆ ಮಾತ್ರ ನಿನ್ನೊಬ್ಬಳಿಗೆ.
ಕೆಲ ಪುರುಷ ಸಂಘಗಳು ಹೋರಾಟಕ್ಕೆ ಅರಚಾಟಕ್ಕೆ
ನಿನ್ನ ಸ್ತ್ರೀಶಕ್ತಿ ಸಂಘ ಮನೆ, ಹೊಟ್ಟೆ, ಬಟ್ಟೆಯ ಕಾಟಕ್ಕೆ.

ಮಗನಿಗೆ ಹೇಳುವರು ಎದೆ ಉಬ್ಬಿಸಿ ನಡೆ
ಮಗಳಿಗೆ ಹೇಳುವರು ತಲೆ ತಗ್ಗಿಸಿ ನಡೆ.
ಮಗ ಗೆಳೆಯರೊಡನಾಡಿ ತಡವಾಗಿ ಬಂದರೆ ಸ್ವಾತಂತ್ರ್ಯ ಮಗಳು ಅದೇ ಕೆಲಸ ಮಾಡಿದರೆ ಸ್ವೇಚ್ಛಾಚಾರ.

ಸಾಧಿಸಲು ಅಪಾರ ಅವಕಾಶಗಳು ನಿನಗಿವೆ
ಹೆಜ್ಜೆ ಮುಂದಿಟ್ಟರೆ ನಾಲ್ಕೆಜ್ಜೆ ಹಿಂದೆಳೆವ ಶಕ್ತಿಗಳು ಸುತ್ತಲಿವೆ.
ಎಲ್ಲ ರಂಗದಲ್ಲೂ ನೀ ಗಮನಾರ್ಹ
ಆದರೂ ನೀ 2ನೇ ದರ್ಜೆಯ ಸ್ಥಾನಕೆ ಅರ್ಹ.

ಸೇವಾ ಕಾರ್ಯಗಳಿಗೆ ನೀ ಮೂರ್ತ ಸ್ವರೂಪಿ
ನಿನಗೆ ಕಷ್ಟ ಬಂದಾಗ ಬಾರದವರು ಪಾಪಿ.
ಸಮಾನ ಸ್ವಾತಂತ್ರ್ಯ, ಸ್ಥಾನ-ಮಾನ ಕಾನೂನೇ ಒಪ್ಪಿದೆ ಮಾನವನ ಮನಪರಿವರ್ತನೆ ಆಗಬೇಕಿದೆ.

ವಂದನೆಗಳೊಂದಿಗೆ

ಎಸ್ ನಾಗರಾಜ
ನಾಗೂರ. ಬಾಗಲಕೋಟೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.