ಒಲಿದುಬಿಡು ಸಂಕ್ರಾಂತಿಗಾದರು...

5

ನಭದಿ ದಿನಪನು ಬದಲಿಸಿಹನು
ಪಯಣ ಪಥ ಸಂಕ್ರಾಂತಿ ನೆಪದಲಿ
ಮಕರ ಸಂಕ್ರಮಣದ ತೇರನೇರಿ ಹೊರಟ
ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? ||

ಸುಡುಸುಡು ಕೆಂಡದವ ದಿನಕರನೆ
ಮಂಕಾಗುವಂತೆ ಮಾಡಿತೆ ಚಳಿಗಾಲ
ಮುಚ್ಚಿಡಲೆಷ್ಟು ಕಾಲ ? ಬೇಸತ್ತ ಓಲೈಸುತ್ತ
ಮುಖ ತಿರುಗಿಸಿ ನಡೆವಾಗ ಸುಮ್ಮನಿದ್ದರೆ ವ್ಯರ್ಥ ||

ಅರೆ ಮುಖ ತಿರುಗಿಸಿ ನಡೆದರು ನೋಡು
ಸಂದಿಗ್ದದಲಿನ್ನು ಅರೆ ಬಿಸಿಲು ಅರೆ ನೆರಳು
ಮುಸುಕಲಿ ಗುಸುಗುಸು ಯುದ್ಧ ಬರಿ ಮರುಳು
ಸರಿದು ಬಿಸಿಯಾಗುವ ಮೊದಲೆ ಅಪ್ಪಿಬಿಡೆ ಜಾಣೆ ||

ಬಿಗುಮಾನ ದುಮ್ಮಾನ ದೊಡ್ಡಸ್ತಿಕೆ ಬಿಡೆಲ್ಲ
ಬಂದಿದೆ ಸಂಕ್ರಾಂತಿ ನೆಪ ಬೀರು ಎಳ್ಳು ಬೆಲ್ಲ
ಎಳ್ಳು ಬೀರುವ ನೆಪದಲಿ ಕಣ್ಣ ರೆಪ್ಪೆ ಬಡಿಸೆ ವಿಚಲಿತ
ಆಗದ ದಿನಕರನೆಲ್ಲಿ ? ಕರಗಿ ತನ್ನ ಬಿಸಿಗೆ ತಾನಾಗಿಯೆ ||

ವೃದ್ಧ ಭೀಷ್ಮನು ಕಾದ ಗಳಿಗೆಯಿದು ಮುಹೂರ್ತ
ಉತ್ತರಾಯಣ ಪುಣ್ಯಕಾಲ ಸ್ವರ್ಗದ ಗಡಿ ಸನ್ನಿಹಿತ
ಬಿಟ್ಟೆಲ್ಲ ಕುಂಟುನೆಪ ಒಪ್ಪಿಕೊ ತಪ್ಪೊಪ್ಪಿಗೆ ಬಿನ್ನಹ
ಸರಿಯಿ ತಪ್ಪೊ ದುಃಖ ಬದಿಗಿಡು ಪ್ರೀತಿಗ್ಯಾವ ಲೆಕ್ಕ ?
 
(Picture courtesy from : http://cn.bing.com/images/search?q=love+angry&view=detailv2&&id=A891D1AB...)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಮೈಸೂರುರವರಿಗೆ ವಂದನೆಗಳು
ಸಂಕ್ರಾಂತಿ ಕುರಿತು ಬರೆದ ಕವನ ಸೊಗಸಾಗಿದೆ ಕೊನೆಯ ಸಾಲುಗಳು ಮನದಲ್ಲಿ ದಾಖಲಾಗುಂತಹವು, ವರ್ತಮಾನದಿಂದ ತಪಕ್ಕನೆ ದ್ವಾಪರಕ್ಕೆ ಓದುಗರನ್ನು ಕೊಂಡೊಯುತ್ತದೆ ಈ ಕವನ, ಕವನದ ಹುಟ್ಟು ಸಾರ್ಥಿಕ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.. ಸಂಕ್ರಾಂತಿಗೆ ಎಳ್ಳು ತಿಂದು ಒಳ್ಳೆ ಮಾತಾಡೆನ್ನುವ ನುಡಿಗು, ಮುನಿಸಿಕೊಂಡು ಮಾತಾಡಲೊಲ್ಲದ ಮನಸ್ಥಿತಿಗು ನಡುವಿನ ಸೇತುವೆಯಾಗಿಸಲೆಂದು ಕಟ್ಟಿದ ಕವನ - ತಮಗೆ ಹಿಡಿಸಿದ್ದು ನಿಜಕ್ಕು ಖುಷಿ. ಆದರೆ ತಾಂತ್ರಿಕ ತೊಡಕಿನಿಂದ ತಕ್ಷಣ ಪ್ರತಿಕ್ರಿಯಿಸಲಾಗಲಿಲ್ಲ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಯರ ಕವನ/ಕಥನ ಸೊಗಸಾಗಿ ಮೂಡಿಬಂದಿದೆ. ಆದರೆ ಈ ಕವನವಾಚನದಿಂದಲೂ ನನ್ನಾಕೆಯ ಸಿಟ್ಟಿಳಿಯದೇ ನಮ್ಮ ಸಂಕ್ರಾಂತಿ some-ಕ್ರಾಂತಿಯಾಯ್ತು! ಸಂಕ್ರಾಂತಿಯ (belatedly) ಶುಭಾಶಯಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಸ್ತ್ರಿಗಳೆ ನಮಸ್ಕಾರ, ತಮಗೂ ಸಹ ಶುಭಾಶಯಗಳು ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಸಾಧಾರಣ ಮುನಿಸಿದ್ದಾಗ, ಕವನ ವಾಚನದೊಂದರಿಂದಲೆ ಕೆಲಸ ಆಗಲ್ಲ ಬಿಡಿ. ಜತೆಗೇನಾದರು ಕ್ರಾಂತಿಕಾರಕ, ಸಂಕ್ರಾಂತಿ ಭಕ್ಷೀಸು ಸೇರ್ಸಿ ಟ್ರೈ ಮಾಡಬೇಕಿತ್ತು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.