ಎಸ್.ಎಸ್.ಎಲ್.ಸಿ/ಪಿ.ಯು ರಿಸಲ್ಟ್ ಮತ್ತು ಅತ್ಮಹತ್ಯೆಗಳು...

0

ಎಂದಿನಂತೆ ಈ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಫಲಿತಾಂಶಗಳು ಹೊರಬಿದ್ದಿವೆ. ವಿದ್ಯಾರ್ಥಿಗಳ ಮುಂದಿನ ಜೀವನದ ಬಾಗಿಲು ಸಹ ತೆರೆದಿದೆ. ಶಿಕ್ಷಕರ ಮುಷ್ಕರ, ಹೆಚ್ಚಿನ ಆನುದಾನದ ಬೇಡಿಕೆ, ಹೋರಾಟಗಳ ನಡುವೆಯೂ ಉತ್ತರಪತ್ರಿಕೆಗಳ ತಿದ್ದುವಿಕೆ ಕಾರ್ಯ ಬೇಗನೆ ಮುಗಿದು ನಿಗದಿಗಿಂತೆ ಮೊದಲೇ ಫಲಿತಾಂಶಗಳು ಹೊರಬಿದ್ದಿವೆ. ಇನ್ನೂ ಪಾಸಾದ ವಿದ್ಯಾರ್ಥಿಗಳ ಸಂಭ್ರಮ ಹೇಳತೀರದು. ಉತ್ತಮ ಕಾಲೇಜ್ ಗಳಲ್ಲಿ ಸೀಟಿಗಾಗಿ ಪ್ರಯತ್ನ, ಅದಕ್ಕಾಗಿ ಕಾಲೇಜ್ ಪ್ರಾಸ್ಪೇಕ್ಟಸ್ ನ ತರುವುದು ಎಲ್ಲಾ ನೆಡೆದೇ ಇದೆ. ಇದೆಲ್ಲದರ ನಡುವೆ ಕಡಿಮೆ ಅಂಕ ತಗೆದ ವಿದ್ಯಾರ್ಥಿಗಳು ರೀವ್ಯಾಲುವೇಷನ್, ರೀಟೋಟಲಿಂಗೆ ಸಹ ಅರ್ಜಿ ಗುಜರಾಯಿಸಿ ಆಗಿದೆ. ಕಾಡುವ ಪ್ರಶ್ನೆ ಯೆಂದರೆ ಫೇಲಾದ ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿರುವ ಅತ್ಮಹತ್ಯ ಅಥವ ಸುಸೈಡ್ ಪ್ರವೃತ್ತಿ...ಪಿ.ಯು / ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶಗಳು ಹೊರಬಂದ ಹಿಂದಿನ ದಿನದಿಂದಲೇ (ಇಂಟರ್ನೆಟ್ ಪ್ರಕಟಣೆ..) ಹೆಚ್ಚಿನ ವಿದ್ಯಾರ್ಥಿಗಳು ತಾವು "ಫೇಲಾದೆ"ವು ಎಂಬ ಒಂದೇ ಕಾರಣಕ್ಕೆ ಅತ್ಮಹತ್ಯೆಯ ಮೂಲಕ ಸಾವಿಗೆ ಶರಣಾಗಿದ್ದಾರೆ. "ಪರೀಕ್ಷೆಯಲ್ಲಿ ಫೇಲ್, ** ವಿದ್ಯಾರ್ಥಿಗಳ ಅತ್ಮಹತ್ಯೆ" ಎಂದು ಪತ್ರಿಕೆ/ಟಿ.ವಿ ಚಾನಲ್ ಗಳಲ್ಲಿ ಬರುವುದ ಕಂಡರೆ ಮನಕ್ಕೆ ದಿಗಿಲಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಪರೀಕ್ಷೆ ಬರೆದ ದಿನವೇ "ಪೇಪರ್ ಸರಿಯಾಗಿ ಬರೆದಿಲ್ಲ" ಎಂಬ "ಕ್ಷುಲಕ" ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡ ಘಟನೆಗಳು/ಸುದ್ಧಿ ಪರೀಕ್ಷೆ ನೆಡೆದ ಸಮಯದಲ್ಲಿ ಬಂದಿದ್ದವು. ಕೆಲವರು "ಹಾಲ್ ಟಿಕೆಟ್" ದೊರೆಯದ ಕಾರಣಕ್ಕೂ ಸಾವಿಗೆ ಶರಣಾದವರು ಇದ್ದಾರೆ...


 


ಬಹುಶ: ಇಂದಿನ ಜಗತ್ತಿನ "ಕಾಂಪೀಟಿಷನ್" ಯುಗಕ್ಕೋ, ಪೋಷಕರ "ಅಸೆಗಳ" ಭಾರದ ಒತ್ತಡಕ್ಕೋ, ಅಥವ ತಮ್ಮನ್ನೇ "ಉಹೆಗೆ ನಿಲುಕದಷ್ಟು" ಎತ್ತರಕ್ಕೆ ತಲುಪಿಸಿಕೊಳ್ಳುವ ಅಸೆಗೋ ಏನೋ, ಬಹುತೇಕ ವಿದ್ಯಾರ್ಥಿಗಳು ಒಂಬತ್ತನೆ ಕ್ಲಾಸ್ ಪಾಸಾಗುತ್ತಿದಂತೆ "ಜಗದ ಭಾರ" ವನ್ನ ತಮ್ಮ ಮೈಮೇಲೆ ಹೊತ್ತಿಕೊಂಡಿರುತ್ತಾರೆ. "ಸಾಧಿಸಿಯೇ ತೀರಿಸು...", "ಅವನನ್ನ/ಅವಳನ್ನ ಮೀರಿಸು...", "ಫಾಸ್ಟೇ ಬಾ.." ಗಳ ಹೊರೆ ಯಾವ ಕಾಲದವರೆಗೂ ತಾನೇ ಹೊರಬಲ್ಲರು...!. ಕೊನೆಗೆ "ಫಲಿತಾಂಶ" ಎಂಬ "ಪಾನ್ಡೋರಾ" ಪೆಟ್ಟಿಗೆ ತೆರೆದಾಗ, ನಿರೀಕ್ಷೆಯ ಸೌಧ ಕಳಚಿಬಿದ್ದು, ಮನ ನೊಂದು ಅಗುವ ಆನಾಹುತಗಳ ಸರಮಾಲೆ - ಈ ಅತ್ಮಹತ್ಯೆಗಳ ಪ್ರಕರಣ..


 


ಇಂಟರೆಸ್ಟಿಂಗ್ ಅಂದರೆ ನಮ್ಮ ದಕ್ಷಿಣ ಭಾರತದ ರಾಜ್ಯಗಳು ಈ "ಅತ್ಮಹತ್ಯ ಪ್ರಕರಣ" ಗಳ ಸಾಲಿನಲ್ಲಿ "ಬಹಳ" ಮುಂದಿವೆ..!! http://www.rediff.com/news/2004/apr/15spec.htm  ದಲ್ಲಿರುವ ಮಾಹಿತಿಯಂತೆ ಪ್ರತಿತಿಂಗಳು ೧೫ ಜನ ೧೫ ರಿಂದ ೨೫ ವರ್ಷದ ವಯೋಮಾನದವರು ಅತ್ಮಹತ್ಯೆ ಮಾಡಿಕೊಳ್ಳೂತ್ತಿದ್ದಾರೆ. ೨೦೦೨ ರ ಅಂಕಿಗಳಂತೆ ಕರ್ನಾಟಕವು ೧೦,೯೩೪ ಅತ್ಮಹತ್ಯ ಸಾವುಗಳನ್ನ ಕಂಡಿದೆ.. (ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಮೇಲಿನ ಲಿಂಕಿನಲ್ಲಿ ಓದಬಹುದು...)


 


ಇನ್ನೊಂದು ತಾಣ (http://www.maithrikochi.org/india_suicide_statistics.htm ) ದಲ್ಲಿ ಸೂಚಿಸಿರುವಂತೆ ವಿಶ್ವಕ್ಕೆ ಶೇಕಡ ೧೦% ಅತ್ಮಹತ್ಯ ಸಾವುಗಳ ಕೊಡುಗೆ ನಮ್ಮ ಭಾರತ ದೇಶದಿಂದೇ ಬರುತ್ತಿದೆ. ಅದು ಇನ್ನೂ ಹೆಚ್ಚಾಗಿ ೧೦.೫ ಪ್ರತಿಶತ ತಲುಪಿ (ಪ್ರತಿ ಲಕ್ಷ ಜನಸಂಖ್ಯೆಗೆ..) ೨೦೦೬ ರ ವರ್ಷ ಮತ್ತು ೧೯೮೦ ರ ವರ್ಷಕ್ಕೆ ತುಲನೆ ಮಾಡಿದರೆ ೬೭% ಪ್ರತಿಶತ ಏರಿಕೆಯಾಗಿದೆ... ನಿಜಕ್ಕೂ ಭಯಪಡುವ ಅಂಶವೆಂದರೆ ಇದು ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ...!!


 


ಸಮಾಜದ ಒತ್ತಡ, ಪೋಷಕರ ಒತ್ತಡ, "ನೆರೆಯವರ" ಒತ್ತಡ... ಒಂದೇ-ಎರಡೇ... ಎಲ್ಲಾ "ಒತ್ತಡ" ಗಳ ನಡುವೆ ಇಂದಿನ ಯುಗದಲ್ಲಿ ಬಾಳುತ್ತಿರುವ ವಿದ್ಯಾರ್ಥಿ/ಯುವ ಸಮೂಹ ತಮ್ಮ ಅಸೆ, ಕೋರಿಕೆಗಳ ರೆಕ್ಕೆ ಕತ್ತರಿಸಿಕೊಂಡು, ಪರರ "ಕನಸುಗಳ" ನೊಗವ ಬೆನ್ನ ಮೇಲೆ ಹೊತ್ತು... ತಮ್ಮ ದಾರಿಯ ಬಿಟ್ಟು ಇತರರ "ಕನಸಿನ" ಕತ್ತಲ ದಾರಿಯಲ್ಲಿ ನೆಡೆದುಹೋಗುತ್ತಿದ್ದಾರೆ. ಬಹುಶ: ಅವರ ಮನ ಎಷ್ಟು ನೊಂದಿರುತ್ತವೋ ಏನೋ.., ಕೊನೆಗೆ ಸಾವಿನ ಹೆಗಲ ಮೇಲೆ ತಲೆಯಿಟ್ಟು ಮಲಗಿ ಸಂತೋಷ ಪಟ್ಟುಬಿಡುತ್ತಾರೆ...


 


ಜೀವನ ಕೇವಲ "ಒಂದು ಪರೀಕ್ಷೆ" ಗೆ ಮಾತ್ರ ಸ್ತೀಮಿತವಲ್ಲಾ, ಮಾರ್ಕ್ಸ್ ಕಡಿಮೆ ಬಂದರೆ ಮತ್ತೆ ಪ್ರಯತ್ನಿಸಲು "ಸಪ್ಪ್ಲೀಮೆಂಟರಿ" ಪರೀಕ್ಷೆಗಳು ಇದ್ದರೂ, ತಮ್ಮನ್ನೂ ಇನ್ನೂ ಉತ್ತಮ ಪಡಿಸಿಕೊಳ್ಳಲು ಮಾರ್ಗವಿದ್ದರೂ ಸಹ ಜೀವನಕ್ಕೆ "ಕೊನೆಹಾಡುವ" ಕಾರ್ಯಗಳು ಮಾತ್ರ ಎಂದಿನಂತೆ ಸುದ್ದಿಮೂಲಗಳಲ್ಲಿ ವಿರಾಜಿಸುತ್ತಲೇ ಇವೆ...


 


ಇದೆಲ್ಲದರ ನಡುವೆ ಮನವು "ಥ್ರೀ ಈಡಿಯಟ್ಸ್" ಚಿತ್ರದ ಹಾಡನ್ನು ನೆನೆದು ಕೊರಗುತ್ತದೆ:


 


ಸಾರಿ ಊಮ್ರ್ ಹಮ್,
ಮರ್ ಮರ್ ಕೆ ಜೀ ಲಿಯೆ..
ಎಕ್ ಪಲ್ ತೊ ಅಬ್ ಹಮೇ
ಜೀನೇ ದೋ ಜೀನೇ ದೋ..


 


Give me some Sunshine
give me some rain
Give me another chance
wana grow up once again


 


ವಿದ್ಯಾರ್ಥಿಗಳ/ಯುವ ಮನಸ್ಸಿನಲ್ಲಿ ಮೂಡಿಬರುವ ನೋವು, ದುಗುಡಗಳು ಶಮನವಾಗಿ, ಅವರಿಗೆ ಭವಿಷ್ಯದಲ್ಲಿ ಉತ್ತಮ ಫಲಗಳು ಸಿಕ್ಕಿ, ಅವರ ಎಲ್ಲಾ ಕನಸುಗಳು ಸಾಕರವಾಗುವ ದಿನಗಳು ಮುಂದೆ ಬಂದೇ ಬರುತ್ತವೆ ಎಂಬ ಆಶಯ, ಪೋಷಕರು ಸಹ ತಮ್ಮ "ಕನಸುಗಳ" ಒತ್ತಡವನ್ನು ತಮ್ಮ ಮಕ್ಕಳ ಮೇಲೆ ಹೇರದೆ ಅವರ ಕನಸಿಗೂ ಬೆಲೆ ಕೊಟ್ಟು ಮುಂದಿನ ಉತ್ತಮ-ಸ್ವಾಸ್ಥ ಜನಾಂಗಕ್ಕೆ ಮಾದರಿಯಾಗುವರು ಎಂಬ ಸಣ್ಣ ಬಯಕೆಯೊಂದಿಗೆ ಈ ಲೇಖನ..

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೇಳಿದ ಸಂಭಾಷಣೆ 'ನಿಮ್ಮ ಮಗಳ ರಿಸಲ್ಟ್ ಏನಾಯಿತು?' 'ನೋಡ್ರಿ ಬೆಳಗಿನಿಂದ ಸಮಾದಾನ ಹೇಳಿ ಸುಸ್ತಾಯ್ತು ಅವಳು ಅಳು ನಿಲ್ಲಿಸ್ತಲೆ ಇಲ್ಲ |" 'ಏಕಂತೆ ಎಷ್ಟು ಬಂದಿದೆ ಮಾರ್ಕ್ಸ್ ?" "ಒಟ್ಟು 97.2 ಪರ್ಸೇಂಟ್ ಬಂದಿದೆ, ಮಾತ್ಸ್, ಸೈನ್ಸ್ ನೂರಕ್ಕೆ ನೂರು ತೆಗೆದಿದ್ದಾಳೆ, ಆದರೆ ಸೊಶಿಯಲ್ 93 ಬಂದಿದೆ ಅವಳು 98 ಎಕ್ಸ್ಪೆಟ್ ಮಾಡಿದ್ದಳಂತೆ, ಅದಕ್ಕೆ ಅದನ್ನು ರೀವಾಲ್ಯುಯೆಷನ್ ಗೆ ಹಾಕು ಅಂತಿದ್ದಾರೆ ನಮ್ಮವರು" -----
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ಪಾರ್ಥಸಾರಥಿ ಯವರೆ, ಬೆಟ್ಟದ ತುತ್ತತುದಿ ತಲುಪಿದ ಮೇಲೆ ಮೋಡವನ್ನ ಹಿಡಿಯುವ ಬಯಕೆಯಾದಂತೆ ಇವರ ಪ್ರಯತ್ನ....!!! :) -- ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸ೦ದರ್ಭೋಚಿತ ಲೇಖನ ವಿನಯ್, ಅತಿಯಾದ ನಿರೀಕ್ಷೆಗಳ ಒತ್ತಡದಲ್ಲಿ ನಡೆಯುವುದೆತ್ತ ಎ೦ದು ತಿಳಿಯದೆ ಅಮೂಲ್ಯ ಜೀವಗಳು ಆತ್ಮಹತ್ಯೆಯಲ್ಲಿ ಕೊನೆಯಾಗುತ್ತಿವೆ. ಇದನ್ನು ತಡೆಯುವಲ್ಲಿ ಪಾಲಕರ ಪಾತ್ರ ಬಹು ಮುಖ್ಯವಾಗುತ್ತದೆ. ನನ್ನ ಮಗಳು ಎಸ್.ಎಸ್.ಎಲ್.ಸಿ.ಯಲ್ಲಿ ೯೩% ಅ೦ಕ ತೆಗೆದುಕೊ೦ಡಿದ್ದಳು, ಆದರೆ ಮಗ ಈ ಬಾರಿ ಸಾಧಾರಣ ಅ೦ಕ ಗಳಿಸಿದ್ದಾನೆ! ಆದರೆ ನಮಗೆ ಅವನು ರ್ಯಾ೦ಕ್ ಬ೦ದಷ್ಟೇ ಖುಷಿಯಾಗಿದೆ. ಅವನ ಮೇಲೆ ಯಾವುದೇ ಒತ್ತಡ ಹೇರಿರಲಿಲ್ಲ, ಮು೦ದಿನ ದಾರಿಯೂ ಅವನಿಚ್ಚೆಯ೦ತೆಯೇ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನವನ್ನ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ಮಂಜುನಾಥ್ ರವರೆ, ಹೌದು, ನೀವು ಹೇಳಿದ್ದು ನಿಜ, ನಾವು ಬದುಕಬೇಕೆಂದರೆ ವಿದ್ಯೆ ಅವಶ್ಯಕತೆ ಹೊರತು ನಾವು ತಗೆದ ಫಸ್ಟ್ ಕ್ಲಾಸ್ ಗಳೆಲ್ಲ... ನನ್ನ ಅನುಭವದಂತೆ ನನ್ನ ಅನೇಕ ಮಿತ್ರರು ಅಂದು ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನ ತಗೆದಿದ್ದರೂ ಇಂದು ತಮ್ಮ ಪರಿಶ್ರಮದಿಂದಲೇ ಉನ್ನತ ಮಟ್ಟಕೇರಿದ್ದಾರೆ. ನಿಮ್ಮ ಮಗನ ಸಂತೋಷದಲ್ಲಿ ನೀವು ಭಾಗಿಯಾಗಿರುವುದು, ಒತ್ತಡ ಹೇರದೆ ಅವನ ಭವಿಷ್ಯದ ನಿರ್ಧಾರವನ್ನ ಅವನ ಕೈಗೆ ಬಿಟ್ಟಿರುವುದು ನಿಜಕ್ಕೂ ಸಂತಸದ ವಿಷಯವೇ ಸರಿ.. :) ನಿಮ್ಮ ಮಗನಿಗೆ ಶುಭ ಕೋರುವೆ.. :) -- ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.