ಆರ್ಯರು

ಭಾಗ - ೧೦ ಮನುವಿನ ಧರ್ಮ: ಡಾ. ಅಂಬೇಡ್ಕರರ ಮಾತುಗಳು

         ಮಾನವರೆಲ್ಲರೂ ಸಮಾನರು.
         ಇದು ಆದರ್ಶ!
         ಯಾರು ಏನೇ ಹೇಳಿದರೂ ಮಾನವರೆಲ್ಲರೂ ಸಮನಾಗಿಲ್ಲ. 
         ಇದು ವಾಸ್ತವ!
        ಸರ್ವಮಾನವ ಸಮಾನತ್ವವನ್ನು ಸಾಧಿಸಿ, ಸಮಸಮಾಜವನ್ನು ಸ್ಥಾಪಿಸಿ ಸಮತಾವಾದದ ಸ್ವರ್ಗವನ್ನು ಭೂಮಿಯ ಮೇಲೆ ತರುತ್ತೇವೆಂದು ಹೇಳಿ ಹಲವು ತಲೆಮಾರುಗಳ ಜನರಿಗೆ ಮಂಕುಬೂದಿ ಎರಚಿದ ಕಮ್ಯೂನಿಷ್ಟ್ ಪಕ್ಷಗಳಲ್ಲೇ ಸಮಾನತೆ ಇಲ್ಲ. ಆ ಸಿದ್ಧಾಂತವು ಪ್ರಪಂಚದಲ್ಲಿ ಬದುಕಿರುವಷ್ಟು ಕಾಲ ಕಮ್ಯೂನಿಷ್ಟ್ ರಾಜ್ಯಗಳಲ್ಲಿನ ಪಕ್ಷದ ನೇತಾರರಿಗೆ, ಪಕ್ಷ ಮತ್ತು ಸರ್ಕಾರಗಳಲ್ಲಿ ಪ್ರಭಾವವಿರುವ ವ್ಯಕ್ತಿಗಳಿಗೆ ಇರುವ ವಿಶೇಷವಾದ ಸೌಲಭ್ಯ, ಸೌಭಾಗ್ಯಗಳು ಪಕ್ಷದ ಸಾಮಾನ್ಯ ಸದಸ್ಯರಿಗೆ, ಕಾರ್ಯಕರ್ತರಿಗೆ ಮತ್ತು ಸಾಧಾರಣ ಪ್ರಜೆಗಳಿಗೆ ಎಂದಿಗೂ ದಕ್ಕದು, ಹಿಂದೆಯೂ ದಕ್ಕಿರಲಿಲ್ಲ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಭಾಗ ೧೪ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಆರ್ಯರು ಬಂದರಾ? ಭಾರತೀಯರು ಹೋದರಾ?"

            ಭಾರತೀಯ ಜನಾಂಗವು ಅನಾದಿಕಾಲದಿಂದಲೂ ಭರತ ಖಂಡದಲ್ಲಿ ಜೀವನವನ್ನು ಸಾಗಿಸುತ್ತಿದೆ. ಹೀಗೆಂದು ವೇದಗಳು, ಪುರಾಣೇತಿಹಾಸಗಳು ಸಾರಿವೆ. ಆದರೆ ಭಾರತೀಯ ಜನಾಂಗವು ಬೇರೆ ಪ್ರಾಂತಗಳಿಂದ ಭರತ ಖಂಡಕ್ಕೆ ವಲಸೆ ಬಂದರೆಂದೂ, ಈ ಪ್ರದೇಶದೊಳಗೆ ದುರಾಕ್ರಮಣದಿಂದ ನುಸುಳಿ ದುರಾಕ್ರಮಣ ಮಾಡಿದರೆಂದೂ, ಬ್ರಿಟಿಷರು ಹೇಳಿ ಹೋಗಿದ್ದಾರೆ, ಆದರೆ ಎಷ್ಟು ಶತಮಾನಗಳ ಅಥವಾ  ಎಷ್ಟು ಸಹಸ್ರ ವರ್ಷಗಳ ಕೆಳಗೆ ಹೀಗೆ ವಲಸೆ ಬಂದರು ಎನ್ನುವುದನ್ನು ಮಾತ್ರ ಹೇಳಲಾರದೇ ಹೋದರು! ಬ್ರಿಟಿಷ್ ಇತಿಹಾಸಕಾರರ ಪ್ರಕಾರ ಹೊರಗಿನಿಂದ ಬಂದು ಈ ನೆಲದ ಮೂಲನಿವಾಸಗಳ ಮೇಲೆ ದುರಾಕ್ರಮಣ ಮಾಡಿದವರು "ಆರ್ಯರು!" ಅವರು ಅಲ್ಲಿಯವರೆಗೂ ಇದ್ದ ಸಿಂಧೂ ಕಣಿವೆ ನಾಗರೀಕತೆಯನ್ನು ಹಾಳುಗೆಡವಿ ಹೊಸ ನಾಗರೀಕತೆಯನ್ನು ನೆಲೆಗೊಳಿಸಿದರಂತೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
Subscribe to ಆರ್ಯರು