ಒಲವಿನ ಸೆರೆ

1

ನಾನಿಲ್ಲಿ ಕೂತಿರುವೆ ಮಲೆನಾಡ ನಡುವೆಯಲ್ಲಿ, ನನ್ನವಳು ಹುಟ್ಟಿದ ಜಾಗದಲ್ಲಿ,
ಪ್ರಕೃತಿಯ ಯಾವ ಗುಣ ಸೋಕಿದ್ದರಿಂದ, ಅವಳು ಇಂದು ಅವಳಾಗಿದ್ದಾಳೆ ಎಂಬ ಕೌತುಕದಲ್ಲಿ,
ಈ ಮೋಡಾವ, ಈ ಮಳೆಯಾ, ಈ ಹಸಿರಾ, ಅಥವಾ ದೂರದಲ್ಲಿ ಕಾಣುವ ಬೆಟ್ಟಶ್ರೇಣಿಯಾ?
ಇಲ್ಲಾ, ಈ ಪವಿತ್ರ ನೀರಾ, ಆ ಮಂಜಿನ ಹನಿಯಾ, ಇಲ್ಲಾ ಮಂಜಿನ ಹನಿ ಬಿದ್ದ ಎಲೆಯಾ?
ಏನೂ ಅರಿಯದ ಮೂರ್ಖ ನಾನು, ನನಗೇನು ಗೊತ್ತು ಪ್ರಕೃತಿಗಿರೋ ತಾಖತ್ತು?
ಒಂದೆರಡು ದಿನಗಳಲ್ಲಿ ನನಗೀಗನ್ನಿಸಿದರೆ, ಇಪ್ಪತ್ತು ವರ್ಷಗಳಲ್ಲಿ, ಅವಳ ಮೇಲೆ ಏನಾಗಿರ ಬಹುದು, ಕರಾಮತ್ತು?
ಅವಳೊಂದು ನೇಸರದ ಶಿಶು, ಅವಳನ್ನ ತೀಡಿ ತೀಡಿ, ಕರುಣಾಳು ಆಗಿಸಿದ್ದಾ ಳೆ, ವಸುಂಧರೆ,
ಫಲಾನುಭವಿ, ನಾನು, ಬಂಧಿತನಾಗಿದ್ದರೂ ಸಹ, ಇಷ್ಟ, ನನಗೆ ಅವಳ ಒಲವಿನ ಸೆರೆ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.