ಓ ಮನುಜನೆ

1.5

ಓ ಮನುಜನೆ ಹಾವಾಗಿ ವಿಷವ ಕಾರಬೇಡ

ಮುಳ್ಳಾಗಿ ಮನಸ್ಸಿಗೆ ಚುಚ್ಚಬೇಡ

ಕೆಂಡವಾಗಿ ಮನುಷ್ಯರ ಸುಡಬೇಡ

ಓ ಮನುಜನೆ ಮೊದಲು ನೀ ಒಳ್ಳೆಯವನಾಗು.

 

ಓ ಮನುಜನೆ ಹಠಕ್ಕೆ ಬಿದ್ದು ಮಠವ ಕಟ್ಟಬೇಡ

ಕೆಟ್ಟದ್ದನ್ನು ಬಗೆದವರಿಗೆ ಕೆಟ್ಟದ್ದನ್ನು ಮಾಡಬೇಡ

ಬದಲಿಗೆ, ನಿನ್ನ ಪಾಡಿಗೆ ನೀನಿರು ತಿದ್ದಿ ತೀಡಲು ಹೋಗಬೇಡ

ಓ ಮನುಜನೆ ಮೊದಲು ನೀನ್ನನ್ನೆ ನೀ ತಿದ್ದಿ ತೀಡಿಕೋ.

 

ಓ ಮನುಜನೆ ಸುಳ್ಳಿನ ಸುಳಿಗೆ ಬಿದ್ದು ವದ್ದಾಡಬೇಡ

ದಿನನಿತ್ಯದ ಬದುಕಿಗೆ ನೀ ಸೋಲಬೇಡ

ಹಗಲು ಕಂಡ ಬಾವಿಗೆ ನೀ ಬೀಳಬೇಡ

ಓ ಮನುಜನೆ ನಿನ್ನ ಪ್ರಯತ್ನ ಪ್ರಮಾಣಿಕವಾಗಿರಲಿ ನಿರಂತರ.

 

ಓ ಮನುಜನೆ ನೆರೆಹೊರೆಯವರಿಗೆ ದುಷ್ಟನಾಗಬೇಡ

ಓ ಸ್ನೇಹಿತನೆ ದೇಶಕ್ಕೆ ದ್ರೋಹ ಬಗೆಯಬೇಡ

ಓ ಮನುಜನೆ ಈ ಮಣ್ಣಿಗೆ ಕಳಂಕ ತರಬೇಡ

ಬದಲಿಗೆ, ಈ ಕರುನಾಡಿನ ಮಣ್ಣಿಗೆ ಕೀರ್ತಿ ತರುವಂತನಾಗು.

 

                                                                   - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು