ಓ!!!!ಸೈನಿಕ....

5

               ಓ!!!!ಸೈನಿಕ....
ಓ! !!ನಮ್ಮೆಲ್ಲರ ಕಾಯುವ ಸರದಾರ ಸೈನಿಕ
 ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ
 ಎನುವ ನಿನ್ನ ಕಾಯಕ ....
ಗಡಿಯಾಚೆ ಕಟ್ಟೆಚ್ಚರದಿ ಕಿಡಿಗೇಡಿಗಳ ಕಾದು 
ತನ್ನವರನೆಲ್ಲ ಮನದೊಳಗೆ ಮುಚ್ಚಿಟ್ಟು ಮೆಲ್ಲನೆ ಅಳುವ
 ಗುಂಡಿಗೆಯ ಬಡಿಯುವ ಮದ್ದು ಗುಂಡಿಗೆಗೆ ಗಂಡೆದೆಯ ತೋರಿ ತೂರಿ ಬರೆದಂತೆ ಸದ್ಧಡಗಿಸುವುದೇ ನಿನ್ನ ದೈನಿಕ ...
ನಗುವ ಚಂದಿರನ ತಂಪಲಿ ತಂಗಾಳಿ ಸೊಂಪಲಿ
ರಜನಿಯ ಸೆರೆಯಲಿ ನಿದಿರೆಯ ಮಂಪರಲಿ
 ಸುಂದರ ಸ್ವಪ್ನಗಳು ಕರಗದಂತೆ 
ದುರುಳರ ದೂರ ಸರಿಸುವ ಹರಿಕಾರ...
ಆಸೆ ನಿರಾಸೆಗಳ ಬದಿಗಿರಿಸಿ ಕೊಸರಾಡದೆ ಉಸಿರಿಡಿದು 
ಎದುಸಿರು ಬಿಡುವ ವೈರಿಯ ಎದುರಿಸಿ ಹೆದರಿಸಿ 
ಹೆಸರನು ಹಸಿರಾಗಿ ಪಸರಿಸುವ ತ್ಯಾಗಶೂರ  ....
ಹೆತ್ತಮ್ಮನ ಕರುಳಿನ ಕರೆಗೆ ಕರಗಿ ಸೊರಗದೆ 
ಹೊತ್ತೊಮ್ಮನ ಮೆರೆಸಲು ಜೀವ ಸವೆಸಿ 
ಜೀವನ ಸಾಗಿಸುವ ಜನ-ಜಗಸೇವಕ ....
ಎದುರಿಗೆ ಬಂದು ನಿಲದ 
ಹೇಡಿತನದ ಕರಗಳಿಗೆ ಸಿಲುಕಿ ನಲುಗಿ ಮರೆಯಾಗಿ  
ದೇಶ ಸಲಹಿದ ಮಹಾತ್ಮದ ಹುತಾತ್ಮ ದೀಪಕ 
ತ್ಯಾಗದ ಕೀರ್ತಿ ದಾಯಕ....
 
—Rukku 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.