ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !

3.666665

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ

ಉಡುಗಿದ್ದು ಆರ್ಥಿಕ ವ್ಯವಸ್ಥೆಯ ನಿತಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎದ್ದು ತೋರಿದ್ದು ಕ್ರೂರತನದ ಬಿಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ನಿಜದಿ ಭಂಗವಾಗಿದ್ದು ಹಲವರ ಜಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎಣೆಯಿಲ್ಲದೆ ಮುರಿದಿದ್ದು ಆಧಾರ ಸ್ಥಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಬೀದಿ ಕಂಡಿದ್ದು ಹಲವು ಕುಟುಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಇಂದಿಗೂ ಹೊತ್ತಿರಿಯುತಿದೆ ಅದರ ಪ್ರತಿಬಿಂಬಗಳು

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಲ್ಲೇಜಿ, ವಿಪರ್ಯಾಸ ನೋಡಿ ಅದೇ ಸೆಪ್ಟಂಬರ್ ೧೨ರಂದು ಸ್ವಾಮೀಜಿ ಅಮೇರಿಕಾದಲ್ಲಿ ತಮ್ಮ ಮಾತಿನ ಮೂಲಕ ವಿಶ್ವವನ್ನೇ ಗೆದ್ದರು, ಯಾವುದೇ ಜೀವ ಹಾನಿ ಮಾಡದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ಶ್ರೀಧರರೇ ಒಬ್ಬರು ಸಂಬಂಧವಿಲ್ಲದವರನ್ನು "ಸೋದರ, ಸೋದರಿ" ಎಂದು ಸಂಬೋಧಿಸಿ ಖ್ಯಾತರಾದರು ಮತ್ತೊಬ್ಬರು ಒಂದು ರೀತ್ಯಾ ಸೋದರ ಸೋದರಿಯರ ಜೀವನಕ್ಕೇ ಬೆಂಕಿಯಿಟ್ಟು ಕುಖ್ಯಾತರಾದರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವನ ಸಕಾಲಿಕ .. ಭಲ್ಲೆ ಅವರೇ ಸೆಪ್ಟಂಬರ್ ಬಂದರೆ ನೆನಪಾಗೋದು -ಅಮೇರಿಕ ಧಾಳಿ ಮುಂಬೈ ಧಾಳಿ ...;((( ಅಂದು ಎರಡು ಕಡೆ ಆದ ಸಾವು ನೋವು -ಅದರ ಜಾಗತಿಕ ಪರಿಣಾಮ - ಆರ್ಥಿಕ ಹಿಂಜರಿತ -ಯುದ್ಧ-ಫಲಿತಾಂಶ ಎಲ್ಲವೂ ;(((( ಮುಂದೆಂದೂ ಈ ರೀತಿ ಆಗದಿರಲಿ ಎಂಬ ಆಶಯ ಶುಭವಾಗಲಿ \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿವಾಸಿಗಳೇ ಸತ್ಯ ... ಮುಂದೆ ಎಂದೆಂದೂ ಹೀಗೆ ಆಗದಿರಲಿ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.