ಈ ಪದಗಳಿಗೆ

0


ನೀನಿಲ್ಲದೆ ಬರಿದಾದೆ ನಾನು
ಈ ಖಾಲಿ ಬಟ್ಟಲ ತುಂಬಲು
ಗೀಚಿದೆ ನಾ, ಈ ಕವಿತೆ
ಕವಿತೆಯ ತುಂಬೆಲ್ಲ ನೀನೆ ತುಂಬಿರುವೆ
ಭಾವದ ತುಂಬೆಲ್ಲ ನೀನೆ ಹರಡಿರುವೆ
 
ಬರಡಾದ ಈ ನೆಲದ
ತುಂಬೆಲ್ಲ ನೀ ಹೂಳಿದ ನೇಗಿಲೆ  
ಭಾರವಾದ ಈ ಮೋಡದ 
ತುಂಬೆಲ್ಲ ನಿನ್ನ ಕಣ್ಣ ಹನಿಗಳೇ
ಈ ಬರಡು ನೆಲವ ಹೂಳಲು 
ಭಾರ ಮೋಡವ ಸೀಳಲು   
ಇರುವುದು ಬರೀ ಈ ಪದಗಳೇ
 
ಮೌನವೇ ಸಾಲುಗಳಾಗಿ ಮೂಡುತಿವೆ
ಏಕಾಂತವೆ ಪದಗಳಾಗಿ ಕೂಡುತಿವೆ
ಈ ಸಾಲುಗಳ ತಡವಿ ನೋಡುವೆ
ಪದಗಳ ಕೆದಕಿ ನೋಡುವೆ
ನೀನು ಕಂಡರೂ ಕಾಣಬಹುದು
 
ನಾನು ಕವಿಯಾದರೆ ನೀನೆ ಕವಿತೆ
ನಾನು ಚಿತ್ರಗಾರನಾದರೆ ನೀನೆ ಚಿತ್ರ
ನಿನ್ನ ಹಿರಿಮೆಯ ಹೇಗೆ ಹೇಳಲಿ
ಈ ಪದಗಳಿಗೆ ಆ ಶಕ್ತಿ ಸಾಲದು
 - ಬುರುಡೆದಾಸ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.